ಐಇಎಫ್ '18: ಭಾರತದ ಆರ್ಥಿಕ ಪ್ರಗತಿಯಲ್ಲಿ ಇಂಧನ ಕ್ಷೇತ್ರದ ಪಾತ್ರ ಮಹತ್ವದು- ಸುಷ್ಮಾ ಸ್ವರಾಜ್

ದೇಶದ ಆರ್ಥಿಕ ಪ್ರಗತಿಯಲ್ಲಿ ಇಂಧನ ಕ್ಷೇತ್ರದ ಪಾತ್ರ ಮಹತ್ವದ್ದಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಪ್ರತಿಪಾದಿಸಿದ್ದಾರೆ.
ಸುಷ್ಮಾ ಸ್ವರಾಜ್
ಸುಷ್ಮಾ ಸ್ವರಾಜ್

ನವದೆಹಲಿ : ದೇಶದ ಆರ್ಥಿಕ ಪ್ರಗತಿಯಲ್ಲಿ ಇಂಧನ ಕ್ಷೇತ್ರದ ಪಾತ್ರ ಮಹತ್ವದ್ದಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್  ಪ್ರತಿಪಾದಿಸಿದ್ದಾರೆ.

ಅಂತಾರಾಷ್ಟ್ರೀಯ ಇಂಧನ ವೇದಿಯ  16 ನೇ ಆವೃತ್ತಿಯ ಸಮಾರೋಪ ಸಮಾರಂಭದಲ್ಲಿ  ಮಾತನಾಡಿದ ಅವರು, ತೈಲ ಮತ್ತು ಅನಿಲ ಕಾರ್ಯತಂತ್ರದ ಸರಕುಗಳಾಗಿವೆ. ಆರ್ಥಿಕ ಪ್ರಗತಿಯಲ್ಲಿ ಇಂಧನ ಪ್ರಮುಖವಾಗಿದ್ದು, ನವೀಕರಿಸಬಹುದಾದ ಇಂಧನಗಳಿಗೆ ನಾವು ಹೆಚ್ಚಿನ ಗಮನ ಕೇಂದ್ರೀಕರಿಸಬೇಕಾಗಿದೆ ಎಂದು ಹೇಳಿದರು.

 ಸೌರ ಇಂಧನ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಭಾರತ ಮತ್ತು ಫ್ರಾನ್ಸ್ ನಡುವೆ 2016ರಲ್ಲಿ ಅಂತಾರಾಷ್ಟ್ರೀಯ ಸೌರ ಒಪ್ಪಂದ  ಮಾಡಿಕೊಳ್ಳಲಾಗಿದೆ.  ರಾಯಬಾರ ವ್ಯವಹಾರದಲ್ಲಿಯೂ ಇಂಧನ ಪ್ರಮುಖವಾಗಿದ್ದು,ಭೌಗೋಳಿಕ ರಾಜಕಾರಣದಲ್ಲಿ ಅನಿಲ ಸಂಕೀರ್ಣ ಸ್ವರೂಪದಾಗಿದೆ ಎಂದರು.

ಹವಾಮಾನ ವೈಫರೀತ್ಯ ನಿಯಂತ್ರಣಕ್ಕಾಗಿ ಭಾರತ ಕಾರ್ಯೋನ್ಮುಖವಾಗಿದೆ. ಶುದ್ಧ ಇಂಧನಕ್ಕಾಗಿ ಹಲವಾರು ನೀತಿಗಳನ್ನು ಜಾರಿಗೊಳಿಸಲಾಗಿದೆ. ಈ ಕ್ಷೇತ್ರದಲ್ಲಿನ ಸಾಧನೆಗಾಗಿ ವಿಶ್ವದ ವಿವಿಧ ರಾಷ್ಟ್ರಗಳಿಂದ  ತಂತ್ರಜ್ಞಾನವನ್ನು ನಿರೀಕ್ಷಿಸಲಾಗುತ್ತಿದೆ . 2022ರೊಳಗೆ ದೇಶ 175 ಜಿ ಡಬ್ಲ್ಯೂ ನಷ್ಟು ಇಂಧನ ಉತ್ಪಾಧಿಸುವ ನಿರೀಕ್ಷೆ ಹೊಂದಲಾಗಿದೆ ಎಂದು ಸುಷ್ಮಾ ಸ್ವರಾಜ್ ತಿಳಿಸಿದರು.




ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com