ವಿಷ್ಣು ಸದಾಶಿವ ಕೊಕ್ಜೆ
ದೇಶ
ವಿಹೆಚ್‍ಪಿ ನೂತನ ಅಂತರಾಷ್ಟ್ರೀಯ ಅಧ್ಯಕ್ಷರಾಗಿ ವಿ.ಎಸ್ ಕೊಕ್ಜೆ ಆಯ್ಕೆ
ವಿಶ್ವ ಹಿಂದೂ ಪರಿಷತ್ ಇತಿಹಾಸದಲ್ಲಿ ಮೊದಲ ಬಾರಿಗೆ ನಡೆದ ಅಂತರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕಾಗಿ ಚುನಾವಣೆ ನಡೆದಿದ್ದು ಹಿಹಿಮಾಚಲ ಪ್ರದೇಶದ ಮಾಜಿ ರಾಜ್ಯಪಾಲ ವಿಷ್ಣು ಸದಾಶಿವ ಕೊಕ್ಜೆ......
ನವದೆಹಲಿ: ವಿಶ್ವ ಹಿಂದೂ ಪರಿಷತ್ ಇತಿಹಾಸದಲ್ಲಿ ಮೊದಲ ಬಾರಿಗೆ ಅಂತರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕಾಗಿ ಚುನಾವಣೆ ನಡೆದಿದ್ದು ಹಿಹಿಮಾಚಲ ಪ್ರದೇಶದ ಮಾಜಿ ರಾಜ್ಯಪಾಲ ವಿಷ್ಣು ಸದಾಶಿವ ಕೊಕ್ಜೆ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಒಟ್ಟು 273 ಮತದಾರರಲ್ಲಿ 192 ಮಂದಿ ಇಂದು ಮತದಾನದಲ್ಲಿ ಭಾಗವಹಿಸಿದ್ದು ಅದರಲ್ಲಿ ಕೊಕ್ಜೆ 131 ಮತಗಳನ್ನು ಗಳಿಸಿದ್ದಾರೆ. ಇವರ ಪ್ರತಿಸ್ಪರ್ಧಿಯಾಗಿದ್ದ ರಾಘವ್ ರೆಡ್ಡಿ 60 ಮತಗಳನ್ನು ಮಾತ್ರವೇ ಪಡೆದಿದ್ದಾರೆ.
ಹೊಸ ಅಂತಾರಾಷ್ಟ್ರೀಯ ಅಧ್ಯಕ್ಷರ ನೇಮಕಾತಿ ಸಂಬಂಧ ಸದಸ್ಯರಲ್ಲಿ ಒಮ್ಮತ ಏರ್ಪಡದ ಕಾರಣ ಚುನಾವಣೆ ಅನಿವಾರ್ಯವಾಯಿತು.ಎನ್ನಲಾಗಿದೆ. ಆದರೆ ಇದೇ ವೇಳೆಯಲ್ಲಿ ಪ್ರವೀಣ್ ತೊಗಡಿಯಾ ಮತ್ತು ಪ್ರಧಾನಿ ಮೋದಿ ಮಧ್ಯೆ ಭಿನ್ನಾಭಿಪ್ರಾಯಗಳಿದೆ. ಇದರ ಹಿನ್ನೆಲೆಯಲ್ಲಿ ವಿಹೆಚ್‍ಪಿ ಅಂತರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸುವ ಮೂಲಕ ತೊಗಡಿಯಾ ಪ್ರಭಾವವನ್ನು ಕುಗ್ಗಿಸಲು ತಂತ್ರ ನಡೆಸಲಾಗಿದೆ ಎಂಬ ಮಾತೂ ಕೇಳಿಬಂದಿದೆ.
ಯಾರು ಈ ವಿ.ಎಸ್. ಕೊಕ್ಜೆ?
1939, ಡಿಸೆಂಬರ್ 6 ರಂದು ಮಧ್ಯಪ್ರದೇಶದಲ್ಲಿ ವಿಷ್ಣು ಸದಾಶಿವ ಕೊಕ್ಜೆ ಜನಿಸಿದರು. ಇಂಧೋರ್ ನಲ್ಲಿ ಎಲ್.ಎಲ್.ಬಿ ಮುಗಿಸಿದ್ದ ಇವರು 1964 ರಲ್ಲಿ ವಕೀಲರಾಗಿ ವೃತ್ತಿಜೀವನ ಪ್ರಾರಂಭಿಸಿದ್ದರು. ಮಧ್ಯ ಪ್ರದೇಶ, ರಾಜಸ್ಥಾನ ಹೈಕೋರ್ಟ್ ನ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದ ಇವರು ಭಾರತದ ಅಭಿವೃದ್ಧಿ ಕೌನ್ಸಿಲ್ ಅಧ್ಯಕ್ಷರಾಗಿದ್ದರು
2003 ರಿಂದ 2008 ರವರೆಗೆ ಹಿಮಾಚಲ ಪ್ರದೇಶದ ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸಿದ್ದ ಕೊಕ್ಜೆ ಅವರನ್ನು ಅಂದಿನ ವಾಜಪೇಯಿ ಸರ್ಕಾರ ರಾಜ್ಯಪಾಲನ್ನಾಗಿ ನೇಮಕ ಮಾಡಿತ್ತು.


