ಕೇಂದ್ರ ಗೃಹ ಇಲಾಖೆ ಸಲಹೆ ಮೇರೆಗೆ ದೆಹಲಿ ಸರ್ಕಾರದ 9 ಸಲಹೆಗಾರರ ಹುದ್ದೆ ರದ್ದು

ಕೇಂದ್ರ ಗೃಹ ಇಲಾಖೆ ಸಲಹೆಯ ಮೇರೆಗೆ ದೆಹಲಿ ಸರ್ಕಾರದ 9 ಸಲಹೆಗಾರ ಹುದ್ದೆಯನ್ನು ರದ್ದುಗೊಳಿಸಲಾಗಿದೆ.
ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್
ನದೆವಹಲಿ: ಕೇಂದ್ರ ಗೃಹ ಇಲಾಖೆ ಸಲಹೆಯ ಮೇರೆಗೆ ದೆಹಲಿ ಸರ್ಕಾರದ 9 ಸಲಹೆಗಾರ ಹುದ್ದೆಯನ್ನು ರದ್ದುಗೊಳಿಸಲಾಗಿದೆ. 
ದೆಹಲಿ ಮುಖ್ಯಮಂತ್ರಿಗಳು ಹಾಗೂ ಮಂತ್ರಿಗಳ ಸಲಹೆಗಾರರ ಹುದ್ದೆಗೆ ಅನುಮೋದನೆ ನೀಡುವ ಪಟ್ಟಿಯಲ್ಲಿ ಈಗಿನ 9  ಸಲಹೆಗಾರರ ಹುದ್ದೆಗಳು ಇರುವುದಿಲ್ಲ ಎಂದು  ಎನ್ ಸಿಟಿ ಆದೇಶದಲ್ಲಿ ತಿಳಿಸಲಾಗಿದ್ದು, ಗೃಹ ಸಚಿವಾಲಯ 9 ಸಲಹೆಗಾರರ ಹುದ್ದೆಯನ್ನು ರದ್ದುಗೊಳಿಸಬೇಕೆಂದು ಹೇಳಿದೆ. 
" ಈ ಹುದ್ದೆಗಳನ್ನು ಸೃಷ್ಟಿಸಬೇಕಾದರೆ ದೆಹಲಿ ಸರ್ಕಾರ ಪೂರ್ವಾನುಮತಿ ಪಡೆದಿರಿರಲಿಲ್ಲ" ಎಂದೂ ಆದೇಶದಲ್ಲಿ ತಿಳಿಸಲಾಗಿದೆ.   ಆದರೆ ದೆಹಲಿ ಸರ್ಕಾರ ಈ ಅಂಶವನ್ನು ಅಲ್ಲಗಳೆದಿದ್ದು, ಸಲಹೆಗಾರರ ಹುದ್ದೆಯನ್ನು ಸೃಷ್ಟಿಸುವುದಕ್ಕೂ ಮುನ್ನ ಅನುಮತಿ ಕೇಳಲಾಗಿತ್ತು ಎಂದು ವಾದಿಸಿದೆ. ಈ ಬಗ್ಗೆ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ವಕ್ತಾರ ರಾಘವ್ ಚಢಾ ಫೋಟೋ ಸಮೇತ ಟ್ವೀಟ್ ಮಾಡಿದ್ದು, ಅನುಪತಿ ಪಡೆಯಲಾಗಿತ್ತು ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com