ಕೃಷ್ಣಾ ನದಿ ನೀರನ್ನು ನಾಲ್ಕು ರಾಜ್ಯಗಳಿಗೆ ಯೋಜನೆವಾರು ಹಂಚಿಕೆ ಮಾಡಬೇಕು: ಆಂಧ್ರ ಪ್ರದೇಶ

ಆಂಧ್ರ ಪ್ರದೇಶ ಮತ್ತು ತೆಲಂಗಾಣ ನಡುವೆ ಕೃಷ್ಣಾ ನದಿ ನೀರು ಹಂಚಿಕೆ ಹಲವು ಸಮಸ್ಯೆಗಳನ್ನು ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹೈದರಾಬಾದ್: ಆಂಧ್ರ ಪ್ರದೇಶ ಮತ್ತು ತೆಲಂಗಾಣ ನಡುವೆ ಕೃಷ್ಣಾ ನದಿ ನೀರು ಹಂಚಿಕೆ ಹಲವು ಸಮಸ್ಯೆಗಳನ್ನು ಹುಟ್ಟುಹಾಕಿದೆ. ಕೃಷ್ಣಾ ನದಿ ಜಲವಿಜ್ಞಾನದ ಘಟಕ ಕಾರ್ಯನಿರ್ವಹಣೆ ಶಿಷ್ಠಾಚಾರವನ್ನು ನಿರ್ಧರಿಸುತ್ತದೆ ಎಂದು ಕೃಷ್ಣಾ ಜಲ ವಿವಾದ ನ್ಯಾಯಧೀಕರಣದ ಮುಂದೆ ಆಂಧ್ರ ಪ್ರದೇಶ ಸರ್ಕಾರ ವಾದಿಸಿದೆ.

ನಿನ್ನೆ ಆಂಧ್ರ ಪ್ರದೇಶ ಸರ್ಕಾರ ಪರ ವಕೀಲ ಬ್ರಿಜೇಶ್ ಕುಮಾರ್ ನ್ಯಾಯಾಧೀಕರಣ ಮುಂದೆ ಅಫಿದವಿತ್ತು ಸಲ್ಲಿಸಿದ್ದು ಕೃಷ್ಣನದಿ ನೀರಿನ ಯೋಜನಾವಾರು ಹಂಚಿಕೆ ಜಾರಿಗೆ ಒತ್ತಾಯಿಸಿದ್ದಾರೆ. ಆಂಧ್ರ ಪ್ರದೇಶ ಪುನರ್ರಚನೆ ಕಾಯ್ದೆ 2014ರ  ಸೆಕ್ಷನ್ 89ರಡಿಯಲ್ಲಿ ನೀರಿನ ಹಂಚಿಕೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.

ಕೃಷ್ಣಾ ನದಿ ನೀರನ್ನು ನಾಲ್ಕು ರಾಜ್ಯಗಳಿಗೆ ಯೋಜನಾವಾರು ಹಂಚಿಕೆ ಮಾಡಬೇಕೆಂದು ಆಂಧ್ರ ಪ್ರದೇಶ ಮತ್ತು ತೆಲಂಗಾಣ ಸರ್ಕಾರಗಳು ಒತ್ತಾಯಿಸಿದರೂ ಕೂಡ ನ್ಯಾಯಾಧೀಕರಣ ಈ ಹಿಂದೆ ಆಂಧ್ರಪ್ರದೇಶ ಪುನರ್ರಚನೆ ಕಾಯ್ದೆ ಸಾಧ್ಯತೆಗಳು ಮಹಾರಾಷ್ಟ್ರ ಮತ್ತು ಕರ್ನಾಟಕಕ್ಕೆ ಅನ್ವಯವಾಗುವುದಿಲ್ಲ ಎಂದು ಹೇಳಿತ್ತು. ಇದೀಗ ಕೃಷ್ಣಾ ನದಿ ನೀರನ್ನು ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಿಗೆ ಯೋಜನಾವಾರು ಹಂಚಿಕೆ ಮಾಡಬೇಕೆಂಬ ಚರ್ಚೆಗಳು ನಡೆಯುತ್ತಿವೆ.

ಕೃಷ್ಣಾ ನದಿ ನೀರು ಹರಿದುಹೋಗುವ  ಎಲ್ಲಾ ನಾಲ್ಕು ರಾಜ್ಯಗಳಿಗೆ ನೀರಿನ ಯೋಜನಾವಾರು ಹಂಚಿಕೆ ಮಾಡಬೇಕೆಂದು ಆಂಧ್ರಪ್ರದೇಶ ಪುನರುಚ್ಛರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com