ಶಾಯಿದ್ ಅಫ್ರಿದಿ ಭಾರತ ವಿರೋಧಿ ಹೇಳಿಕೆಗೆ ಜಾವೇದ್ ಅಖ್ತರ್ ಪ್ರತಿಕ್ರಿಯೆ
ನವದೆಹಲಿ: ಪಾಕಿಸ್ತಾನದ ಕ್ರಿಕೆಟ್ ತಂಡದ ಮಾಜಿ ನಾಯಕ ಶಾಯಿದ್ ಅಫ್ರಿದಿ ಇಸ್ಲಾಮಾಬಾದ್ ನಲ್ಲಿ ನಿನ್ನೆ ಭಾರತ ವಿರೋಧಿ ಹೇಳಿಕೆ ನೀಡಿದ್ದಾರೆ. ಇತ್ತೀಚಿಗೆ ಭದ್ರತಾ ಪಡೆಗಳು ಉಗ್ರರನ್ನು ಹತ್ಯೆಗೈದ ನಂತರ ಭಾರತ ಆಕ್ರಮಿತ ಕಾಶ್ಮೀರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ನೋಡಲಾಗದಂತಹ , ಯುದ್ದದ ಪರಿಸ್ಥಿತಿ ಸೃಷ್ಠಿಯಾಗಿದೆ ಎಂದು ಹೇಳಿದ್ದಾರೆ.
ಭಾರತ ಆಕ್ರಮಿತ ಕಾಶ್ಮೀರದಲ್ಲಿ ನೋಡಲಾಗದಂತಹ , ಕಾದಾಡುವ ಪರಿಸ್ಥಿತಿ ಮುಂದುವರೆದಿದೆ. ದಬ್ಬಾಳಿಕೆಯಿಂದ ಹಲವು ಮುಗ್ದರ ಪ್ರಾಣ ಬಲಿಯಾಗುತ್ತಿದ್ದು,
ಸ್ವಾತಂತ್ರ್ಯ ಮತ್ತು ಸ್ವಯಂ ನಿರ್ಣಯ ಧ್ವನಿಯನ್ನು ನಿರ್ಬಂಧಿಸಲಾಗಿದೆ. ಆಶ್ಚರ್ಯವಾಗುತ್ತಿದೆ ಏಲ್ಲಿ ವಿಶ್ವಸಂಸ್ಥೆ ಮತ್ತಿತರ ಅಂತಾರಾಷ್ಟ್ರೀಯ ಸಂಸ್ಥೆಗಳು, ಇಂತಹ ರಕ್ತಪಾತವನ್ನು ಏಕೆ ಅವರು ನಿಲ್ಲಿಸಲು ಪ್ರಯತ್ನಿಸುತ್ತಿಲ್ಲ ಎಂದು ಅಫ್ರಿದಿ ಟ್ವೀಟ್ ಮಾಡಿದ್ದಾರೆ.
ಈ ಟ್ವೀಟ್ ಗೆ ಖ್ಯಾತ ಲೇಖಕ, ಬಾಲಿವುಡ್ ಸಾಹಿತಿ ಜಾವೇದ್ ಆಕ್ತರ್ ಪ್ರತಿಕ್ರಿಯೆ ನೀಡಿದ್ದು, ಕಾಶ್ಮೀರದಲ್ಲಿ ಮಾನವ ಹಕ್ಕು ಉಲ್ಲಂಘನೆ ಬಗ್ಗೆ ಅಘಾತಗೊಂಡಿದ್ದರೆ, ಮೊದಲು ಪಾಕಿಸ್ತಾನದ ಮೂಲಕ ಉಗ್ರರು ಭಾರತದೊಳಗೆ ನುಸುಳುವುದನ್ನು ನಿಲ್ಲಿಸಲಿ. ತರಬೇತಿ ಪ್ರತ್ಯೇಕತಾವಾದಿಗಳಿಗೆ ಬೆಂಬಲ ನೀಡುವುದನ್ನು ಪಾಕಿಸಾನ ಸೇನೆ ತಡಗೆಟ್ಟಲಿ ಎಂದಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ