ದಲಿತರ ಸಮಸ್ಯೆಯನ್ನು ವಿರೋಧ ಪಕ್ಷಗಳು ರಾಜಕೀಯಕ್ಕೆ ಬಳಸಿಕೊಳ್ಳುತ್ತಿವೆ: ಬಿಜೆಪಿ ಆರೋಪ

ದಲಿತರ ಪರ/ವಿರೋಧ ಎನ್ನುವ ಕಾರಣವೊಡ್ಡಿ ಕಾಂಗ್ರೆಸ್, ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಹಿಂಸಾಚಾರಕ್ಕೆ ಬೆಂಬಲಿಸುವ ಮೂಲಕ ದೇಶದಲ್ಲಿ...........
ರವಿಶಂಕರ್ ಪ್ರಸಾದ್
ರವಿಶಂಕರ್ ಪ್ರಸಾದ್
ನವದೆಹಲಿ: ದಲಿತರ ಪರ/ವಿರೋಧ ಎನ್ನುವ ಕಾರಣವೊಡ್ಡಿ ಕಾಂಗ್ರೆಸ್, ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಹಿಂಸಾಚಾರಕ್ಕೆ ಬೆಂಬಲಿಸುವ ಮೂಲಕ ದೇಶದಲ್ಲಿ ಶಾಂತಿ ಕದಡಲು ಮುಂದಾಗಿದೆ ಎಂದು ಭಾರತೀಯ ಜನತಾ ಪಕ್ಷ (ಬಿಕೆಪಿ) ಆರೋಪಿಸಿದೆ.
ಕೇಂದ್ರ ಸಚಿವರಾದ ರವಿಶಂಕರ್ ಪ್ರಸಾದ್ ಮತ್ತು ತವರ್ಚಂದ್ ಗೆಹ್ಲೋಟ್ ಮಾತನಾಡಿ ದಲಿತರ ಸಮಸ್ಯೆಗಳಿಗೆ ಕೇಸರಿ ಪಕ್ಷವನ್ನು ಹೊಣೆಗಾರರನ್ನಾಗಿಸಲು ಪ್ರತಿಪಕ್ಷಗಳು ಮುಂದಾಗಿದೆ ಎಂದು ದೂರಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸುಳ್ಳು ಹಾಗೂ ವದಂತಿ ಸಮಾಚಾರಗಳಿಂದ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತಿದ್ದಾರೆ.
ಇದೇ ವೇಳೆ ತಮ್ಮ ಪಕ್ಷದ ದಲಿತ ಸಂಸದರ ಹೇಳಿಕೆಗಳ ಕುರಿತು ಮಾತನಾಡಿದ ಪ್ರಸಾದ್ ತಾವು ಅವರೊಡನೆ ಮಾತನಾಡುವುದಾಗಿಯೂ ಅವರಲ್ಲಿನ ಕಳವಳಗಳನ್ನು ಬಗೆಹರಿಸುವುದಾಗಿಯೂ ನುಡಿದರು.
ಎಪ್ರಿಲ್ 2 ರಂದು ಹಲವಾರು ದಲಿತ ಪರ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್ ವೇಳೆ ಸಂಭವಿಸಿದ ಹಿಂಸಾಚಾರದಲ್ಲಿ ಕನಿಷ್ಠ 11 ಮಂದಿ ಪ್ರಾಣ ಕಳೆದುಕೊಂಡಿದ್ದರು.ಇದರಿಂದ ತಳ ಸಮುದಾಯದ ಸಮಸ್ಯೆಗಳು ಮೇಲೆ ಬಂದಿದ್ದು ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವೆ ಗುದ್ದಾಟಕ್ಕೆ ಕಾರಣವಾಗಿದೆ.
ದಲಿತ ನಾಯಕ ಭೀಮರಾವ್ ಅಂಬೇಡ್ಕರ್ ಮತ್ತು ಬಿಎಸ್ಪಿ ಸಂಸ್ಥಾಪಕ ಕಾನ್ಶಿ ರಾಮ್ ಅವರು ಹಿಂಸಾತ್ಮಕ ಪ್ರತಿಭಟನೆಗಳನ್ನು ಎಂದಿಗೂ ಬೆಂಬಲಿಸಿರಲಿಲ್ಲ ಎಂದು ಬಿಜೆಪಿ ಮುಖಂಡ ಗೆಹ್ಲೋಟ್ ಹೇಳಿದ್ದಾರೆ.ಅವರು ಕಾಂಗ್ರೆಸ್ ಮತ್ತು ಮಾಯಾವತಿ ನೇತೃತ್ವದ ಬಿಎಸ್ಪಿಪಕ್ಷದ ನಡೆಯನ್ನು ಖಂಡಿಸಿ ಮಾತನಾಡಿದರು.
ಸಮಾಜವಾದಿ ಪಕ್ಷ ಹಾಗೂ ಇತರೆ ಪಕ್ಷಗಳ ವಿರುದ್ಧ ಆಕ್ರಮಣ ನಡೆಸಿದ ಪ್ರಸಾದ್ ದಲಿತರ ವಿಷಯವನ್ನು ಅವರುಗಳು ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಇದು ಆಡಳಿತ ಪಕ್ಷದ ವಿರುದ್ಧದ ಪಿತೂರಿಯ ಒಂದು ಭಾಗವಾಗಿದೆ ಎಂದರು.
"ರಾಜಕೀಯ ಹಿತಾಸಕ್ತಿಗಾಗಿ ದೇಶವನ್ನು ವಿಭಜಿಸುವ ಕೆಲಸವನ್ನು ವಿರೋಧಪಕ್ಷಗಳು ಎಂದಿಗೂ ಮಾಡಬಾರದು" ಅವರು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಬಡ ಕುಟುಂಬದಿಂದ ಬಂದ ಕಾರಣ ಈ ವಿಚಾರವನ್ನು ರಾಜಕೀಯವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ ಬಿಜೆಪಿ ತಮ್ಮ ಪಕ್ಷ ದೊಡ್ಡ ಸಂಖ್ಯೆಯ ದಲಿತ ಮತ್ತು ಬುಡಕಟ್ಟು ಜನಾಂಗದ ಸಂಸದರು ಮತ್ತು ಶಾಸಕರನ್ನು ಹೊಂದಿದೆ ಎಂದು ಹೇಳಿದೆ.
ಮಧ್ಯಪ್ರದೇಶ ಹಾಗೂ ರಾಜಸ್ಥಾನದ ಕೆಲ ಬಾಗಗಳಲ್ಲಿ ಕಾಂಗ್ರೆಸ್ ಮತ್ತು ಬಿಎಸ್ಪಿ ಪ್ರಭಾವ ಬೀರಿದ್ದು ಮೊನ್ನೆಯ ಬಂದ್ ವೇಳೆ ಗರಿಷ್ಠ ಹಿಂಸಾಚಾರ ನಡೆದಿದೆ.ಎಂದು ಪ್ರಸಾದ್ ಹೇಳಿದ್ದಾರೆ. ವಿರೋಧ ಪಕ್ಷಗಳು ಬಿಜೆಪಿಯನ್ನು ಗುರಿಯಾಗಿಟ್ಟುಕೊಂಡು ದೇಶದಲ್ಲಿ ಕೆಟ್ಟ  ಜಾತಿ ಮತ್ತು ಪ್ರಾದೇಶಿಕತೆಯನ್ನು ಹರಡಲು ಯತ್ನಿಸುತ್ತಿವೆ ಎಂದು ಅವರು ಆರೋಪಿಸಿದರು.
ನರೇಂದ್ರ ಮೋದಿ ನೇತೃತ್ವದ ಸರಕಾರವು 2016 ರಲ್ಲಿ ತಿದ್ದುಪಡಿಗಳೊಂದಿಗೆ ಎಸ್ಸಿ/ಎಸ್ಟಿ (ದೌರ್ಜನ್ಯ ತಡೆಗಟ್ಟುವಿಕೆ) ಕಾಯ್ದೆಯನ್ನು ಬಲಪಡಿಸಿದ್ದು ಅಂಬೇಡ್ಕರ್ ಅವರ ಆಶಯವನ್ನು ಪಾಲಿಸಲು ಸಾಕಷ್ಟು ಶ್ರಮಿಸಿದೆ. ಅಲ್ಲದೆ ಅವರ ಜನ್ಮ ಶತಾಬ್ದಿ ವರ್ಷಾಚರಣೆ ವೇಳೆ ಅನೇಕ ಕಾರ್ಯಕ್ರಮಗಳನ್ನು ಸಂಘಟಿಸಲಾಗಿತ್ತು ಹಾಗೆಯೇ ಅನೇಕ ಸ್ಮಾರಕಗಳನ್ನು ನಿರ್ಮಾಣ ಮಾಡಲಾಗಿತ್ತು 
ರಾಹುಲ್ ಗಾಂಧಿ ಉಪವಾಸ ಮಾಡುವ ಸಂಬಂಧ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಪ್ರಸಾದ್ ಅವರುಹಾಗೆ ಮಾಡಲು ಹಕ್ಕನ್ನು ಹೊಂದಿದ್ದಾರೆ, ಆದರೆ  ವದಂತಿಗಳನ್ನು ಹರಡದಂತೆ ತಡೆಯಬೇಕು ಎಂದು ಹೇಳಿದರು.
ಮೋದಿಯವರು ಸಮಾಜದ ದುರ್ಬಲ ವರ್ಗಗಳ ಕಲ್ಯಾಣಕ್ಕಾಗಿ ಉತ್ತಮ ಕಾರ್ಯಕ್ರಮ ಹಾಕಿಕೊಂಡಿದ್ದಾರೆ ಇದು ವಿರೋಧಿಗಳಲ್ಲಿ ಎದೆಯುರಿಗೆ ಕಾರಣವಾಗಿದೆಎಂದು ಗೆಹ್ಲೋಟ್ ಹೇಳಿದ್ದಾರೆ
ಕಾಂಗ್ರೆಸ್ ಮತ್ತು ಬಿಎಸ್ಪಿ ಮುಂತಾದ ಪಕ್ಷಗಳು ದಲಿತರಿಗೆ ಏನನ್ನೂ ಮಾಡಲಿಲ್ಲ ಮತ್ತು ಕೆಲವೊಮ್ಮೆ ತಮ್ಮ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿವೆ ಎಂದು ಪ್ರಸಾದ್ ಮತ್ತು ಗೆಹ್ಲೋಟ್ ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com