ಲಕ್ನೋ: ನೈಟ್ ಕ್ಲಬ್ ಉದ್ಘಾಟಿಸಿ ತೀವ್ರ ಚರ್ಚೆಗೆ ಕಾರಣವಾದ ಸಾಕ್ಷಿ ಮಹಾರಾಜ್

: ಭಾರತೀಯ ಜನತಾ ಪಕ್ಷದ ಸಂಸದ ಸಾಕ್ಷಿ ಮಹಾರಾಜ್‌ ಅವರು ಆಲಿಗಂಜ್‌ ಪ್ರದೇಶದಲ್ಲಿನ ಸಂಕೀರ್ಣವೊಂದರಲ್ಲಿ ನೈಟ್‌ ಕ್ಲಬ್‌ ಉದ್ಘಾಟಿಸಿ ವಿವಾದಕ್ಕೆ ....
ಸಾಕ್ಷಿ ಮಹಾರಾಜ್
ಸಾಕ್ಷಿ ಮಹಾರಾಜ್
Updated on
ಲಕ್ನೋ: ಭಾರತೀಯ ಜನತಾ ಪಕ್ಷದ ಸಂಸದ ಸಾಕ್ಷಿ ಮಹಾರಾಜ್‌ ಅವರು  ಆಲಿಗಂಜ್‌ ಪ್ರದೇಶದಲ್ಲಿನ ಸಂಕೀರ್ಣವೊಂದರಲ್ಲಿ ನೈಟ್‌ ಕ್ಲಬ್‌ ಉದ್ಘಾಟಿಸಿ ವಿವಾದಕ್ಕೆ ಕಾರಣರಾಗಿದ್ದಾರೆ,. 
ಲಕ್ನೋದ ರಾಮ್‌ ರಾಮ್‌ ಬ್ಯಾಂಕ್‌ ಕ್ರಾಸಿಂಗ್‌ ಸಮೀಪ ಇರುವ ಜೀತ್‌ ಪ್ಲಾಜಾ ದ ಎರಡನೇ ಮಹಡಿಯಲ್ಲಿರುವ ಲೆಟ್ಸ್ ಮೀಟ್ ಎಂಬ ಹೆಸರಿನ ನೈಟ್‌ ಕ್ಲಬ್‌ ಅನ್ನು ಸಾಕ್ಷಿ ಮಹಾರಾಜ್‌ ಅವರು ರಿಬ್ಬನ್‌ ಕಟ್‌ ಮಾಡಿ ಉದ್ಘಾಟಿಸಿದರು. 
ಸಾಕ್ಷಿ ಮಹಾರಾಜ್‌ ಅವರು ಸಂಸದರಾಗಿ ಪ್ರತಿನಿಧಿಸುತ್ತಿರುವ ಉನ್ನಾವೋ ಕ್ಷೇತ್ರ ಈಗ ಗ್ಯಾಂಗ್‌ ರೇಪ್‌ ಮತ್ತು ಕಸ್ಟಡಿ ಸಾವಿನ ಪ್ರಕರಣದಿಂದಾಗಿ ದೇಶಾದ್ಯಂತ ಸುದ್ದಿಯಲ್ಲಿದೆ. ಉನ್ನಾವೋ ಶಾಸಕ ಕುಲದೀಪ್‌ ಸಿಂಗ್‌ ಸೆಂಗರ್‌ ಅವರು ಈ ಪ್ರಕರಣದ ಮುಖ್ಯ ಆರೋಪಿಯಾಗಿ ಸಿಬಿಐನಿಂದ ಅರೆಸ್ಟ್‌ ಆಗಿ ತನಿಖೆಗೆ ಒಳಪಟ್ಟಿದ್ದಾರೆ. 
ಪರಿಸ್ಥಿತಿ ಹೀಗಿರುವಾಗ  ಸಂಸದ ಸಾಕ್ಷಿ ಮಹಾರಾಜ್‌ ನೈಟ್‌ ಕ್ಲಬ್‌ ಉದ್ಘಾಟಿಸಿ ಹಲವರು ಹುಬ್ಬೇರಿಸುವಂತೆ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com