ಭಾರತ-ಪಾಕ್ ಗಡಿಯ ಭದ್ರತೆಗೆ ವಿದ್ಯುತ್ ತಂತಿಗಳ ನಿಯೋಜನೆ

ರಾಜಸ್ತಾನದ ಭಾಗದಲ್ಲಿ ಅಂತರಾಷ್ಟ್ರೀಯ ಗಡಿಭಾಗದಲ್ಲಿ ಕಳ್ಳಸಾಗಣೆ ಮತ್ತು ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಜೋಧ್ ಪುರ(ರಾಜಸ್ತಾನ): ರಾಜಸ್ತಾನದ ಭಾಗದಲ್ಲಿ ಅಂತರಾಷ್ಟ್ರೀಯ ಗಡಿಭಾಗದಲ್ಲಿ ಕಳ್ಳಸಾಗಣೆ ಮತ್ತು ಒಳನುಸುಳುಕೋರರು ಕೇಸುಗಳು ಹೆಚ್ಚಾಗುತ್ತಿರುವುದನ್ನು ತಡೆಯಲು ತೀವ್ರ ಭದ್ರತೆ ವ್ಯವಸ್ಥೆಯನ್ನು ಅಧಿಕಾರಿಗಳು ಮಾಡುತ್ತಿದ್ದಾರೆ.

ಗಡಿ ಭದ್ರತಾ ಪಡೆ ಮಾತ್ರವಲ್ಲದೆ ಭಾರತ-ಪಾಕಿಸ್ತಾನ ಗಡಿಯಲ್ಲಿ ರಾಜಸ್ತಾನದ ಭಾಗದಲ್ಲಿ ಸುಮಾರು 840 ಕಿಲೋ ಮೀಟರ್ ಉದ್ದಕ್ಕೆ ವಿದ್ಯುತ್ ತಂತಿಗಳನ್ನು ಹಾಕಿ ಗಡಿಯನ್ನು ಒಳನುಸುಳುಕೋರರು ನುಗ್ಗದಂತೆ ಮುಂದಿನ ದಿನಗಳಲ್ಲಿ ಮುಚ್ಚಲಾಗುತ್ತದೆ.

ಮುಳ್ಳುತಂತಿಯ ವಿದ್ಯುತ್ ತಂತಿಗಳನ್ನು ಕತ್ತರಿಸಲು ಪ್ರಯತ್ನಿಸಿದರೆ ಭದ್ರತಾ ಪಡೆಗಳಿಗೆ ಎಚ್ಚರಿಕೆ ನೀಡುವ ಸಾಧನವನ್ನು ಅಳವಡಿಸಲಾಗುತ್ತದೆ. ಕಡಿಮೆ ವ್ಯಾಟ್ ಬಲ್ಬ್ ಗಳನ್ನು ಬಳಸಲಾಗುತ್ತದೆ.

ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗುವುದು. ಪಾಕಿಸ್ತಾನದ ಗಡಿಯಲ್ಲಿ ನಮ್ಮ ಗಡಿಭಾಗವನ್ನು ಬಲಪಡಿಸಲು ಕೋಬ್ರಾ ತಂತಿಗಳು ಮತ್ತು ಇತರ ಕಣ್ಗಾವಲು ಸಲಕರಣೆಗಳನ್ನು ಅಳವಡಿಸಲಾಗುತ್ತದೆ. ಬೇಸಿಗೆ ಕಾಲದಲ್ಲಿ ಬಿಸಿಲಿನ ಝಳವನ್ನು ತಡೆಯಲು ನಮ್ಮ ಜವಾನರಿಗೆ ಅನುಕೂಲಮಾಡಿಕೊಡಲು ನೀರಿನ ಶೈತ್ಯಕಾರಕಗಳು ಮತ್ತು ಫ್ರೀಜರ್ ಗಳನ್ನು ಅಳವಡಿಸಲಾಗುವುದು ಎಂದು ಗಡಿ ಭದ್ರತಾ ಪಡೆಯ ಡಿಐಜಿ ರವಿ ಗಾಂಧಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಜವಾನರಿಗೆ ತರಕಾರಿ ಮತ್ತು ಹಣ್ಣುಗಳನ್ನು ಒದಗಿಸಲಾಗುವುದು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com