ನವದೆಹಲಿ: ಸಾಲದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬಾಲಿವುಡ್ ಹಾಸ್ಯನಟ ರಾಜ್ ಪಾಲ್ ಯಾದವ್ ವರ ಪತ್ನಿ ರಾಧಾ ಯಾದವ್ ಹಾಗೂ ಸಂಸ್ಥೆಯು ದೋಷಿ ಎಂದು ದೆಹಲಿ ನ್ಯಾಯಾಲಯ ತೀರ್ಪು ನೀಡಿದೆ.
ರಾಜ್ ಪಾಲ್ ಹಾಗು ಆತನ ಪತ್ನಿ 2010 ರಲ್ಲಿ ತಮ್ಮ ಚಿತ್ರವೊಂದರ ತಯಾರಿಕೆಗಾಗಿ ದೆಹಲಿ ಮೂಲದ ಉದ್ಯಮಿಯಿಂದ ಪಡೆದಿದ್ದ 5 ಕೋಟಿ ರೂ. ಸಾಲವನ್ನು ಮರುಪಾವತಿಸಲು ವಿಫಲರಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ಸುಳ್ಳು ಅಫಿದಾವಿತ್ ಸಲ್ಲಿಸಿದ್ದ ರಾಜ್ ಪಾಲ್ 2013ರ ಡಿಸೆಂಬರ್ 3 ರಿಂದ ಡಿಸೆಂಬರ್ 6 ರವರೆಗೆ ತಿಹಾರ್ ಜೈಲು ಪಾಲಾಗಿದ್ದರು.
ಪ್ರಸ್ತುತ ನ್ಯಾಯಾಲಯದ ಆದೇಶದ ಸಂಬಂಧ ವಾದವನ್ನು ಏಪ್ರಿಲ್ 23ರಂದು ಆಲಿಸಲಾಗುವುದು ಎಂದು ನ್ಯಾಯಾಲಯ ಹೇಳಿದೆ.