ರಾಜ್ಯ ಸಚಿವ ಸ್ಥಾನ ದೊರೆತ ಹಿನ್ನೆಲೆ, ಮ.ಪ್ರ. ಸರ್ಕಾರದ ವಿರುದ್ಧ ಯಾತ್ರೆಯನ್ನು ರದ್ದುಪಡಿಸಿದ ಸಂತರು

ಮಧ್ಯಪ್ರದೇಶ ಸರ್ಕಾರವು ನರ್ಮಾದಾ ಸಂರಕ್ಷಣೆಯ ವಿಚಾರದಲ್ಲಿ ನಿರ್ಲಕ್ಷ ತಾಳಿದೆ ಎಂದು ಆರೋಪಿಸಿ ಧಾರ್ಮಿಕ ಮುಖಂಡರು ಆಯೋಜಿಸಲಿದ್ದ ತಮ್ಮ ಉದ್ದೇಶಿತ ಪ್ರಚಾರವನ್ನು ರದ್ದು ಮಾಡಿದ್ದಾರೆ.
ಕಂಪ್ಯೂಟರ್ ಬಾಬಾ
ಕಂಪ್ಯೂಟರ್ ಬಾಬಾ
ಭೋಪಾಲ್: ಮಧ್ಯಪ್ರದೇಶ ಸರ್ಕಾರವು ನರ್ಮಾದಾ ಸಂರಕ್ಷಣೆಯ ವಿಚಾರದಲ್ಲಿ ನಿರ್ಲಕ್ಷ ತಾಳಿದೆ ಎಂದು ಆರೋಪಿಸಿ ಧಾರ್ಮಿಕ ಮುಖಂಡರು ಆಯೋಜಿಸಲಿದ್ದ ತಮ್ಮ ಉದ್ದೇಶಿತ  ಪ್ರಚಾರವನ್ನು ರದ್ದು ಮಾಡಿದ್ದಾರೆ. ರಾಜ್ಯ ಸರ್ಕಾರ ನದಿ ಸುರಕ್ಷತೆ ಸಂಬಂಧ ಐವರು ಧಾರ್ಮಿಕ ನಾಯಕರನ್ನೊಳಗೊಂಡ ಸಮಿತಿ ರಚಿಸಿದ್ದಲ್ಲದೆ ಅವರಿಗೆ ರಾಜ್ಯ ಸಚಿವ ಸ್ಥಾನಮಾನ ನೀಡಿ ಆದೇಶಿಸಿತ್ತು. 
ನರ್ಮದಾನಂದ ಮಹಾರಾಜ್, ಹರಿಹರಾನಂದ ಮಹಾರಾಜ್, ಕಂಪ್ಯೂಟರ್ ಬಾಬಾ, ಭಾಯಿ ಮಹಾರಾಜ್ ಮತ್ತು ಪಂಡಿತ್ ಯೋಗೇಂದ್ರ ಮಹಂತ್. ಅವರುಗಳಿಗೆ ರಾಜ್ಯ ಸಚವ ಸ್ಥಾನ ನೀಡಿರುವುದಾಗಿ ಮಧ್ಯಪ್ರದೇಶ ಸರ್ಕಾರ ಆದೇಶಿಸಿತ್ತು. ಮಾರ್ಚ್ 31 ರಂದು ನರ್ಮದಾ ನದಿ ಸಂರಕ್ಷಣೆಗಾಗಿ ಐದು ಧಾರ್ಮಿಕ ಮುಖಂಡರ ಸಮಿತಿಗೆ ಇವರನ್ನು ಮೇಮಕ ಮಾಡಲಾಗಿತ್ತು.
ನದಿ ದಂಡೆಯಲ್ಲಿ ಸಸಿ ನೆಡುವ ಕಾರ್ಯಕ್ರಮದ ಪ್ರಗತಿ, ಅಕ್ರಮ ಮರಳು ಗಣಿಗಾರಿಕೆಗೆ ನಿಷೇಧ ಬೇಡಿಕೆ. ಮುಂದಿಟ್ಟುಕೊಂಡು ಕಂಪ್ಯೂಟರ್ ಬಾಬಾ ಹಾಗೂ ಯೋಗೇಂದ್ರ ಮಹಂತ್ ಏಪ್ರಿಲ್ 1 ರಿಂದ ಮೇ 15 ರವರೆಗೆ ನದಿ ದಂಡೆಯಲ್ಲಿರುವ ಪ್ರತಿ ಜಿಲ್ಲೆಗೆ ತೆರಳಿ 'ನರ್ಮಾದಾ ಘೋತಲ ರಥ ಯಾತ್ರೆ ನಡೆಸಲು ಉದ್ದೇಶಿಸಿದ್ದರು.
ಈ ಅಭಿಯಾನದ ವಿಚಾರವು ಸಾಮಾಜಿಕ ತಾಣದಲ್ಲಿ ವ್ಯಾಪಕ ಪ್ರಚಾರ ಗಿಟ್ಟಿಸಿತ್ತು. 
ನರ್ಮದಾ ನದಿಯ ರಕ್ಷಣೆಗಾಗಿ ಸಂತರು ಹಾಗೂ ಧಾರ್ಮಿಕ ಮುಖಂಡರ ಸಮಿತಿಯನ್ನು ರೂಪಿಸಲು ರಾಜ್ಯ ಸರ್ಕಾರ ಒಪ್ಪಿದೆ. ಈ ಮೂಲಕ ಅದು ತಮ್ಮ ಬೇಡಿಕೆಯನ್ನು ಪೂರೈಸಿದೆ ಹೀಗಾಗಿ ನಾವು ಉದ್ದೇಶಿತ ಯಾತ್ರೆಯನ್ನು ರದ್ದುಗೊಳಿಸುತ್ತಿದ್ದೇವೆ ಎಂದು ಕಂಪ್ಯೂಟರ್ ಬಾಬಾ ಹೇಳಿದ್ದಾರೆ.
"ಸರ್ಕಾರಿ ಅಧಿಕಾರಿಗಳ ಸ್ಥಾನಮಾನ, ಸೌಲಭ್ಯದ ಹೊರತಾಗಿ ನಾವು ನರ್ಮದಾ ರಕ್ಷಣೆಗಾಗಿ ಹೇಗೆ ಕೆಲಸ ಮಾಡಲು ಸಾಧ್ಯ? ಸಮಿತಿಯ ಸದಸ್ಯರಾಗಿ ನಾವು ಜಿಲ್ಲೆಯ ಕಲೆಕ್ಟರ್ ಗಳೊಡನೆ ನಾವು ಮಾತನಾಡಬೇಕು. ನದಿಯ ಸಂರಕ್ಷಣೆಗೆ ಅಗತ್ಯವಾದ ಇತರ ವ್ಯವಸ್ಥೆಗಳನ್ನು ನೋಡಿಕೊಳ್ಳಬೇಕು, ಈ ಕಾರ್ಯಗಳಿಗಾಗಿ ಸರಕಾರಿ ಸ್ಥಾನಮಾನ ಬೇಕಾಗುತ್ತದೆ" ಕಂಪ್ಯೂಟರ್ ಬಾಬಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com