ಶಿವಸೇನಾ ನಾಯಕರ ಹತ್ಯೆ: ಎನ್ ಸಿಪಿ ಮುಖಂಡ ಸಂಗ್ರಾಮ್ ಸಹಿತ ನಾಲ್ವರ ಬಂಧನ

ಶಿವಸೇನೆಯ ಸ್ಥಳೀಯ ನಾಯಕರಿಬ್ಬರ ಹತ್ಯೆ ಪ್ರಕರಣ ಸಂಬಂಧಿಸಿ ಪೋಲೀಸರು ಎನ್ ಸಿಪಿ ನಾಯಕ ಸಂಗ್ರಾಮ್ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಮುಂಬೈ: ಶಿವಸೇನೆಯ ಸ್ಥಳೀಯ ನಾಯಕರಿಬ್ಬರ ಹತ್ಯೆ ಪ್ರಕರಣ ಸಂಬಂಧಿಸಿ ಪೋಲೀಸರು ಎನ್ ಸಿಪಿ ನಾಯಕ ಸಂಗ್ರಾಮ್ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ. ಅಲ್ಲದೆ ಒಟ್ಟು 31 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಎನ್ ಸಿಪಿ ನಾಯಕ  ಸಂಗ್ರಾಮ್ ಜಗತಾಪ್ ಹಾಗೂ ಸಂದೀಪ್ ಗಂಜಾಲ್, ಬಾಬಾಸಾಹೇಬ್ ಕೋಟ್ಕರ್, ಭಾನುದಾಸ್ ಕೋಟ್ಕರ್ ಬಂಧಿತರೆಂದು ತಿಳಿದುಬಂದಿದೆ.
ಸಂದೀಪ್ ಗಂಜಾಲ್ ಪ್ರಕರಣದ ಪ್ರಮುಖ ಆರೋಪಿ ಎನ್ನುವುದಾಗಿ ಪೋಲೀಸರು ತಿಳಿಸಿದ್ದಾರೆ. ಸಂಗ್ರಾಮ್ ಬಂಧನದಿಂದ ಉದ್ರಿಕ್ತರಾದ ಎನ್ ಸಿಪಿ ಕಾರ್ಯಕರ್ತರು ಪೋಲೀಸ್ ಅಧೀಕ್ಷಕರ ಕಛೇರಿಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. 
ಸಧ್ಯ ನಗರ ಉದ್ವಿಗ್ನವಾಗಿದ್ದು ಭಾರೀ ಸಂಖ್ಯೆಯ ಪೋಲೀಸರನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ."ಇದೀಗ ಪರಿಸ್ಥಿತಿ ಉದ್ವಿಗ್ನವಾಗಿದ್ದು ಹಲವಾರು ವಿಚಾರಗಳನ್ನು ಣಾನು ನಿಮಗೆ ವಿವರಿಸಲು ಸಾಧ್ಯವಾಗುವುದಿಲ್ಲ ಎಂದು ಶಿವಸೇನಾ ನಾಯಕರ ಹತ್ಯೆ ತನಿಖೆ ಕೈಗೊಂಡಿರುವ ಕೊಟ್ಟಾಲಿ ಠಾಣೆಯ ಇನ್ಸ್ ಪೆಕ್ಟರ್ ಎ. ಪರ್ವಾರ್ ಹೇಳಿದ್ದಾರೆ.
ಗುಂಡುಹಾರಿಸುವ ಹಾಗೂ ಹರಿತ ಆಯುಧಗಳಿಂದ ಹಲ್ಲೆ ನಡೆಸುವ ಮೂಲಕ ಇಬ್ಬರು ಶಿವಸೇನಾ ನಾಯಕರನ್ನು ಅಹಮದ್ ನಗರದಲ್ಲಿ ದುಷ್ಕರ್ಮಿಗಳು ನಿನ್ನೆ ಹತ್ಯೆ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com