ಮತದಾರರನ್ನು ಪ್ರಭಾವಿಸಲು ಫೇಸ್ ಬುಕ್ ದತ್ತಾಂಶ ಬಳಕೆಗೆ ಸಲಹೆ ನೀಡಿದ್ದ ಕೇಂಬ್ರಿಡ್ಜ್ ಅನಲಿಟಿಕಾ; ಆರೋಪ ನಿರಾಕರಿಸಿದ ಕಾಂಗ್ರೆಸ್

ತಾವು ಎಂದಿಗೂ ಇಂತಹ ಸೇವೆಗಳನ್ನು ಬಳಸಿಕೊಂಡಿಲ್ಲ ಎಂದು ಹೇಳುತ್ತಿದ್ದರೂ ಕೂಡ ಕಾಂಗ್ರೆಸ್ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ತಾವು ಎಂದಿಗೂ ಇಂತಹ ಸೇವೆಗಳನ್ನು ಬಳಸಿಕೊಂಡಿಲ್ಲ ಎಂದು ಹೇಳುತ್ತಿದ್ದರೂ ಕೂಡ ಕಾಂಗ್ರೆಸ್ ಪಕ್ಷ 2019 ರ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಮತದಾರರ ಮೇಲೆ ಪ್ರಭಾವ ಬೀರಲು ಇಂಗ್ಲೆಂಡ್ ಮೂಲದ ಕೇಂಬ್ರಿಡ್ಜ್ ಅನಾಲಿಟಿಕಾ ಸಂಸ್ಥೆಗೆ 2.5 ಕೋಟಿ ರೂಪಾಯಿ ನೀಡಿದೆ ಎಂಬ ಮಾಹಿತಿ ಸೋರಿಕೆಯಾಗಿದೆ.

ಸೋರಿಕೆಯಾಗಿರುವ ಮಾಹಿತಿ ಪ್ರಕಾರ, ಆಗಸ್ಟ್ 2017ರಲ್ಲಿ 49 ಪುಟಗಳ ಪ್ರಸ್ತಾವನೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು. ಕೇಂಬ್ರಿಡ್ಜ್ ಅನಾಲಿಟಿಕಾ, ಫೇಸ್ ಬುಕ್ ದತ್ತಾಂಶ ಮೂಲಕ ಮತದಾರರ ಮೇಲೆ ಪ್ರಭಾವ ಬೀರಲು ಕಾಂಗ್ರೆಸ್ ಪಕ್ಷಕ್ಕೆ ಸಲಹೆ ನೀಡಿತ್ತು ಎನ್ನಲಾಗಿದೆ.

ಈ ಬಗ್ಗೆ ಕಾಂಗ್ರೆಸ್ ನ ದತ್ತಾಂಶ ವಿವರಣೆ ಇಲಾಖೆಯ ಮುಖ್ಯಸ್ಥ ಪ್ರವೀಣ್ ಚಕ್ರವರ್ತಿ ಅವರನ್ನು ಪಿಟಿಐ ಸುದ್ದಿಸಂಸ್ಥೆ ಸಂಪರ್ಕಿಸಿದಾಗ ದೇಶದ ಬಹುದೊಡ್ಡ ಪಕ್ಷವಾಗಿರುವ ಕಾಂಗ್ರೆಸ್ ಗೆ ಹಲವು ಪ್ರಸ್ತಾವನೆಗಳು ಬರುತ್ತವೆ, ಆದರೆ ನಮ್ಮ ಪಕ್ಷ ಕೇಂಬ್ರಿಡ್ಜ್ ಅನಾಲಿಟಿಕಾದಿಂದ ಅಂತಹ ಸೇವೆಯನ್ನು ಎಂದಿಗೂ ಪಡೆದುಕೊಂಡಿಲ್ಲ ಎಂದಿದ್ದಾರೆ.

ಕೇಂಬ್ರಿಡ್ಜ್ ಅನಾಲಿಟಿಕಾ ಜೊತೆ ಯಾವುದೇ ಸಂಬಂಧ ಮತ್ತು ಹೊಂದಾಣಿಕೆ ಕಾಂಗ್ರೆಸ್ ಮಾಡಿಕೊಂಡಿಲ್ಲ ಎಂದಿದ್ದಾರೆ.2019ರ ಸಾರ್ವತ್ರಿಕ ಚುನಾವಣೆಗೆ ಪಕ್ಷದ ಕಾರ್ಯತಂತ್ರಗಳಿಗೆ ದಾಖಲೆಗಳ ಪ್ರಸ್ತಾವನೆ ಬಗ್ಗೆ ಕೇಳಿದಾಗ,  ನಾನು ಅಂತಹ ಯಾವುದೇ ದಾಖಲೆಗಳನ್ನು ನೋಡಿಲ್ಲ ಮತ್ತು ನನಗೆ ಅದರ ಬಗ್ಗೆ ಅರಿವು ಕೂಡ ಇಲ್ಲ ಎಂದಿದ್ದಾರೆ.

ಕಾಂಗ್ರೆಸ್ ನ ದತ್ತಾಂಶ ವಿವರಣೆ ಇಲಾಖೆಯ ಉಸ್ತುವಾರಿ ಹುದ್ದೆ ಇತ್ತೀಚೆಗೆ ವಹಿಸಿಕೊಂಡಿರುವ ಚಕ್ರವರ್ತಿ, ಕಾಂಗ್ರೆಸ್ ಈ ವಿಚಾರದಲ್ಲಿ ಅಸ್ಪಷ್ಟತೆ ಹೊಂದಲು ಯಾವುದೇ ಕಾರಣವಿಲ್ಲ. ಕೇಂಬ್ರಿಡ್ಜ್ ಅನಾಲಿಟಿಕಾದ ಜೊತೆ ಕಾಂಗ್ರೆಸ್ ಯಾವುದೇ ಸಂಬಂಧ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com