ಹೊಸ ಟಿವಿ ಸೆಟ್ ಟಾಪ್ ಬಾಕ್ಸ್ ಗಳಲ್ಲಿ ಚಿಪ್ ಅಳವಡಿಸಲು ಮಾಹಿತ, ಪ್ರಸಾರ ಸಚಿವಾಲಯ ಪ್ರಸ್ತಾವನೆ

ಕಳೆದ ಕೇಬಲ್‌ ಟಿ.ವಿ ಡಿಜಿಟಲೀಕರಣದ ಭಾಗವಾಗಿ ಸೆಟ್‌ ಟಾಪ್‌ ಬಾಕ್ಸ್‌ ಕಡ್ಡಾಯಗೊಳಿಸಿದ್ದ ಕೇಂದ್ರ ಮಾಹಿತಿ ಮತ್ತು....
ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವೆ ಸ್ಮೃತಿ ಇರಾನಿ
ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವೆ ಸ್ಮೃತಿ ಇರಾನಿ
ನವದೆಹಲಿ: ಕಳೆದ ಕೇಬಲ್‌ ಟಿ.ವಿ ಡಿಜಿಟಲೀಕರಣದ ಭಾಗವಾಗಿ ಸೆಟ್‌ ಟಾಪ್‌ ಬಾಕ್ಸ್‌ ಕಡ್ಡಾಯಗೊಳಿಸಿದ್ದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಈಗ ಹೊಸ ಸೆಟ್ ಟಾಪ್ ಬಾಕ್ಸ್ ಗಳಲ್ಲಿ ಚಿಪ್ ಅಳವಡಿಸುವಂತೆ ಪ್ರಸ್ತಾವನೆ ಸಲ್ಲಿಸಿದೆ.
ಪ್ರತಿ ಚಾನೆಲ್ ನ ವೀಕ್ಷಕರ ಸಂಖ್ಯೆಯನ್ನು ನಿಖರವಾಗಿ ತಿಳಿಯಲು ಈ ಚಿಪ್ ಹೆಚ್ಚು ವಿಶ್ವಾಸಾರ್ಹವಾಗಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಸೆಟ್ ಟಾಪ್ ಬಾಕ್ಸ್ ಗಳಿಗೆ ಈ ಚಿಪ್ ಅಳವಡಿಸುವುದರಿಂದ ಜಾಹೀರಾತುದಾರರಿಗೆ ಮತ್ತು ಡಿಎವಿಪಿ ಜಾಹೀರಾತಿನ ಮೇಲೆ ಬುದ್ಧಿವಂತಿಕೆಯಿಂದ ಖರ್ಚು ಮಾಡಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.
ಈ ಸಂಬಂಧ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಟ್ರಾಯ್ ಗೆ ಪ್ರಸ್ತಾವನೆ ಸಲ್ಲಿಸಿದೆ. ಅಲ್ಲದೆ ಹೊಸ ಸೆಟ್ ಟಾಪ್ ಬಾಕ್ಸ್ ಗಳಲ್ಲಿ ಚಿಪ್ ಅಳವಡಿಸುವಂತೆ ಡಿಟಿಎಚ್ ನಿರ್ವಾಹಕರಿಗೆ ಸೂಚಿಸಿದೆ.
ಈ ಚಿಪ್ ನಿಂದಾಗಿ ಪ್ರತಿ ಚಾನಲ್ ವೀಕ್ಷಕರ ಸಂಖ್ಯೆ ಮತ್ತು ಅವಧಿಯ ಕುರಿತು ನಿಖರ ಮಾಹಿತಿ ಪಡೆದುಕೊಳ್ಳಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com