ಬೇಸಿಗೆಯಲ್ಲಿ ಅಮೆರಿಕಾ ವೀಸಾ ಪಡೆಯಲು ಬೇಗನೆ ಅರ್ಜಿ ಹಾಕಿ

ಅಮೆರಿಕಾ ಪ್ರವಾಸದ ವೀಸಾಗೆ ಅತಿಯಾದ ಬೇಡಿಕೆ ಬಂದಿದ್ದು, ಪ್ರಯಾಣಿಕರು ಕೂಡಲೇ ವೀಸಾಗೆ ಅರ್ಜಿ ಸಲ್ಲಿಸುವಂತೆ ದೆಹಲಿಯಲ್ಲಿನ ಅಮೆರಿಕಾ ರಾಯಬಾರಿ ಅಧಿಕಾರಿ ಶಿಫಾರಸ್ಸು ಮಾಡಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ : ಅಮೆರಿಕಾ ಪ್ರವಾಸದ ವೀಸಾಗೆ ಅತಿಯಾದ ಬೇಡಿಕೆ ಬಂದಿದ್ದು, ಪ್ರಯಾಣಿಕರು ಕೂಡಲೇ ವೀಸಾಗೆ ಅರ್ಜಿ ಸಲ್ಲಿಸುವಂತೆ ದೆಹಲಿಯಲ್ಲಿನ ಅಮೆರಿಕಾ ರಾಯಬಾರಿ ಅಧಿಕಾರಿ ಶಿಫಾರಸ್ಸು ಮಾಡಿದ್ದಾರೆ.

 ವೀಸಾ ಪಡೆಯಲು ಬಯಸುವ ಅರ್ಜಿದಾರರು ಸಂದರ್ಶನಕ್ಕಾಗಿ  30 ದಿನ ಅಥವಾ ಅದಕ್ಕೂ ಹೆಚ್ಚು ದಿನ ಕಾಯಬೇಕಾಗುತ್ತದೆ. ಇದು ಮುಂದಿನ ಕೆಲ ತಿಂಗಳವರೆವಿಗೂ  ಮುಂದುವರೆಯಬಹುದು ಎಂಬುದು ರಾಯಬಾರಿ ಅಧಿಕಾರಿಗಳ ನಿರೀಕ್ಷೆಯಾಗಿದೆ.

 ಈ ಬಗ್ಗೆ ರಾಯಬಾರಿ ಅಧಿಕಾರಿಗಳು ಬಿಡುಗಡೆ ಮಾಡಿರುವ ಒಂದಿಷ್ಟು ಮಾಹಿತಿಗಳು

ವಲಸೆಗಾರರು ಅಲ್ಲದ ವೀಸಾ ವಿಶ್ವದಲ್ಲಿಯೇ ದೊಡ್ಡದಾದ ವೀಸಾ ಆಗಿದ್ದು, ಪ್ರತಿವರ್ಷದಲ್ಲೂ ಮಿಲಿಯನ್ ವೀಸಾ  ವಿಲೇವಾರಿ ಪ್ರಕ್ರಿಯೆ ನಡೆಯುತ್ತದೆ.

ಅಮೆರಿಕಾದ ರಾಯಬಾರಿ ಅಧಿಕಾರಿಗಳು ಹಾಗೂ ಭಾರತದ ನಾಲ್ಕು ರಾಯಭಾರಿ ಅಧಿಕಾರಿಗಳು ಸೇವೆಯನ್ನು ಸುಧಾರಿಸಲು , ಬೇಡಿಕೆ ತಕ್ಕಂತೆ ವೀಸಾ ಪೂರೈಸಲು ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ.

ಬೇಸಿಗೆಯಲ್ಲಿ ಹೆಚ್ಚಿನ ಪ್ರಮಾಣದ ಪ್ರಯಾಣಿಕರು ಅಮೆರಿಕಾ ಹೋಗುತ್ತಾರೆ , ವೀಸಾ ಸಿಗಲು ವಿಳಂಬವಾಗುತ್ತದೆ ಎಂಬುದರ ಬಗ್ಗೆ ಅರ್ಜಿದಾರರು ಮನವರಿಕೆ ಮಾಡಿಕೊಳ್ಳಬೇಕಾಗಿದೆ.

ಅರ್ಜಿದಾರರು ವಿಳಂಬ ಮಾಡದೇ ಕೂಡಲೇ ಅರ್ಜಿ ಸಲ್ಲಿಸಬೇಕು ಅಲ್ಲದೇ ವಂಚನೆ , ಹಗರಣಗಳ ಬಗ್ಗೆ ಗಮನ ಹರಿಸುವಂತೆಯೂ ತಿಳಿಸಲಾಗಿದೆ. ಕಚೇರಿ ಮೂಲಕವೇ ಅಮೆರಿಕಾ ವೀಸಾ ಪಡೆಯಬೇಕಾಗುತ್ತದೆ.

 ಯಾವುದೇ ತುರ್ತು ಸಂದರ್ಶನಕ್ಕಾಗಿ  www.ustraveldocs.com ಸಂಪರ್ಕಿಸಬಹುದಾಗಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com