ರಾಜ್ಯ ಖಾತೆ ಸಚಿವ ಸ್ಥಾನ: ಸಂತರು ಬೆದರಿಕೆ ಹಾಕಬಾರದು- ಅಖಾಡಾ ಪರಿಷತ್

ಮಧ್ಯಪ್ರದೇಶ ಸರ್ಕಾರ ನರ್ಮದಾ ರಕ್ಷಣಾ ಕಾರ್ಯ ಪರಿಶೀಲನೆಗೆ ಐವರು ಧಾರ್ಮಿಕ ಮುಖಂಡರ ಸಮಿತಿ ರಚಿಸಿದ್ದು ಅವರಿಗೆ ರಾಜ್ಯ ಸಚಿವರ ಸ್ಥಾನಮಾನಗಳನ್ನು ನೀಡಿದ ಕ್ರಮಕ್ಕೆ ಸಾಧು-ಸಂತರ ಪರಮೋಚ್ಛ ಸಮಿತಿ
ರಾಜ್ಯ ಖಾತೆ ಸಚಿವ ಸ್ಥಾನ: ಸಂತರು ಬೆದರಿಕೆ ಹಾಕಬಾರದು- ಅಖಾಡಾ ಪರಿಷತ್
ರಾಜ್ಯ ಖಾತೆ ಸಚಿವ ಸ್ಥಾನ: ಸಂತರು ಬೆದರಿಕೆ ಹಾಕಬಾರದು- ಅಖಾಡಾ ಪರಿಷತ್
Updated on
ನವದೆಹಲಿ: ಮಧ್ಯಪ್ರದೇಶ ಸರ್ಕಾರ ನರ್ಮದಾ ರಕ್ಷಣಾ ಕಾರ್ಯ ಪರಿಶೀಲನೆಗೆ ಐವರು ಧಾರ್ಮಿಕ ಮುಖಂಡರ ಸಮಿತಿ ರಚಿಸಿದ್ದು ಅವರಿಗೆ ರಾಜ್ಯ ಸಚಿವರ ಸ್ಥಾನಮಾನಗಳನ್ನು ನೀಡಿದ ಕ್ರಮಕ್ಕೆ ಸಾಧು-ಸಂತರ ಪರಮೋಚ್ಛ ಸಮಿತಿ ಅಖಾಡಾ ಪರಿಷತ್ ಸಹ ಅಸಮಾಧಾನಗೊಂಡಿದೆ. 
ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅಖಾಡಾ ಪರಿಷತ್ ನ ಮುಖ್ಯಸ್ಥ ಮಹಾಂತ್ ನರೇಂದ್ರ ಗಿರಿ, ಬೆದರಿಕೆ ಹಾಕುವ ಮೂಲಕ  ಸಚಿವ ಸ್ಥಾನ ಪಡೆದಿರುವ 5 ಸಂತರು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಹೇಳಿದ್ದಾರೆ.
ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಈ ರೀತಿಯ ಬೆದರಿಕೆಗಳಿಗೆ ಮಣಿಯಬಾರದಿತ್ತು ಎಂದು ಅಖಾಡಾ ಪರಿಷತ್ ಅಭಿಪ್ರಾಯಪಟ್ಟಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com