ದಕ್ಷಿಣ ರಾಜ್ಯಗಳ ಬಗ್ಗೆ ಹಣಕಾಸು ಆಯೋಗ ಯಾವ ಪಕ್ಷಪಾತ ಮಾಡುವುದಿಲ್ಲ: ಅರುಣ್ ಜೇಟ್ಲಿ

ಕೇಂದ್ರ ಸರ್ಕಾರ ರಚಿಸಿರುವ 15ನೇ ಹಣಕಾಸು ಆಯೋಗದ ಉಲ್ಲೇಖಿತ ನಿಯಮಗಳಲ್ಲಿ ಯಾವುದೇ ಪಕ್ಷಪಾತಕ್ಕೆ ಅವಕಾಶ ನೀಡುವ ಆದೇಶವಿಲ್ಲ ಇದರ ಸುತ್ತ ಹಬ್ಬಿರುವ ವಿವಾದವು............
ಅರುಣ್ ಜೇಟ್ಲಿ
ಅರುಣ್ ಜೇಟ್ಲಿ
ನವದೆಹಲಿ: ಕೇಂದ್ರ ಸರ್ಕಾರ ರಚಿಸಿರುವ 15ನೇ ಹಣಕಾಸು ಆಯೋಗದ ಉಲ್ಲೇಖಿತ ನಿಯಮಗಳಲ್ಲಿ ಯಾವುದೇ ಪಕ್ಷಪಾತಕ್ಕೆ ಅವಕಾಶ ನೀಡುವ ಆದೇಶವಿಲ್ಲ ಇದರ ಸುತ್ತ ಹಬ್ಬಿರುವ ವಿವಾದವು ಅನಗತ್ಯವಾದದ್ದು  ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ದಕ್ಷಿಣ ರಾಜ್ಯಗಳಾದ ಕೇರಳ, ಕರ್ನಾಟಕ ಹಾಗೂ ಆಂಧ್ರ ಪ್ರದೇಶಗಳು ಹಣಕಾಸು ಆಯೋಗದ ಉಲ್ಲೇಖದ ಸಂಬಂಧ ವ್ಯಕ್ತಪಡಿಸಿದ್ದ ಕಳವಳಕ್ಕೆ ಅವರು ಉತ್ತರ ನೀಡಿದ್ದಾರೆ.
ತಿರುನವನಂತಪುರಂನಲ್ಲಿ ನಡೆದ ದಕ್ಷಿಣ ಭಾರತ ಹಣಕಾಸು ಸಚಿವರ ಸಮ್ಮೇಳನದಲ್ಲಿ, ಉಲ್ಲೇಖಿತ ನಿಯಮಗಳು, ಸಂವಿಧಾನದ ಒಕ್ಕೂಟ ವ್ಯವಸ್ಥೆಯ ತತ್ವಗಳಿಗೆ ವಿರುದ್ಧವಾಗಿವೆ ಮತ್ತು ರಾಜ್ಯಗಳು ಆದಾಯ ನಷ್ಟಕ್ಕೆ ಕಾರಣವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.
"ಹದಿನೈದನೇ ಹಣಕಾಸು ಆಯೋಗದ ಉಲ್ಲೇಖಿತ ನಿಯಮಗಳು ಜನಸಂಖ್ಯೆ ಹಾಗೂ ಪ್ರಗತಿಪರ ಅಗತ್ಯತೆ'ಗಳನ್ನು ಸಮತೋಲಿತವಾಗಿ ಕಾಣುತ್ತದೆ ಎಂದು ಜೇಟ್ಲಿ ತಮ್ಮ ಫೇಸ್ ಬುಕ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
ಆಯೋಗದ ಉಲ್ಲೇಖಿತ ನಿಯಮಗಳು ದೇಶದ ಯಾವುದೋ ನಿರ್ದಿಷ್ಟ ಪ್ರದೇಶದ ವಿರುದ್ಧ ರೂಪಿಸಲಾಗಿದೆ ಎಂದು ಅನಾವಶ್ಯಕವಾದ ವಿವಾದವ ಸೃಷ್ಟಿಸಲು ಪ್ರಯತ್ನಿಸಲಾಗುತ್ತಿದೆ .ಆದರೆ ಸತ್ಯದಿಂದ ಯಾವುದೂ ಹೊರತಾಗಿಲ್ಲ.- ಜೇಟ್ಲಿ ಹೇಳಿದ್ದಾರೆ.
ತಮ್ಮ ಜನರಿಗೆ ಕನಿಷ್ಟ ಗುಣಮಟ್ಟದ ಸೇವೆಗಳನ್ನು ಒದಗಿಸುವಲ್ಲಿ ಹಣಕಾಸಿನ ಕೊರತೆಯನ್ನು ಪೂರೈಸಲು ಸಹಾಯ ಆಗುವಂತೆ ಆಯೋಗ ನೀಡಿದ ಶಿಫಾರಸಿನ ಆಧಾರದಲ್ಲಿ ರಾಜ್ಯಗಳಿಗೆ ಹಣಕಾಸು ಹಂಚಿಕೆ ಮಾಡಲಾಗುವುದು  ಇದು ಸಮಾನತೆ ಆಧಾರದ ಮೇಲೆ ರಾಜ್ಯಗಳಿಗೆ 'ಅಗತ್ಯತೆಗಳನ್ನು' ನಿರ್ಣಯಿಸಲು ಬದ್ದವಾಗಿದೆ.
ಆಯೋಗವು ರಾಜ್ಯಗಳ ಜವಾದ ಅಗತ್ಯಗಳನ್ನು ನಿರ್ಣಯಿಸಲು ಸರಿಯಾದ ಮಾನದಂಡಗಳನ್ನು ಬಳಸುತ್ತವೆ.
ಆದಾಯದ ಅಂತರವನ್ನು ಮಾನದಂಡವಾಗಿ ಬಳಸಿಕೊಳ್ಳಲಾಗುವುದು ಇದು ಆಯಾ ರಾಜ್ಯಗಳಲ್ಲಿನ ಬಡವರ ಸಂಖ್ಯೆಯ ಮೇಲೆ ನಿರ್ಧರಿತವಾಗಲಿದೆ.ಜನಸಂಖ್ಯೆ ಮತ್ತು ಬಡ ರಾಜ್ಯಗಳಿಗೆ ಹೆಚ್ಚಿನ ಸಂಪನ್ಮೂಲಗಳನ್ನು ಹಂಚಿಕೆ ಮಾಡಲಾಗುತ್ತದೆ.ಇಂತಹಾ ರಾಜ್ಯಗಳಲ್ಲಿ  ಜನರಿಗೆ ಶಿಕ್ಷಣ, ಆರೋಗ್ಯ ಮತ್ತು ಇತರ ಸೇವೆಗಳನ್ನು ಒದಗಿಸುವ ಹೆಚ್ಚುವರಿ ಹಣ ಬೇಕಾಗುತ್ತದೆ, 
2011 ರ ಜನಗಣತಿಗಾಗಿ 14 ನೇ ಹಣಕಾಸು ಆಯೋಗವು ಯಾವುದೇ ನಿರ್ದಿಷ್ಟ ಆದೇಶವನ್ನು ಹೊಂದಿಲ್ಲ ಆದರೆ ಜನಸಂಖ್ಯಾ ಬದಲಾವಣೆಗಳನ್ನು ಗಮನದಲ್ಲಿರಿಸಿಕೊಂಡು ಇದು 2011 ರ ಜನಗಣತಿಯ ಜನಸಂಖ್ಯಾ ಅಂದಾಜು ಬಳಸಿಕೊಲ್ಲಲಾಗಿದೆ. 14 ನೇ ಹಣಕಾಸು ಆಯೋಗವು  ರಾಜ್ಯಗಳಿಗೆ ಕೇಂದ್ರ ತೆರಿಗೆಗಳಲ್ಲಿ ಶೇ. 42 ರಷ್ಟು ಪಾಲನ್ನು ನಿಗದಿಪಡಿಸಿದೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com