ಆಧಾರ್ ಲಿಂಕ್ ಹೆಸರಿನಲ್ಲಿ ವಂಚನೆ, 75 ಸಾವಿರ ರು. ಕಳೆದುಕೊಂಡ ಮಹಾರಾಷ್ಟ್ರ ವ್ಯಕ್ತಿ

ಅಪರಿಚಿತ ವ್ಯಕ್ತಿಯೊಬ್ಬ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡುವುದಾಗಿ ಹೇಳಿ 71 ವರ್ಷದ ವ್ಯಕ್ತಿಯ ಖಾತೆಯಿಂದ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಥಾಣೆ: ಅಪರಿಚಿತ ವ್ಯಕ್ತಿಯೊಬ್ಬ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡುವುದಾಗಿ ಹೇಳಿ 71 ವರ್ಷದ ವ್ಯಕ್ತಿಯ ಖಾತೆಯಿಂದ 75 ಸಾವಿರ ರುಪಾಯಿ ಡ್ರಾ ಮಾಡಿ, ವಂಚಿಸಲಾಗಿದೆ ಎಂದು ನಗರ ಪೊಲೀಸರು ಶನಿವಾರ ತಿಳಿಸಿದ್ದಾರೆ.
ಈ ಸಂಬಂಧ ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿ ಕೊಪ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಥಾಣೆ ನಿವಾಸಿ ಬಾಪುರಾವ್ ಶಿಂಗೋಟೆ ಅವರು ಕಳೆದ ಏಪ್ರಿಲ್ 2ರಂದು ದೂರವಾಣಿ ಕರೆ ಮಾಡಿದ ವ್ಯಕ್ತಿಯೊಬ್ಬ, ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಬೇಕಾಗಿದೆ ಎಂದು ಹೇಳಿ, ಪರಿಶೀಲನಾ ಕೋಡ್ ಪಡೆದಿದ್ದಾರೆ.
ಶಿಂಗೋಟೆ ಅವರು ತಮ್ಮ ಮೊಬೈಲ್ ಬಂದ ಪರಿಶೀಲನಾ ಕೋಡ್ ಅನ್ನು ಹೇಳಿದ್ದಾರೆ. ಕೂಡಲೇ ಅವರ ಬ್ಯಾಂಕ್ ಖಾತೆಯಿಂದ 75 ಸಾವಿರ ರುಪಾಯಿ ಡ್ರಾ ಮಾಡಿರುವುದಾಗಿ ಸಂದೇಶ ಬಂದಿದೆ ಎಂದು ಶಿಂಗೋಟೆ ಆರೋಪಿಸಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು, ಆರೋಪಿಯ ಬಗ್ಗೆ ಇದುವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com