ಕಂಪ್ಯೂಟರ್ ಬಾಬಾ ಸೇರಿ ಐವರು ಸಂತರಿಗೆ ರಾಜ್ಯ ಸಚಿವ ಸ್ಥಾನ: ಮಧ್ಯಪ್ರದೇಶ ಸರ್ಕಾರ ಆದೇಶ

ಈ ವರ್ಷಾಂತಕ್ಕೆ ವಿಧಾನಸಭೆ ಚುನಾವಣೆ ಎದುರಿಸುತ್ತಿರುವ ಮಧ್ಯ ಪ್ರದೇಶ ಸರ್ಕಾರ ಐವರು ಹಿಂದೂ ಧಾರ್ಮಿಕ ಮುಖಂಡರನ್ನು ರಾಜ್ಯ ಸಚಿವರನ್ನಾಗಿ ನೇಮಿಸಿ ಆದೇಶಿಸಿದೆ.
ಕಂಪ್ಯೂಟರ್ ಬಾಬಾ
ಕಂಪ್ಯೂಟರ್ ಬಾಬಾ
ಭೂಪಾಲ್: ಈ ವರ್ಷಾಂತಕ್ಕೆ ವಿಧಾನಸಭೆ ಚುನಾವಣೆ ಎದುರಿಸುತ್ತಿರುವ ಮಧ್ಯ ಪ್ರದೇಶ ಸರ್ಕಾರ ಐವರು ಹಿಂದೂ ಧಾರ್ಮಿಕ ಮುಖಂಡರನ್ನು ರಾಜ್ಯ ಸಚಿವರನ್ನಾಗಿ ನೇಮಿಸಿ ಆದೇಶಿಸಿದೆ. ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಸರ್ಕಾರದ ಈ ಆದೇಶವನ್ನು ವಿರೋಧ ಪಕ್ಷ ಕಾಂಗ್ರೆಸ್ ಬಲವಾಗಿ ಖಂಡಿಸಿದೆ.
ನರ್ಮದಾನಂದ ಮಹಾರಾಜ್, ಹರಿಹರಾನಂದ ಮಹಾರಾಜ್, ಕಂಪ್ಯೂಟರ್ ಬಾಬಾ, ಭಾಯಿ ಮಹಾರಾಜ್ ಮತ್ತು ಪಂಡಿತ್ ಯೋಗೇಂದ್ರ ಮಹಂತ್. ಅವರುಗಳಿಗೆ ರಾಜ್ಯ ಸಚವ ಸ್ಥಾನ ನೀಡಿರುವುದಾಗಿ ಜನರಲ್ ಅಡ್ಮಿನಿಸ್ಟ್ರೇಶನ್ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಕೆ.ಕೆ. ಕಟಿಯಾ ಹೊರಡಿಸಿದ ಆದೇಶದಲ್ಲಿ ಹೇಳಲಾಗಿದೆ.
ನರ್ಮದಾ ನದಿಯ ಸಂರಕ್ಷಣೆಗಾಗಿ ಮಾ.31ರಂದು ರಚಿಸಲಾದ ಸಮಿತಿಗೆ ಈ ಐದು ಧಾರ್ಮಿಕ ಮುಖಂಡರನ್ನು ನೇಮಕ ಮಾಡಲಾಗಿತ್ತು. ಸಮಿತಿಯ ಸದಸ್ಯರಾದ ಇವರಿಗೆ ರಾಜ್ಯ ಸಚಿವರ ಸ್ಥಾನಮಾನ ನಿಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ವರ್ಷಾಂತ್ಯದಲ್ಲಿ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಈ ಹಿಂದೂ ಧಾರ್ಮಿಕ ಮುಖಂಡರನ್ನು ರಾಜ್ಯ ಸಚಿವರನ್ನಾಗಿಸುವ ಮೂಲಕ ಸಮಾಜದ ಜನರ ಮೇಲೆ ಪ್ರಭಾವ ಬೀರ ಹೊರಟಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
"ಇದೊಂದು ರಾಜಕೀಯದ ಗಿಮಿಕ್, ಮುಖ್ಯಮಂತ್ರಿಗಳು ತಮ್ಮ ಪಾಪಗಳನ್ನು ತೊಳೆದುಕೊಳ್ಳಲು ಇದರ ಮೂಲಕ ಪ್ರಯತ್ನಿಸಿದ್ದಾರೆ. ಅವರು ನರ್ಮದಾ ನದಿ ಸಂರಕ್ಷಣೆಯನ್ನು ಕಡೆಗಣಿಸಿದ್ದಾರೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿರುವಂತೆ ಅವರು ನದಿ ದಂಡೆಯ ಮೇಲೆ  ಆರು ಕೋಟಿ ಸಸಿಗಳನ್ನು ಎಲ್ಲಿ ನೆಟ್ಟಿರುವರೆಂದು ಈ ಸಂತರು ಪರಿಶೀಲಿಸಬೇಕು ಎಂದು ಕಾಂಗ್ರೆಸ್ ವಕ್ತಾರ ಪಂಕಜ್ ಚತುರ್ವೇದಿ ಹೇಳಿದರು..
ಇದೇ ವೇಳೆ ಬಿಜೆಪಿ ವಕ್ತಾರ ರಜನೀಶ್ ಅಗರ್ವಾಲ್ ಮಾತನಾಡಿ ವಿರೋಧ ಪಕ್ಷದವರು ಸಂತರನ್ನು ಎಂದಿಗೂ ವಿರೋಧಿಸುತ್ತಾರೆ ಎಂದರು.
ಎಂಪಿ ಸರ್ಕಾರಕ್ಕೆ 'ಕಂಪ್ಯೂಟರ್ ಬಾಬಾ' ಕೃತಜ್ಞತೆ
ತಮ್ಮನ್ನು ರಾಜ್ಯ ಸಚಿವರನ್ನಾಗಿ ನೇಮಕ ಮಾಡಿದ್ದ ಮಧ್ಯ ಪ್ರದೇಶ ಸರ್ಕಾರಕ್ಕೆ ಕಂಪ್ಯೂಟರ್ ಬಾಬಾ ಧನ್ಯವಾದ ಹೇಳಿದ್ದಾರೆ."ನಮ್ಮನ್ನು ನಂಬಿದುದಕ್ಕಾಗಿ ಸಂತ ಪರಿವಾರದ ಪರವಾಗಿ ನಾವು ಸರ್ಕಾರಕ್ಕೆ ಧನ್ಯವಾದ ಸಲ್ಲಿಸುತ್ತೇವೆ.ಸಮಾಜದ ಕಲ್ಯಾಣಕ್ಕಾಗಿ ನಾವು ಕೆಲಸ ಮಾಡಲು ಪ್ರಯತ್ನಿಸುತ್ತೇವೆ "ಎಂದು ಕಂಪ್ಯೂಟರ್ ಬಾಬಾ ಎ ಎನ್ ಐ ಗೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com