ಚೌಹಾಣ್ ರಾಜ್ಯದ 'ಮಂತ್ರಿ ಬಾಬಾಗಳು', ಮಧ್ಯಪ್ರದೇಶದ ಸರ್ಕಾರದ ಕ್ರಮದ ವಿರುದ್ಧ ರಾಹುಲ್ ವ್ಯಂಗ್ಯ

ಮಧ್ಯಪ್ರದೇಶ ಸರ್ಕಾರ ನರ್ಮದಾ ರಕ್ಷಣಾ ಕಾರ್ಯ ಪರಿಶೀಲನೆಗೆ ಐವರು ಧಾರ್ಮಿಕ ಮುಖಂಡರ ಸಮಿತಿ ರಚಿಸಿದ್ದು ಅವರಿಗೆ ರಾಜ್ಯ ಸಚಿವರ ಸ್ಥಾನ ಮಾನಗಳನ್ನು ನೀಡಿ............
ರಾಹುಲ್ ಗಾಂಧಿ
ರಾಹುಲ್ ಗಾಂಧಿ
ನವದೆಹಲಿ: ಮಧ್ಯಪ್ರದೇಶ ಸರ್ಕಾರ ನರ್ಮದಾ ರಕ್ಷಣಾ ಕಾರ್ಯ ಪರಿಶೀಲನೆಗೆ ಐವರು ಧಾರ್ಮಿಕ ಮುಖಂಡರ ಸಮಿತಿ ರಚಿಸಿದ್ದು ಅವರಿಗೆ ರಾಜ್ಯ ಸಚಿವರ ಸ್ಥಾನಮಾನಗಳನ್ನು ನೀಡಿದ ಕ್ರಮವನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಸುದ್ದಿಯೊಂದರ ಕೊಂಡಿಯನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ರಾಹುಲ್ ನರ್ಮದಾ ಹಗರಣವನ್ನು ಬಹಿರಂಗಪಡಿಸುತ್ತೇವೆ ಎಂದಿದ್ದ ಧಾರ್ಮಿಕ ಮುಖಂಡರಿಗೆ ಅವರ ಗಮ್ಯ ಸ್ಥಾನ ಯಾವುದೆಂದು ’ಅಂಕಲ್’(ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್)  ತೋರಿಸಿಕೊಟ್ಟಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ,
ಧಾರ್ಮಿಕ ಮುಖಂಡರಾದ ನರ್ಮದಾನಂದ ಮಹಾರಾಜ್, ಹರಿಹರಾನಂದ ಮಹಾರಾಜ್, ಕಂಪ್ಯೂಟರ್ ಬಾಬಾ, ಭಾಯಿ ಮಹಾರಾಜ್ ಮತ್ತು ಪಂಡಿತ್ ಯೋಗೇಂದ್ರ ಮಹಂತ್.ಅವರುಗಳಿಗೆ ರಾಜ್ಯ ಸಚಿವ ಸ್ಥಾನಮಾನಗಳನ್ನು ನೀಡಿ ಮಧ್ಯಪ್ರದೇಶ ಸರ್ಕಾರ ಆದೇಶ ಹೊರಡಿಸಿತ್ತು.
ನರ್ಮದಾ ಸುರಕ್ಷತೆಯ ಕುರಿತಂತೆ ಮಾ.31ರಂದು ರಚಿಸಲಾದ ಸಮಿತಿಗೆ ಈ ಐದು ಧಾರ್ಮಿಕ ಮುಖಂಡರನ್ನು ನೇಮಕ ಮಾಡಲಾಗಿತ್ತು. ಸಮಿತಿಯ ಸದಸ್ಯರಾದ ಇವರಿಗೆ ರಾಜ್ಯ ಸಚಿವರ ಸ್ಥಾನಮಾನ  ನೀಡಲಾಗಿತ್ತು.
ರಾಜ್ಯ ಸರ್ಕಾರದ ಈ ತೀರ್ಮಾನಕ್ಕೆ ಮಧ್ಯಪ್ರದೇಶ ವಿರೋಧ ಪಕ್ಷಗಳು ಬಲವಾಗಿ ಟಿಕೆ ವ್ಯಕ್ತಪಡಿಸಿದ್ದು ನರ್ಮದಾ ಹಗರಣ ಬಹಿರಂಗಪಡಿಸುವುದಾಗಿ ರಥಯಾತ್ರೆ ಹೊರಟಿದ್ದ ಸಂತರೊಡನೆ ಚೌಹಾನ್ ಸರ್ಕಾರ  ಒಪ್ಪಂದ ಮಾಡಿಕೊಂಡಿದೆ ಎಂದು ವ್ಯಂಗ್ಯವಾಡಿದ್ದರು.
ನರ್ಮದಾ ನದಿಯ ರಕ್ಷಣೆಗಾಗಿ ಸಂತರು ಹಾಗೂ ಧಾರ್ಮಿಕ ಮುಖಂಡರ ಸಮಿತಿಯನ್ನು ರೂಪಿಸಲು ರಾಜ್ಯ ಸರ್ಕಾರ ಒಪ್ಪಿದೆ. ಈ ಮೂಲಕ ಅದು ತಮ್ಮ ಬೇಡಿಕೆಯನ್ನು ಪೂರೈಸಿದೆ ಹೀಗಾಗಿ ನಾವು ಉದ್ದೇಶಿತ ಯಾತ್ರೆಯನ್ನು ರದ್ದುಗೊಳಿಸುತ್ತಿದ್ದೇವೆ ಎಂದು ಕಂಪ್ಯೂಟರ್ ಬಾಬಾ ನಿನ್ನೆ ಹೇಳಿಕೆ ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com