ರಾಜಸ್ಥಾನ: ಅರ್ಧಕ್ಕೂ ಹೆಚ್ಚು ಬಿಎಸ್ಎಫ್ ಪೋಸ್ಟ್ ಗಳು ಕೊಳವೆ ನೀರು ಸರಬರಾಜು ವಂಚಿತ
ರಾಜಸ್ಥಾನದಲ್ಲಿರುವ ಬಿಎಸ್ಎಫ್ ಪೋಸ್ಟ್ ಗಳ ಪೈಕಿ ಅರ್ಧಕ್ಕೂ ಹೆಚ್ಚಿನ ಸಂಖ್ಯೆಗಳ ಪೋಸ್ಟ್ ಗಳಿಗೆ ಕೊಳವೆ ನೀರು ಸರಬರಾಜು ಇಲ್ಲ ಎಂದು ಕೇಂದ್ರ ಸರ್ಕಾರ ಏ.03 ರಂದು ಸಂಸತ್ ಗೆ ಮಾಹಿತಿ ನೀಡಿದೆ.
ರಾಜಸ್ಥಾನದಲ್ಲಿರುವ ಬಿಎಸ್ಎಫ್ ಪೋಸ್ಟ್ ಗಳ ಪೈಕಿ ಅರ್ಧಕ್ಕೂ ಹೆಚ್ಚಿನ ಸಂಖ್ಯೆಗಳ ಪೋಸ್ಟ್ ಗಳಿಗೆ ಕೊಳವೆ ನೀರು ಸರಬರಾಜು ಇಲ್ಲ ಎಂದು ಕೇಂದ್ರ ಸರ್ಕಾರ ಏ.03 ರಂದು ಸಂಸತ್ ಗೆ ಮಾಹಿತಿ ನೀಡಿದೆ.
ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಈ ಬಗ್ಗೆ ಲೋಕಸಭೆಗೆ ಮಾಹಿತಿ ನೀಡಿದ್ದು, 293 ಬಾರ್ಡರ್ ಔಟ್ ಪೋಸ್ಟ್ ಗಳ ಪೈಕಿ 129 ಬಿಒಪಿಗಳಿಗೆ ಮಾತ್ರ ಕೊಳವೆ ನೀರು ಸರಬರಾಜು ಲಭ್ಯವಿದೆ ಎಂದು ತಿಳಿಸಿದ್ದಾರೆ. ಉಳಿದ ಬಿಒಪಿಗಳಿಗೆ ಸಾಕಷ್ಟು ನೀರಿನ ಸೌಲಭ್ಯ ಕಲ್ಪಿಸಲಾಗಿದೆ ಎಂದು ಕಿರಣ್ ರಿಜಿಜು ಹೇಳಿದ್ದಾರೆ.