110 ಯುದ್ಧ ವಿಮಾನ ಖರೀದಿ ಒಪ್ಪಂದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ

ಸುಮಾರು 15 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತದ ಜೆಟ್ ಯುದ್ಧ ವಿಮಾನ ಖರೀದಿ ಒಪ್ಪಂದ ಕುರಿತು ಪ್ರಧಾನಿ ನರೇಂದ್ರಮೋದಿ ಕರೆದಿರುವ ಮರುಟೆಂಡರ್ ನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ನವದೆಹಲಿ : ಸುಮಾರು 15 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತದ  ಜೆಟ್   ಯುದ್ಧ ವಿಮಾನ ಖರೀದಿಗಾಗಿ  ಪ್ರಧಾನಿ ನರೇಂದ್ರಮೋದಿ ಕರೆದಿರುವ ಮರುಟೆಂಡರ್ ನ್ನು    ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದ್ದಾರೆ.

ವಿವಾದಾತ್ಮಕ ರಾಫೆಲ್  ಯುದ್ದ ವಿಮಾನ ಒಪ್ಪಂದಲ್ಲಿ 40,000 ಸಾವಿರ ಕೋಟಿ ನಷ್ಟವಾಗಿದ್ದು ಪ್ರಧಾನಿ ಅವರ ಗೆಳೆಯರಿಗೆ   ಅನುಕೂಲ ಮಾಡಿಕೊಡಲು ಮೋದಿ ಮರು ಟೆಂಡರ್ ಕರೆದಿದ್ದಾರೆ ಎಂದು ರಾಹುಲ್ ಗಾಂಧಿ ಟ್ವಿಟರ್ ನಲ್ಲಿ ಆರೋಪಿಸಿದ್ದಾರೆ.

110 ಯುದ್ದ ವಿಮಾನಗಳ ಖರೀದಿ ನಡೆಯುತ್ತಿದೆ ಎಂದು ರಕ್ಷಣಾ ಸಚಿವಾಲಯ ಏಪ್ರಿಲ್ 6 ರಂದು ಹೇಳಿತ್ತು.  ಇತ್ತೀಚಿನ ದಿನಗಳಲ್ಲಿ ಇಷ್ಟೊಂದು ಭಾರೀ ಮೊತ್ತದಲ್ಲಿ ಯುದ್ದ ವಿಮಾನ ವಿಮಾನವನ್ನು ಖರೀದಿಸಲಾಗುತ್ತಿತ್ತು, ಸುಮಾರು 15 ಬಿಲಿಯನ್ ಡಾಲರ್ ವೆಚ್ಚ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಲಾಗಿತ್ತು.

 ಮೇಕ್ ಇನ್ ಇಂಡಿಯಾ ಯೋಜನೆಯಡಿ ಶೇಕಡ 85 ರಷ್ಟು ಭಾರತದಲ್ಲಿಯೇ  ಉತ್ಪಾದನೆ ಮಾಡಲಾಗುತ್ತದೆ,  ಶೇಕಡ 25 ರಷ್ಟು ವಿಮಾನಗಳು ಎರಡು ಆಸನ ಹೊಂದಲಿದ್ದು, ಶೇ.75 ರಷ್ಟು ವಿಮಾನಗಳು ಏಕ ಆಸನ ವ್ಯವಸ್ಥೆ ಹೊಂದಿವೆ ಎಂದು ತಿಳಿಸಲಾಗಿತ್ತು.

36 ರಾಫೆಲ್ ಜೆಟ್ ವಿಮಾನ ಖರೀದಿಗಾಗಿ ಫ್ರಾನ್ಸ್ ಮೂಲದ ದಾಸಾಲ್ಟ್ ವಿಮಾನಯಾನ ಸಂಸ್ಥೆಯೊಂದಿಗೆ ಎನ್ ಡಿಎ ಸರ್ಕಾರ ಒಪ್ಪಂದ ಮಾಡಿಕೊಂಡಿತ್ತು. ರಾಫೆಲ್ ಒಪ್ಪಂದದಲ್ಲಿ ಇದು ಮೊದಲ ಬಾರಿಗೇನೂ ಭ್ರಷ್ಟಾಚಾರ ನಡೆದಿಲ್ಲ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಈ ಒಪ್ಪಂದ ಸಂಬಂಧ ರಾಹುಲ್ ಗಾಂಧಿ ಫೆಬ್ರವರಿ ತಿಂಗಳಲ್ಲಿ 8 ಪ್ರಶ್ನೆಗಳನ್ನು ಪ್ರಧಾನಿ ನರೇಂದ್ರಮೋದಿಗೆ ಕೇಳಿದ್ದರು.  ಒಪ್ಪಂದದಲ್ಲಿನ ಬದಲಾವಣೆಗಾಗಿ ನರೇಂದ್ರಮೋದಿ ವೈಯಕ್ತಿಕವಾಗಿ ಪ್ಯಾರಿಸ್ ಗೆ ಭೇಟಿ ನೀಡಿದ್ದರು ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com