ಷಹಜಹಾನ್ ತಾಜ್ ಮಹಲ್ ನ್ನು ವಕ್ಫ್ ಮಂಡಳಿಗೆ ನೀಡಿದ್ದರ ಕುರಿತು ದಾಖಲೆ ಸಲ್ಲಿಸಿ: ಸುಪ್ರೀಂ ಕೋರ್ಟ್

ಮೊಘಲ್ ಚಕ್ರವರ್ತಿ ಷಹಜಹಾನ್ ತಮಗೆ ತಾಜ್ ಮಹಲ್ ಒಡೆತನವನ್ನು ನಿಡಿದ್ದನೆಂದು ವಾದಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಉತ್ತರ ಪ್ರದೇಶ ಸುನ್ನಿ ...........
ತಾಜ್ ಮಹಲ್
ತಾಜ್ ಮಹಲ್
ನವದೆಹಲಿ: ಮೊಘಲ್ ಚಕ್ರವರ್ತಿ ಷಹಜಹಾನ್ ತಮಗೆ ತಾಜ್ ಮಹಲ್ ಒಡೆತನವನ್ನು ನಿಡಿದ್ದನೆಂದು ವಾದಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಉತ್ತರ ಪ್ರದೇಶ ಸುನ್ನಿ ವಕ್ಫ್ ಮಂಡಳಿಗೆ ನ್ಯಾಯಾಲಯವು ಷಹಜಹಾನ್ ಸಹಿ ಹೊಂದಿರುವ ದಾಖಲೆಗಳನ್ನು ಸಲ್ಲಿಸುವಂತೆ ಕೇಳಿದೆ.
ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರಿದ್ದ ಪೀಠವು 1631 ರಲ್ಲಿ ತಾಜ್ ಮಹಲ್ ಅನ್ನು ತನ್ನ ಪತ್ನಿ ಮುಮ್ತಾಜ್ ಮಹಲ್ ನೆನಪಿಗಾಗಿ ಷಹಜಹಾನ್ ನಿರ್ಮಿಸಿದ್ದ ತಾಜ್ ಮಹಲ್ ನ್ನು ವಕ್ಫ್ ಮಂಡಳಿ ಆಡಳಿತಕ್ಕೆ ನೀಡಿರುವ 'ವಕ್ಫ್ನಾಮಾ'ವನ್ನು ಸಲ್ಲಿಸುವಂತೆ ಕೇಳಿದೆ.
ವಕ್ಫ್ನಾಮಾ’ ಎನ್ನುವುದು ಪತ್ರ ಅಥವಾ ದತ್ತಾಧಿಕಾರವಾಗಿದ್ದು ಇದರ ಮೂಲಕ ವ್ಯಕ್ತಿಯು ದತ್ತಿ ಉದ್ದೇಶಗಳಿಗಾಗಿ ಆಸ್ತಿ ಅಥವಾ ಭೂಮಿ ದಾನ ಮಾಡಿರುವುದನ್ನು ದೃಢಪಡಿಸಬಹುದಾಗಿದೆ.
"ತಾಜ್ ವಕ್ಫ್ ಮಂಡಳಿಗೆ ಸೇರಿದೆ ಎಂದು ಭಾರತದಲ್ಲಿ ಯಾರು ನಂಬುತ್ತಾರೆ?" ಎಂದು ಪೀಠವು ಪ್ರಶ್ನಿಸಿದ್ದು ಇಂತಹಾ ವಿಚಾರಗಳೊಡನೆ ನ್ಯಾಯಾಲಯಕ್ಕೆ ಬಂದು ನ್ಯಾಯಾಲಯದ ಸಮಯ ವ್ಯರ್ಥಗೊಳಿಸಬಾರದು ಎಂದಿದೆ.
ಷಹಜಹಾನ್ ಸ್ವತಃ ತಾಜ್ ಮಹಲ್ ನ್ನು ವಕ್ಫ್ ಆಸ್ತಿ ಎಂದು ಘೋಷಿಸಿದರು, ಎಂದು ವಕ್ಫ್ ಮಂಡಳಿ ಹೇಳಿದಾಗ ಮುಘಲ್ ಚಕ್ರವರ್ತಿಯು  ಹಾಗೆಂದು ಬರೆದು ಸಹಿ ಮಾಡಿರುವ ದಾಖಲೆಯನ್ನು ನಿಡುವಂತೆ ಪೀಠವು ಆದೇಶ ನೀಡಿದೆ.
ತಾಜ್ ಮಹಲ್ ಅನ್ನು  ವಕ್ಫ್  ಮಂಡಳಿಯ  ತನ್ನದೆಂದು ಹೇಳುವುದರ ವಿರುದ್ಧ ಆರ್ಕಿಯಲಾಜಿಕಲ್ ಸರ್ವೆ ಆಫ್ ಇಂಡಿಯಾ ಸಲ್ಲಿಸಿದ 2010 ರ ಮೇಲ್ಮನವಿಯನ್ನು ನ್ಯಾಯಾಲಯ ಇಂದು ವಿಚಾರಣೆಗೆ ತೆಗೆದುಕೊಂಡಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com