ತೈಲ, ಅನಿಲ, ವಿದ್ಯುತ್ , ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತ- ಅಮೆರಿಕಾ ಸಹಕಾರ ವೃದ್ಧಿ- ಧರ್ಮೆಂದ್ರ ಪ್ರಧಾನ್

ತೈಲ, ಅನಿಲ, ವಿದ್ಯುತ್, ನವೀಕರಿಸಬಹುದಾದ ಇಂಧನ ಮತ್ತು ಕಲ್ಲಿದ್ದಲು ಕ್ಷೇತ್ರಗಳಲ್ಲಿ ಸಹಕಾರ ವೃದ್ದಿಗೆ ಭಾರತ - ಅಮೆರಿಕಾ ನಿರ್ಧರಿಸಿವೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
ಧರ್ಮೇಂದ್ರ ಪ್ರಧಾನ್
ಧರ್ಮೇಂದ್ರ ಪ್ರಧಾನ್

ನವದೆಹಲಿ: ತೈಲ, ಅನಿಲ, ವಿದ್ಯುತ್, ನವೀಕರಿಸಬಹುದಾದ ಇಂಧನ ಮತ್ತು ಕಲ್ಲಿದ್ದಲು ಕ್ಷೇತ್ರಗಳಲ್ಲಿ ಸಹಕಾರ ವೃದ್ದಿಗೆ ಭಾರತ - ಅಮೆರಿಕಾ ನಿರ್ಧರಿಸಿವೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.

 ಅಮೆರಿಕ- ಭಾರತ ಕಾರ್ಯತಂತ್ರ ಇಂಧನ ಪಾಲುದಾರಿಕೆಯ  ವಾರ್ಷಿಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಧರ್ಮೇಂದ್ರ ಪ್ರಧಾನ್,   ನಾಲ್ಕು ಪ್ರಮುಖ ಕ್ಷೇತ್ರಗಳಾದ ತೈಲ, ಅನಿಲ, ವಿದ್ಯುತ್ , ಮತ್ತು ಇಂಧನ ದಕ್ಷತೆ ಕ್ಷೇತ್ರಗಳಲ್ಲಿ ಸಹಕಾರಕ್ಕೆ ಪರಸ್ಪರ ಒಪ್ಪಂದ ಮಾಡಿಕೊಂಡಿರುವುದಾಗಿ ತಿಳಿಸಿದರು.

ಭಾರತ- ಅಮೆರಿಕಾ ಸಹಭಾಗಿತ್ವದಿಂದ  ತಮಗಿಷ್ಟಬಂದ ರೀತಿಯಲ್ಲಿ  ನೀತಿ ರೂಪಿಸುವ ಅವಕಾಶ ಸೃಷ್ಟಿಸಬಹುದು ನೈಸರ್ಗಿಕ ಅನಿಲ ಮಾರುಕಟ್ಟೆ ಸೇರಿದಂತೆ ವಾಣಿಜ್ಯ ಹೂಡಿಕೆಯ ಬೆಂಬಲದಿಂದ ಗುರಿ ಸಾಧಿಸಬಹುದು ಎಂದು ಪ್ರಧಾನ್ ಹೇಳಿದರು.

ಅಮೆರಿಕಾ ಭಾರತ ನಡುವಿನ 2008 ಪರಮಾಣು ಇಂಧನ ಒಪ್ಪಂದ ಉಭಯ ದೇಶಗಳ ನಡುವಿನ ಸಂಬಂಧ ವೃದ್ದಿಯಲ್ಲಿ ಒಂದು ಮಹತ್ವದ ಮೈಲುಗಲ್ಲು ಎಂದು ಪ್ರಧಾನ್ ಅಭಿಪ್ರಾಯಪಟ್ಟರು.





ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com