ಪ್ರಧಾನಿ ಮೋದಿ ಕರ್ನಾಟಕಕ್ಕೆ ಬಂದರೆ ಉದ್ಯೋಗ ಸೃಷ್ಟಿ ಬಗ್ಗೆ ಪ್ರಶ್ನಿಸಿ, ಕುರ್ಚಿ ತೂರಿ ಗದ್ದಲ ಮಾಡಿ: ಮೇವಾನಿ
ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದಲ್ಲಿ ಪ್ರವಾಸ ಕೈಗೊಂಡಾಗ ಕಾರ್ಯಕ್ರಮದಲ್ಲಿ ಭಾಗವಹಿಸುವವರು ಕುರ್ಚಿಗಳನ್ನು ತೂರಿ ಗದ್ದಲ ಉಂಟು ಮಾಡಿ ಎಂದು ಗುಜರಾತ್ ಪಕ್ಷೇತರ ಶಾಸಕ ಜಿಗ್ನೇಶ್ ಮೇವಾನಿ...
ಚಿತ್ರದುರ್ಗ: ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದಲ್ಲಿ ಪ್ರವಾಸ ಕೈಗೊಂಡಾಗ ಕಾರ್ಯಕ್ರಮದಲ್ಲಿ ಭಾಗವಹಿಸುವವರು ಕುರ್ಚಿಗಳನ್ನು ತೂರಿ ಗದ್ದಲ ಉಂಟು ಮಾಡಿ ಎಂದು ಗುಜರಾತ್ ಪಕ್ಷೇತರ ಶಾಸಕ ಜಿಗ್ನೇಶ್ ಮೇವಾನಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಕರ್ನಾಟಕ್ಕೆ ಆಗಮಿಸಿರುವ ಜಿಗ್ನೇಶ್ ಮೇವಾನಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸುವಂತೆ ರಾಜ್ಯದ ಮತದಾರರಿಗೆ ಕರೆ ನೀಡಿದ್ದು, 2 ಕೋಟಿ ಉದ್ಯೋಗ ಸೃಷ್ಟಿಯ ಭರವಸೆ ನೀಡಿರುವುದರ ಬಗ್ಗೆ ಪ್ರಧಾನಿ ಮೋದಿ ಅವರನ್ನು ಪ್ರಶ್ನಿಸಿ ಎಂದು ಜಿಗ್ನೇಶ್ ಮೇವಾನಿ ಹೇಳಿದ್ದಾರೆ.
ಭರವಸೆಯ ಪ್ರಕಾರ ಉದ್ಯೋಗ ನೀಡಲು ಸಾಧ್ಯವಾಗದಿದ್ದರೆ ಆಡಳಿತ ಬಿಟ್ಟು ರಾಮಮಂದಿರದ ಘಂಟೆ ಬಾರಿಸಲು ಹೋಗುವುದಕ್ಕೆ ಹೇಳಿ ಎಂದು ಜಿಗ್ನೇಶ್ ಮೇವಾನಿ ಮತದಾರರಿಗೆ ಸಲಹೆ ನೀಡಿದ್ದಾರೆ.