ಆಧಾರ್ ನಿಂದ ಅಕ್ರಮ ಹಣದ ವರ್ಗಾವಣೆ ನಿಗ್ರಹ ಹೇಗೆ? ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಪ್ರಶ್ನೆ

ಆರ್ಥಿಕತೆಗೆ ಬೆದರಿಕೆಯೊಡ್ಡಿರುವ ಅಕ್ರಮ ಹಣ ವರ್ಗಾವಣೆಯನ್ನು ಆಧಾರ್ ಕಾರ್ಡ್ ನಿಂದ ಹೇಗೆ ನಿಯಂತ್ರಿಸಲು ಸಾಧ್ಯ ಎಂದು ಸರ್ವೋಚ್ಚ ನ್ಯಾಯಾಲಯ ಇಂದು ಕೇಂದ್ರವನ್ನು ಪ್ರಶ್ನಿಸಿದೆ.
ಆಧಾರ್
ಆಧಾರ್
ನವದೆಹಲಿ: ಆರ್ಥಿಕತೆಗೆ ಬೆದರಿಕೆಯೊಡ್ಡಿರುವ ಅಕ್ರಮ ಹಣ ವರ್ಗಾವಣೆಯನ್ನು ಆಧಾರ್ ಕಾರ್ಡ್ ನಿಂದ ಹೇಗೆ ನಿಯಂತ್ರಿಸಲು ಸಾಧ್ಯ ಎಂದು ಸರ್ವೋಚ್ಚ ನ್ಯಾಯಾಲಯ ಇಂದು ಕೇಂದ್ರವನ್ನು ಪ್ರಶ್ನಿಸಿದೆ.
ಆಧಾರ್ ನ ಸಿಂಧುತ್ವದ ಸಂಬಂಧ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಐವರು ಸದಸ್ಯರ ಪೀಠವು ವಿಶಿಷ್ಟ ಗುರುತಿನ ಪ್ರಾಧಿಕಾರದ (ಯುಐಡಿಎಐ) ಹವಾಲಾ ವಹಿವಾಟುಗಳು, ಅಕ್ರಮ ಹಣದ ವರ್ಗಾವಣೆ, ತಡೆಯುವಲ್ಲಿ ಹೇಗೆ ಸಹಕಾರಿಯಾಗುವುದು ಎಂದು ಕೇಳಿದೆ.
ಆಧಾರ್ ನ್ನು ಪಾನ್ ಕಾರ್ಡ್ ನೊಡನೆ ಲಿಂಕ್ ಮಾಡುವುದರಿಂದ ಅಕ್ರಮ ಹಣದ ವಹಿವಾಟನ್ನು ತಡೆಗಟ್ಟಬಹುದು ಎಂದು ಕೇಂದ್ರವು ವಾದ ಮಂಡಿಸಿತ್ತು. ಇದಾಗಲೇ ಆಧಾರ್ -ಪಾನ್ ಲಿಂಕಿಂಗ್ ಮುಖೇನ ಅಧಿಕಾರಿಗಳು 33,000 ಕೋಟಿ ರೂ. ಅಕ್ರಮ ಹಣ ಪತ್ತೆ ಮಾಡಿದ್ದಾರೆ ಎಂದು ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ.
ಆಧಾರ್ ಸಂಖ್ಯೆಯನ್ನು ಪಾನ್ ಜೊತೆಗೆ ಲಿಂಕ್ ಮಾಡುವುದರಿಂದ ಆದಾಯ ತೆರಿಗೆ ತಪ್ಪಿಸುವುದು, ಕಪ್ಪು ಹಣದ ಚಲಾವಣೆ, ತಡೆಗಟ್ಟಬಹುದೆಂದು ಕೇಂದ್ರ ಸಲ್ಲಿಸಿದ್ದ ಅರ್ಜಿಯಲ್ಲಿ ಹೇಳಲಾಗಿದೆ.
ಇದಕ್ಕೆ ಉತ್ತರವಾಗಿ ನ್ಯಾಯಪೀಠವು "ಅಕ್ರಮ ಹಣದ ವರ್ಗಾವಣೆಯೆನ್ನುವುದು ಒಂದು ಗಂಬೀರ ಸಮಸ್ಯೆ  ಹೌದು. ಆದರೆ ಆಧಾರ್ ಯೋಜನೆ ಇದಕ್ಕೆ ಹೇಗೆ ಪರಿಹಾರ ಒದಗಿಸುತ್ತದೆ ಎಂದು ಪ್ರಶ್ನಿಸಿದೆ.
ಪಾನ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಗಳು ಮತ್ತು ಇತರ ಸೌಲಭ್ಯಗಳೊಂದಿಗೆ ಆಧಾರ್ ಲಿಂಕ್ ಮಾಡುವುದರಿಂದ ಅಕ್ರಮ ಹಣದ ವರ್ಗಾವಣೆ ತಡೆಗಟ್ಟಲು ಅಧಿಕಾರಿಗಳಿಗೆ ನೆರವಾಗಲಿದೆ ಎಂದು ಯುಐಡಿಎಐ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದ್ದಾರೆ. ಆಧಾರ್ ಜೋಡಣೆಯು ಪಿಎಂಎಲ್ಎ ಕಾನೂನನ್ನು ಬಲಪಡಿಸಲಿದೆ.
2013 ರಿಂದ ಪಿಎಂಎಲ್ಎ ಕಾಯ್ದೆ ಕಠಿಣವಾಗಿದ್ದು  ತಿದ್ದುಪಡಿ ಮಾಡಲಾದ ನಿಯಮಗಳು  ಬ್ಯಾಂಕ್ ಖಾತೆ ತೆರೆಯಲು ಆಧಾರ್ ಕಡ್ಡಾಯ ಆದೇಶಕ್ಕೆ ಮಾನ್ಯತೆ ನಿಡಿದೆ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com