ಎಸ್ ಸಿ/ ಎಸ್ ಟಿ ರಕ್ಷಣೆಗಾಗಿ ಸುಗ್ರೀವಾಜ್ಞೆ ಜಾರಿಗೆ ತರಲು ಪ್ರಧಾನಿಗೆ ಸಲಹೆ ನೀಡಿ: ಅಠಾವಳೆಗೆ ಮೇವಾನಿ
ದಲಿತರ ಹಕ್ಕುಗಳ ರಕ್ಷಣೆಗೆ ಎಸ್ ಸಿ/ ಎಸ್ ಟಿ ಕಾಯ್ದೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಜಾರಿಗೆ ತರಲು ಪ್ರಧಾನಿಗೆ ಸಲಹೆ ನೀಡಿ ಎಂದು ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಕೇಂದ್ರ ಸಚಿವ
ಗಾಂಧಿನಗರ: ದಲಿತರ ಹಕ್ಕುಗಳ ರಕ್ಷಣೆಗೆ ಎಸ್ ಸಿ/ ಎಸ್ ಟಿ ಕಾಯ್ದೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಜಾರಿಗೆ ತರಲು ಪ್ರಧಾನಿಗೆ ಸಲಹೆ ನೀಡಿ ಎಂದು ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಕೇಂದ್ರ ಸಚಿವ ರಾಮ್ ದಾಸ್ ಅಠಾವಳೆಗೆ ಹೇಳಿದ್ದಾರೆ.
ನಮ್ಮ ನಿಲುವು ಸ್ಪಷ್ಟವಾಗಿದೆ, ನಾವು ಆರ್ ಎಸ್ಎಸ್ ಸಿದ್ಧಾಂತ ಅಥವ ಅಹಿಂಸಾಚಾರದಲ್ಲಿ ನಂಬಿಕೆ ಇಟ್ಟಿಲ್ಲ. ನಾವು ಸಂವಿಧಾನವನ್ನು ನಂಬಿದ್ದೇವೆ. ನನಗೆ ಸಲಹೆ ನೀಡುವ ಬದಲು ದಲಿತರ ಹಕ್ಕುಗಳನ್ನು ರಕ್ಷಿಸುವಂತೆ ಪ್ರಧಾನಿಗೆ ಸಲಹೆ ನೀಡಿ ಎಂದು ಮೇವಾನಿ ಅಠಾವಳೆ ಅವರನ್ನು ಒತ್ತಾಯಿಸಿದ್ದಾರೆ.
ದಲಿತರ ಹಕ್ಕುಗಳನ್ನು ರಕ್ಷಿಸಲು ಕೇಂದ್ರ ಸರ್ಕಾರ ಏ.14 (ಬಿಆರ್ ಅಂಬೇಡ್ಕರ್) ಅವರ ಜನ್ಮದಿನಾಚರಣೆಗೂ ಮುನ್ನ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಜಾರಿಗೆ ತರಬೇಕು ಎಂದು ಮೇವಾನಿ ಆಗ್ರಹಿಸಿದ್ದಾರೆ.