ಬಿಜೆಪಿಯನ್ನು 'ಬಲಾತ್ಕಾರ್ ಜನತಾ ಪಾರ್ಟಿ' ಎಂದು ಕರೆಯುವ ಕುರಿತು ಜನರೇ ನಿರ್ಧರಿಸಲಿ: ಕಮಲ್ ನಾಥ್

ಬಿಜೆಪಿ ಪಕ್ಷದ ಹೆಸರನ್ನು ಬಲಾತ್ಕಾರ್ ಜನತಾ ಪಕ್ಷ ಎಂದು ಬದಲಾಯಿಸಬೇಕೆಂದು ಕಾಂಗ್ರೆಸ್ ಮುಖಂಡ ಕಮಲ್ ನಾಥ್ ಹೇಳಿದ್ದಾರೆ.
ಕಮಲ್ ನಾಥ್
ಕಮಲ್ ನಾಥ್

ನವದೆಹಲಿ: ಬಿಜೆಪಿ ಪಕ್ಷದ ಹೆಸರನ್ನು ಬಲಾತ್ಕಾರ್ ಜನತಾ ಪಕ್ಷ ಎಂದು ಬದಲಾಯಿಸಬೇಕೆಂದು ಕಾಂಗ್ರೆಸ್ ಮುಖಂಡ ಕಮಲ್ ನಾಥ್ ಹೇಳಿದ್ದಾರೆ.

ನವದೆಹಲಿಯಲ್ಲಿಂದು ಕಥುವಾ ಮತ್ತು ಉನ್ನಾವೊ ಅತ್ಯಾಚಾರ ಪ್ರಕರಣ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ಸುಮಾರು 20 ನಾಯಕರು ಅತ್ಯಾಚಾರ ಪ್ರಕರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ಕೆಲವು ಕಡೆ ಓದಿರುವುದಾಗಿ ಅವರು ತಿಳಿಸಿದ್ದಾರೆ.

ಸದ್ಯ, ಬಿಜೆಪಿ ಹೆಸರನ್ನು ಬಲಾತ್ಕಾರ್ ಜನತಾ ಪಾರ್ಟಿ ಎಂದು ಹೆಸರು ಬದಲಾಯಿಸಲು ಜನರು ಮನವೊಲಿಸಬೇಕೆಂದು ಅವರು ಹೇಳಿದ್ದಾರೆ.

ಕಳೆದ ವರ್ಷ ಉತ್ತರ ಪ್ರದೇಶದ ಉನ್ನಾವೊದಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇರೆಗೆ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ ನನ್ನು ಸಿಬಿಐ ಬಂಧಿಸಿದ್ದು, ವಿಚಾರಣೆ ನಡೆಸುತ್ತಿದೆ.

ಕುಲದೀಪ್ ಸಿಂಗ್ ಸೆಂಗರ್ ಮೇಲೆ ಐಪಿಸಿ ಸೆಕ್ಷನ್ 363, (ಅಪಹರಣ) 366 ( ಮಹಿಳೆಯರ ಅಪಹರಣ, 376 ( ಅತ್ಯಾಚಾರ ) 506  ಹಾಗೂ ಪೋಕ್ಸೋ ಕಾಯ್ದೆಯಡಿ ಎಫ್ ಐ ಆರ್ ದಾಖಲಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com