ಭಾರತದಲ್ಲಿ ಕಡಿಮೆ ವ್ಯಾಪ್ತಿಯ ಕ್ಷಿಪಣಿ ತಯಾರಿಕೆಗೆ ಸಾಬ್ ಉತ್ಸುಕ

ಸ್ವೀಡನ್‌ನ ಪ್ರಮುಖ ಶಸ್ತ್ರಾಸ್ತ್ರ ತಯಾರಿಕಾ ಸಂಸ್ಥೆ ಸಾಬ್‌ ಭಾರತದಲ್ಲಿ ಕಡಿಮೆ ವ್ಯಾಪ್ತಿಯ ಕ್ಷಿಪಣಿ ತಯಾರಿಕೆಗೆ ಉತ್ಸಾಹ ತೋರಿದ್ದು, ಭಾರತ ಸರ್ಕಾರದಿಂದ ಪೂರೈಕೆ ಆದೇಶ (supply order) ನೀಡಿದರೆ ಉತ್ಪಾದನೆ
ಭಾರತದಲ್ಲಿ ಕಡಿಮೆ ವ್ಯಾಪ್ತಿಯ ಕ್ಷಿಪಣಿ ತಯಾರಿಕೆಗೆ ಸಾಬ್ ಉತ್ಸುಕ
ಭಾರತದಲ್ಲಿ ಕಡಿಮೆ ವ್ಯಾಪ್ತಿಯ ಕ್ಷಿಪಣಿ ತಯಾರಿಕೆಗೆ ಸಾಬ್ ಉತ್ಸುಕ
ನವದೆಹಲಿ: ಸ್ವೀಡನ್‌ನ ಪ್ರಮುಖ ಶಸ್ತ್ರಾಸ್ತ್ರ ತಯಾರಿಕಾ ಸಂಸ್ಥೆ ಸಾಬ್‌ ಭಾರತದಲ್ಲಿ ಕಡಿಮೆ ವ್ಯಾಪ್ತಿಯ ಕ್ಷಿಪಣಿ ತಯಾರಿಕೆಗೆ ಉತ್ಸಾಹ ತೋರಿದ್ದು, ಭಾರತ ಸರ್ಕಾರದಿಂದ ಪೂರೈಕೆ ಆದೇಶ (supply order) ನೀಡಿದರೆ  ಉತ್ಪಾದನೆ ಪ್ರಾರಂಭಿಸುವುದಾತಿ ತಿಳಿಸಿದೆ. 
ಸ್ಥಳೀಯವಾಗಿ ಬೇಕಿರುವ ಉಪಕರಣಗಳನ್ನು ಪಡೆದುಕೊಳ್ಳುವುದಕ್ಕಾಗಿ ಭಾರತದ 110 ಕಂಪನಿಗಳೊಂದಿಗೆ ಸಂಪರ್ಕದಲ್ಲಿರುವುದಾಗಿ ತಿಳಿಸಿದೆ. ಕಡಿಮೆ ವ್ಯಾಪ್ತಿಯ ಕ್ಷಿಪಣಿ (VSHORAD) ವ್ಯವಸ್ಥೆಯ ಪ್ರಸ್ತಾವನೆ ಸುಮಾರು 10 ವರ್ಷದಿಂದ ನೆನೆಗುದಿಗೆ ಬಿದ್ದಿದ್ದು, ಈ ಅವಕಾಶವನ್ನು ಮೇಕ್ ಇನ್ ಇಂಡಿಯಾ ಮೂಲಕ ಬಳಸಿಕೊಳ್ಳಲು ಸಾಬ್ ಉತ್ಸಾಹ ತೋರಿದೆ. 
ನಾವು ನಮ್ಮ ಉತ್ಪನ್ನದೊಂದಿಗೆ ಸಿದ್ಧವಿದ್ದೇವೆ, ಗ್ರಾಹಕ( ಭಾರತ ಸರ್ಕಾರ) ಪಡೆದುಕೊಳ್ಳುವುದಷ್ಟೇ ಬಾಕಿ ಎಂದು ಸಾಬ್ ಡೈನಮಿಕ್ಸ್ ನ ವಾಣಿಜ್ಯ ವಿಭಾಗದ ನಿರ್ದೇಶಕ ಬೋ ಆಲ್ಕ್ವಿಸ್ಟ್ ತಿಳಿಸಿದ್ದಾರೆ. ಇದೇ ವೇಳೆ ಏ.11 ರಿಂದ ನಡೆಯುವ 2018 ನೇ ಸಾಲಿನ ಡಿಫೆನ್ಸ್ ಎಕ್ಸ್ಪೋದಲ್ಲಿ ತಂತ್ರಜ್ಞಾನ ಪ್ರದರ್ಶನದಲ್ಲಿ ಸಾಬ್ ಭಾಗಿಯಾಗಲಿವೆ. 
ರಷ್ಯಾದಿಂದ ಪಡೆದುಕೊಂಡಿರುವ ಕಡಿಮೆ ವ್ಯಾಪ್ತಿಯ ಕ್ಷಿಪಣಿ ವ್ಯವಸ್ಥೆಯನ್ನು ಬದಲಾವಣೆ ಮಾಡಬೇಕಿದ್ದು, ಈ ವರ್ಷ ಭಾರತ ಸರ್ಕಾರ ಹೊಸ ಕ್ಷಿಪಣಿ ವ್ಯವಸ್ಥೆಯನ್ನು ಖರೀದಿಸುವುದರ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com