ಕತುವಾ ಬಾಲಕಿ ಮೇಲೆ ಅತ್ಯಾಚಾರ, ಕೊಲೆ: ವಲಸೆ ಹೋಗುತ್ತಿರುವ ಅಲೆಮಾರಿ ಬೇಕರ್ವಾಲ್ ಜನಾಂಗ

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಮತ್ತು ಕ್ರೂರ ಕೊಲೆಯಿಂದ ಕತುವಾ ಜಿಲ್ಲೆಯ...
ರಸನಾ ಗ್ರಾಮದಲ್ಲಿರುವ ಅಪ್ರಾಪ್ತ ಬಾಲಕಿ ಮನೆ ಈಗ ಮುಚ್ಚಿರುವುದು
ರಸನಾ ಗ್ರಾಮದಲ್ಲಿರುವ ಅಪ್ರಾಪ್ತ ಬಾಲಕಿ ಮನೆ ಈಗ ಮುಚ್ಚಿರುವುದು
Updated on
ರಸಾನ(ಕತುವಾ)ಜಮ್ಮು-ಕಾಶ್ಮೀರ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಮತ್ತು ಕ್ರೂರ ಕೊಲೆಯಿಂದ ಕತುವಾ ಜಿಲ್ಲೆಯ ಗಡಿ ರಸನಾ ಗ್ರಾಮದಲ್ಲಿನ ಅಲೆಮಾರಿ ಬಾಕರ್ವಾಲ್ ಸಮುದಾಯದ ಮಂದಿ ಆರಂಭಿಕ ಋತುಮಾನ ವಲಸೆ ಹೋಗುವ ಪರಿಸ್ಥಿತಿ ಉಂಟಾಗಿದೆ.
ಕಳೆದ 40 ವರ್ಷಗಳಲ್ಲಿ ಬೈಸಾಕಿ ಅಂದರೆ ವಿಷು ಹಬ್ಬದ ನಂತರ ವಲಸೆ ಹೋಗುವ ಪದ್ಧತಿ ಈ ಜನಾಂಗದಲ್ಲಿರುತ್ತದೆ. ಆದರೆ ಈ ವರ್ಷ  ಬಾಲಕಿ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದಿಂದಾಗಿ ನಮಗಿಲ್ಲಿ ಬದುಕುವುದೇ ಕಷ್ಟವಾಗುತ್ತಿದೆ. ಅದರಿಂದಾಗಿ ಬೇಗನೆ ವಲಸೆ ಹೋಗಲು ಆರಂಭಿಸಿದ್ದೇವೆ ಎನ್ನುತ್ತಾರೆ 72 ವರ್ಷದ ಮೊಹಮ್ಮದ್ ಜಾನ್.
ಹವಾಮಾನ ಪರಿಸ್ಥತಿಯನ್ನು ನೋಡಿಕೊಂಡು ಕೂಡ ಈ ವರ್ಷ ಬೇಗನೆ ವಲಸೆ ಹೋಗುತ್ತಿದ್ದೇವೆ ಎಂದು ಅವರು ಹೇಳುತ್ತಾರೆ.
ಈ ವರ್ಷ ಹವಾಮಾನ ಕೂಡ ನಮ್ಮ ಅನುಕೂಲಕ್ಕೆ ತಕ್ಕಂತೆ ಇಲ್ಲ. ನಮ್ಮ ಸಮುದಾಯ ನಮಗೆ ಮುಖ್ಯವಾಗಿದೆ. ನಮ್ಮ ಸಮುದಾಯದವರು ಬೇಗನೆ ಜಾಗ ತೊರೆಯಲು ನಿರ್ಧರಿಸಿದ್ದಾರೆ ಎಂದರು.
ಅತ್ಯಾಚಾರಕ್ಕೀಡಾಗಿ ಕೊಲೆಯಾದ ಅಪ್ರಾಪ್ತ ಬಾಲಕಯ ಕುಟುಂಬದವರು ಮತ್ತು ರಾಸನ, ಕೂಟ್ಹ ಮತ್ತು ಪಕ್ಕದ ಗ್ರಾಮಗಳ 35 ಇತರ ಬರೆರ್ವಾಲ್ ಕುಟುಂಬದವರು ಈಗಾಗಲೇ ತಮ್ಮ ಗ್ರಾಮಗಳನ್ನು ತೊರೆದು ಶಿವಾಲಿಕ್ ಬೆಟ್ಟಕ್ಕೆ ಹೋಗಿ ನೆಲೆಸಿದ್ದಾರೆ. ಗ್ರಾಮದಲ್ಲಿ ಕೋಮು ಸೌಹಾರ್ದತೆ ಕೆಲವು ವರ್ಷಗಳ ಹಿಂದೆಯೇ ಬದಲಾಗಿದೆ. ಅಪ್ರಾಪ್ತ ಬಾಲಕಿಯ ಅತ್ಯಾಚಾರ ಮತ್ತು ಕೊಲೆಯಾದರೂ ಕೂಡ ಗ್ರಾಮಗಳ ಬಹುಸಂಖ್ಯಾತ ಸಮುದಾಯಗಳ ಯಾರೊಬ್ಬರೂ ಬಾಲಕಿಯ ಕುಟುಂಬದವರನ್ನು ಭೇಟಿ ಮಾಡಿ ಸಂತಾಪ ಸೂಚಿಸಲಿಲ್ಲ ಎಂದಿದ್ದಾರೆ.
ಗ್ರಾಮದಲ್ಲಿನ ಹಿಂದೂಗಳು ಬಕೆರ್ವಾಲ್ ಸಮುದಾಯಕ್ಕೆ ಹುಲ್ಲು ಬೆಳೆಸಲು ಜಮೀನುಗಳನ್ನು ನೀಡುತ್ತಿದ್ದರು, ಅದು ಕೂಡ ಕೆಲವು ವರ್ಷಗಳ ಹಿಂದೆ ನಿಂತುಹೋಗಿದೆ. ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಪ್ರಮುಖ ಆರೋಪಿ ಸಂಜಿ ರಾಮ್ ಮಾತುಗಳನ್ನು ಗ್ರಾಮದ ಹಿಂದೂಗಳು ಕೇಳುತ್ತಾರೆ ಎಂದರು ಜಾನ್.
ಕಳೆದ ಜನವರಿ 10ರಂದು ರಸನಾ ಗ್ರಾಮದಲ್ಲಿ 8 ವರ್ಷದ ಬಾಲಕಿ ಕುದುರೆಗಳನ್ನು ಮೇಯಿಸುತ್ತಿದ್ದಾಗ ಆಕೆ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿತ್ತು. ಕೊಲೆಯ ಪ್ರಮುಖ ಆರೋಪಿ ಸಂಜಿ ರಾಮ್ ಮನೆ ಮತ್ತು ದೇವಸ್ಥಾನದ ಮಧ್ಯೆ ಬಾಲಕಿಯ ಶವ ಒಂದು ವಾರ ಕಳೆದ ಮೇಲೆ ಪತ್ತೆಯಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com