ರಾಜಕೀಯ ಅಧಿಕಾರಕ್ಕಾಗಿ ಕೋಮುಶಕ್ತಿಗಳಿಂದ ದೇಶ ವಿಭಜನೆಯ ಯತ್ನ : ವೆಂಕಯ್ಯನಾಯ್ಡು

ಕಥುವಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ನಂತರ ದೇಶದ ಭವಿಷ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು, ರಾಜಕೀಯ ಉದ್ದೇಶಕ್ಕಾಗಿ ಕೋಮುಶಕ್ತಿಗಳು ಸಮಾಜದಲ್ಲಿನ ಸೌಹಾರ್ದತೆ ಹಾಳು ಮಾಡುತ್ತಿವೆ ಎಂದು ಆರೋಪಿಸಿದ್ದಾರೆ.
ವೆಂಕಯ್ಯನಾಯ್ಡು
ವೆಂಕಯ್ಯನಾಯ್ಡು

ನವದೆಹಲಿ : ಕಥುವಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ನಂತರ ದೇಶದ ಭವಿಷ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು, ರಾಜಕೀಯ ಉದ್ದೇಶಕ್ಕಾಗಿ ಕೋಮುಶಕ್ತಿಗಳು  ಸಮಾಜದಲ್ಲಿನ ಸೌಹಾರ್ದತೆ ಹಾಳು ಮಾಡುತ್ತಿವೆ  ಎಂದು ಆರೋಪಿಸಿದ್ದಾರೆ.

ರಾಷ್ಟ್ರಪತಿ ಭವನದಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ವ್ಯಕ್ತಿ ನಹೀನ್ ಸಂಕಲ್ಪ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಕೋಮುಶಕ್ತಿಗಳು ದೇಶವನ್ನು ವಿಭಜಿಸುವ ಕೆಲಸದಲ್ಲಿ ನಿರತವಾಗಿರುವುದು ದುರದೃಷ್ಟಕರ ಸಂಗತಿ ಎಂದರು.

 ದೇಶದಲ್ಲಿನ ಎಲ್ಲಾ ಪ್ರಜೆಗಳು ಸಮಾನವಾಗಿ ಬದುಕಬೇಕೆಂಬುದು ಆರ್ ಎಸ್ ಎಸ್ ನ ಮೂಲತತ್ವವಾಗಿದೆ. ಒಬ್ಬ ಮನುಷ್ಯ ಮತ್ತೊಬ್ಬ ಮನುಷ್ಯನಿಗೆ ಗೌರವ ನೀಡದಿದ್ದರೆ ಅದನ್ನು ರಾಷ್ಟ್ರೀಯಕತೆ ಎಂದು ಕರೆಯಲಾಗದು ಎಂದು ವೆಂಕಯ್ಯನಾಯ್ಡು ಹೇಳಿದರು.
 
ಜಮ್ಮು -ಕಾಶ್ಮೀರದಲ್ಲಿ ಎಂಟು ವರ್ಷದ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣವನ್ನು ವೆಂಕಯ್ಯನಾಯ್ಡು ಖಂಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com