ಆಫ್ ಲೈನ್ ಆಧಾರ್ ಪರಿಶೀಲನೆಗೆ ಪರಿಷ್ಕೃತ ಕ್ಯೂಆರ್ ಕೋಡ್ ಬಿಡುಗಡೆ

ಆಧಾರ್ ಮಾಹಿತಿಯನ್ನು ಮತ್ತಷ್ಟು ಸುರಕ್ಷಿತಗೊಳಿಸುವ ನಿಟ್ಟಿನಲ್ಲಿ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ(ಯುಐಡಿಎಐ) ಡಿಜಿಟಲ್ ಸಹಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಆಧಾರ್ ಮಾಹಿತಿಯನ್ನು ಮತ್ತಷ್ಟು ಸುರಕ್ಷಿತಗೊಳಿಸುವ ನಿಟ್ಟಿನಲ್ಲಿ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ(ಯುಐಡಿಎಐ) ಡಿಜಿಟಲ್ ಸಹಿ ಇರುವ ಪರಿಷ್ಕೃತ ಕ್ಯೂಆರ್ ಕೋಡ್ ಅನ್ನು ಪರಿಚಯಿಸಿದೆ.
ಈ ಕ್ಯೂಆರ್ ಕೋಡ್ ನಲ್ಲಿ ಅತಿ ಸೂಕ್ಷ್ಮವಲ್ಲದ ಮಾಹಿತಿ ಇರಲಿದ್ದು, ಹೆಸರು, ಫೋಟೋ, ಮತ್ತು ವಾಸಸ್ಥಳದ ವಿವರ ನಾತ್ರ ಇರಲಿದೆ.
ಆಧಾರ್ ಅನ್ನು ಈಗ ದೇಶಾದ್ಯಂತ ಗುರುತಿನ ಚೀಟಿಯಾಗಿ ಒಪ್ಪಿಕೊಳ್ಳಲಾಗುತ್ತಿದ್ದು, ಕ್ಯೂಆರ್ ಕೋಡ್ ಅನ್ನು ಆಫ್ ಲೈನ್ ಪರಿಶೀಲನೆಗೆ ಬಳಸಬಹುದು. ಇದರಿಂದ ಮಾಹಿತಿ ಸೋರಿಕೆ ತಡೆಯಬಹುದು ಎಂದು ಯುಐಡಿಎಐ ತಿಳಿಸಿದೆ.
ಆಧಾರ್ ಹೊಂದಿರುವವರು ಯುಐಡಿಎಐ ವೆಬ್ ಸೈಟ್ ಅಥವಾ ಮೊಬೈಲ್ ಆಫ್ ಮೂಲಕ  ಕ್ಯೂಆರ್ ಕೋಡ್ ಹೊಂದಿರುವ ಬಯೋಮೆಟ್ರಿಕ್ ಐಡಿಯನ್ನು ಪ್ರಿಂಟ್ ತೆಗೆದುಕೊಳ್ಳಬಹುದು. ಇದು ಬ್ಯಾಂಕ್ ಹಾಗೂ ಇತರೆ ಸಂಸ್ಥೆಗಳು ಆಧಾರ್ ಮಾಹಿತಿಯನ್ನು ಆಫ್ ಲೈನ್ ನಲ್ಲಿ ಪಡೆಯಲು ನೆರವಾಗಲಿದೆ.
ಆಧಾರ್ ಕಾರ್ಡ್ ಅನ್ನು ಖಚಿತಪಡಿಸಿಕೊಳ್ಳಲು ಇದು ಅತ್ಯಂತ ಸರಳವಾದ ಆಫ್ ಲೈನ್ ಮಾರ್ಗ ಎಂದು ಯುಐಡಿಎಐ ಸಿಇಒ ಅಜಯ್ ಭೂಷಣ್ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com