ಬಾಬ್ರಿ ಮಸೀದಿ ದ್ವಂಸಕ್ಕೆ ಸಂಬಂಧಿಸಿ ಪುಸ್ತಕ ಪ್ರಕಟಣೆ, ಪ್ರಣಬ್ ಮುಖರ್ಜಿ ಪ್ರತಿಕ್ರಿಯೆಗೆ ದೆಹಲಿ ಹೈಕೋರ್ಟ್ ಆದೇಶ

ಬಾಬ್ರಿ ಮಸೀದಿ ದ್ವಂಸ ಪ್ರಕರಣ ಸಂಬಂಧ 2016 ರಲ್ಲಿ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪ್ರಕಟಿಸಿದ್ದ ಪುಸ್ತಕವೊಂದರಲ್ಲಿ ಉಲ್ಲೇಖಿಸಲಾಗಿದ್ದು...............
ಪ್ರಣಬ್ ಮುಖರ್ಜಿ
ಪ್ರಣಬ್ ಮುಖರ್ಜಿ
ನವದೆಹಲಿ: ಬಾಬ್ರಿ ಮಸೀದಿ ದ್ವಂಸ ಪ್ರಕರಣ ಸಂಬಂಧ 2016 ರಲ್ಲಿ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪ್ರಕಟಿಸಿದ್ದ ಪುಸ್ತಕವೊಂದರಲ್ಲಿ ಉಲ್ಲೇಖಿಸಲಾಗಿದ್ದು ಈ ಉಲ್ಲೇಖಗಳು ಹಿಂದೂಗಳ ಭಾವನೆಗೆ ಘಾಸಿ ಮಾಡಿಎ ಎಂದು ಆರೋಪಿಸಲಾಗಿತ್ತು . ಈ ಕುರಿತಂತೆ ವಿಚಾರಣೆ ನಡೆಸಿರುವ ದೆಹಲಿ ಹೈಕೋರ್ತ್ ಪ್ರಣಬ್ ಮುಖರ್ಜಿ ಅವರ ಪ್ರತಿಕ್ರಿಯೆಯನ್ನು ಕೋರಿದೆ.
ಪ್ರಣಬ್ ಮುಖರ್ಜಿ ಅವರ ಪುಸ್ತಕ 'ಟರ್ಬುಲೆಂಟ್ ಇಯರ್ಸ್ 1980-1996' ದ ವಿರುದ್ಧ ಸಾಮಾಜಿಕ ಕಾರ್ಯಕರ್ತ ಹಾಗೂ ಕೆಲ ವಕೀಲರ ಸಮೂಹ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಪ್ರಣಬ್ ಮುಕರ್ಜಿ ಅವರಿಗೆ ನೋಟೀಸ್ ಜಾರಿ ಮಾಡಿದೆ.
ನ್ಯಾಯಮೂರ್ತಿ ಪ್ರತಿಬಾ ಎಂ.ಸಿಂಗ್ ಅವರಿದ್ದ ಪೀಠ ಮುಖರ್ಜಿ ಅವರಿಗೆ ನೋಟೀಸ್ ನಿಡಿದ್ದು ಮುಂದಿನ ವಿಚಾರಣೆಯನ್ನು ಜುಲೈ 30ಕ್ಕೆ ನಿಗದಿಗೊಳಿಸಿ ಆದೇಶಿಸಿದೆ.
ನವೆಂಬರ್ 30, 2016ರಂದು ಫಿರ್ಯಾದಿಗಳು ಕೆಳ ನ್ಯಾಯಾಲಯದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿದ ನಂತರ,ಹೈಕೋರ್ಟ್ ಕಳೆದ ಸಪ್ಟೆಂಬರ್ ನಲ್ಲಿ ವಿಚಾರಣಾ ನ್ಯಾಯಾಲಯದಲ್ಲಿದ್ದ ಮೊಕದ್ದಮೆ ಸಂಬಂಧಿತ ದಾಖಲೆಗಳನ್ನು ನೀಡುವಂತೆ ಆದೇಶಿಸಿತ್ತು ಅದೇ ವೇಳೆ ಅಂದಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ತಮ್ಮ ಪುಸ್ತಕದ ಕೆಲವು ಮಾಹಿತಿಗಳನ್ನು ತೆಗೆದು ಹಾಕಲು ವಕೀಲರು, ಸಾಮಾಜಿಕ ಕಾರ್ಯಕರ್ತರು ಮಾಡಿದ್ದ ಮನವಿಯನ್ನು ತಿರಸ್ಕರಿಸಿದ್ದರು.
ಕೆಳ ನ್ಯಾಯಾಲಯವು ಈ ಪ್ರಕರನವನ್ನು ತಳ್ಳಿಹಾಕಿರುವ ಕ್ರಮ ಸರಿಯಾದುದಲ್ಲ. ಪ್ರಕರಣ ಸಂಬಂಧ ಯಾವ ದಾವೆ ಇಲ್ಲ ಎನ್ನುವ ಕಾರಣಕ್ಕೆ ನ್ಯಾಯಾಲಯ ತಪ್ಪು ನಿರ್ಧಾರ ತೆಗೆದುಕೊಂಡಿದೆ ಎಂದು ಫಿರ್ಯಾದಿಗಳ ಪರ ವಕೀಲರಾದ ಕೇಟ್ ವಿಷ್ಣು ಶಂಕರ್ ಜೈನ್, ವಾದಿಸಿದ್ದಾರೆ
ಪ್ರಣಬ್ ಮುಖರ್ಜಿ ಅವರ ಪುಸ್ತಕವು ಜನವರಿ 28, 2016 ರಂದು ಬಿಡುಗಡೆಯಾಗಿತ್ತು. ಇದರ ಕುರಿತಂತೆ  ಸೆಪ್ಟೆಂಬರ್ 5, 2016 ರಲ್ಲಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿದ್ದು ಇದರ ಬಳಿಕವೂ ಪುಸ್ತಕದ ಕೆಲ ವಿವಾದಿತ ಬಾಗಗಳನ್ನು ತೆಗೆದುಹಾಕುವಂತೆ ಕೋರಿ ಫಿರ್ಯಾದಿಗಳು  ಎರಡು ತಿಂಗಳ ಕಾಲಾವಕಾಶ ನೀಡಿ ನೊಟೀಸು ಜಾರಿಗೊಳಿಸಿದ್ದರು. ಆದರೆ ಅಂದಿನ ರಾಷ್ಟ್ರಪತಿಗಳಾಗಿದ್ದ ಪ್ರಣಬ್ ಮುಖರ್ಜಿ ತಾವು ಪುಸ್ತಕದಲ್ಲಿನ ಯಾವ ಭಾಗವನ್ನೂ ತೆಗೆದುಹಾಕುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು  ಫಿರ್ಯಾದಿಗಳ ಮನವಿಯನ್ನು ತಿರಸ್ಕರಿಸಿದ್ದರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com