ನಟಿ ಶ್ರೀರೆಡ್ಡಿ ಅರೆನಗ್ನ ಪ್ರತಿಭಟನೆ: ಕೇಂದ್ರ, ತೆಲಂಗಾಣ ಸರ್ಕಾರಕ್ಕೆ ಎನ್ ಎಚ್ ಆರ್ ಸಿ ನೋಟಿಸ್

ಟಾಲಿವುಡ್ ನಟಿ ಶ್ರೀರೆಡ್ಡಿ ಅವರು ಕಳೆದ ಶನಿವಾರ ತೆಲುಗು ಚಲನಚಿತ್ರ ವಾಣಿಜ್ಯ ಮಂಡಳಿ ಮುಂಭಾಗ ಬಟ್ಟೆ ಕಳಚಿ...
ತೆಲುಗು ನಟಿ ಶ್ರೀರೆಡ್ಡಿ
ತೆಲುಗು ನಟಿ ಶ್ರೀರೆಡ್ಡಿ
ನವದೆಹಲಿ: ಟಾಲಿವುಡ್ ನಟಿ ಶ್ರೀರೆಡ್ಡಿ ಅವರು ಕಳೆದ ಶನಿವಾರ ತೆಲುಗು ಚಲನಚಿತ್ರ ವಾಣಿಜ್ಯ ಮಂಡಳಿ ಮುಂಭಾಗ ಬಟ್ಟೆ ಕಳಚಿ ಅರೆನಗ್ನ ಪ್ರತಿಭಟನೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ(ಎನ್ ಎಚ್ ಆರ್ ಸಿ) ತೆಲಂಗಾಣ ಸರ್ಕಾರ ಮತ್ತು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ನೋಟಿಸ್ ಜಾರಿ ಮಾಡಿದೆ.
ಘಟನೆಗೆ ಸಂಬಂಧಿಸಿದಂತೆ ನಾಲ್ಕು ವಾರಗಳಲ್ಲಿ ವಿಸ್ತೃತ ವರದಿ ನೀಡುವಂತೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸಚಿವಾಲಯಕ್ಕೆ ಎನ್ ಎಚ್ ಆರ್ ಸಿ ಸೂಚಿಸಿದೆ.
ಘಟನೆ ಸಂಬಂಧ ಹೈದರಾಬಾದ್ ಪೊಲೀಸರು ಸಹ ನಟಿ ಶ್ರೀರೆಡ್ಡಿ ವಿರುದ್ಧ ಐಪಿಸಿ ಸೆಕ್ಷನ್ 294(ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲ ಚಟುವಟಿಕೆ ತಡೆ ಕಾಯ್ದೆ)ರಡಿ ಕೇಸ್ ದಾಖಲಿಸಿಕೊಂಡಿದ್ದಾರೆ.
ಲುಗು ಚಿತ್ರರಂಗದಲ್ಲಿನ ನಡೆಯುತ್ತಿರುವ ಕಾಸ್ಟಿಂಗ್ ಕೌಚ್(ಲೈಂಗಿಕ ಕಿರುಕುಳ) ನಿಲ್ಲಿಸಬೇಕು ಎಂದು ಒತ್ತಾಯಿಸಿ ಶ್ರೀರೆಡ್ಡಿ ಅವರು ಸಾರ್ವಜನಿಕವಾಗಿಯೇ ಅರೆನಗ್ನ ಪ್ರತಿಭಟನೆ ನಡೆಸಿದ್ದರು.
 ತೆಲುಗು ನಿರ್ದೇಶಕರು ಮತ್ತು ನಿರ್ಮಾಪಕರು ಸಿನಿಮಾಗಳಲ್ಲಿ ನಟಿಸುವ ನಟಿಯರಿಗೆ ಲೈಂಗಿಕ ಕಿರುಕುಳ ನೀಡುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ಇಂತಹ ಕಾಸ್ಟಿಂಗ್ ಕೌಚ್ ತೆಲುಗು ಸಿನಿಮಾ ರಂಗದಲ್ಲಿ ನಿಲ್ಲಬೇಕೆಂದು ಶ್ರೀರೆಡ್ಡಿ ಆಗ್ರಹಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com