ಆಂಬಿ ವ್ಯಾಲಿ ಆಸ್ತಿ ಮಾರಾಟಕ್ಕೆ ಮೇ 15ರ ವರೆಗೆ ಕಾಲಾವಕಾಶ ನೀಡಿದ ಸುಪ್ರೀಂ

ಸಹಾರಾ ಗ್ರೂಪ್ ಒಡೆತನದ ಪ್ರತಿಷ್ಠಿತ ಆಂಬಿ ವ್ಯಾಲಿ ಟೌನ್ ಶಿಪ್ ನಲ್ಲಿರುವ ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್....
ಸಹರಾ ಮುಖ್ಯಸ್ಥ ಸುಬ್ರತಾ ರಾಯ್
ಸಹರಾ ಮುಖ್ಯಸ್ಥ ಸುಬ್ರತಾ ರಾಯ್
ನವದೆಹಲಿ: ಸಹಾರಾ ಗ್ರೂಪ್ ಒಡೆತನದ ಪ್ರತಿಷ್ಠಿತ ಆಂಬಿ ವ್ಯಾಲಿ ಟೌನ್ ಶಿಪ್ ನಲ್ಲಿರುವ ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್ ಮೇ 15ರ ವರೆಗೆ ಕಾಲಾವಕಾಶ ನೀಡಿದೆ.
ಮೇ 15ರೊಳಗೆ ಆಂಬಿ ವ್ಯಾಲಿಯಲ್ಲಿರುವ ಆಸ್ತಿಯನ್ನು ಮಾರಾಟ ಮಾಡಿ, ಬಾಕಿ ಉಳಿದ ಹಣವನ್ನು ಸೆಬಿಗೆ ನೀಡದಿದ್ದರೆ ಬಾಂಬೆ ಹೈಕೋರ್ಟ್ ಅಧಿಕಾರಿಗಳು ಆಂಬಿ ವ್ಯಾಲಿ ಆಸ್ತಿಯನ್ನು ಹರಾಜು ಹಾಕಲಿದ್ದಾರೆ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠ ಎಚ್ಚರಿಕೆ ನೀಡಿ, ವಿಚಾರಣೆಯನ್ನು ಮೇ 15ಕ್ಕೆ ಮುಂದೂಡಿದೆ.
ಪುಣೆ ಬಳಿಯಿರುವ ಆಂಬಿ ವ್ಯಾಲಿಯನ್ನು ಹರಾಜು ಮಾಡುವಂತೆ ಸುಪ್ರೀಂ ಕೋರ್ಟ್‌ ಈ ಹಿಂದೆ ಸೆಬಿಗೆ ಆದೇಶಿಸಿತ್ತು. ಆದರೆ, ಪುಣೆಯ ಪೊಲೀಸ್‌ ವರಿಷ್ಠಾಧಿಕಾರಿಗೆ ಪತ್ರ ಬರೆದಿದ್ದ‌ ಸಹರಾ ಗ್ರೂಪ್‌, ಹರಾಜು ನಡೆಸಿದರೆ ಪುಣೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುವ ಬಗ್ಗೆ ಭ್ರಾಂತಿ ವ್ಯಕ್ತಪಡಿಸಿತ್ತು. ಸಹಾರಾ ಗ್ರೂಪ್‌ನ ನಡೆಯಿಂದ ಕೆರಳಿದ ಸೆಬಿ ಈ ವಿಚಾರವನ್ನು ಸುಪ್ರೀಂ ಗಮನಕ್ಕೆ ತಂದಿದೆ.
ಐಷಾರಾಮಿ ಆ್ಯಂಬಿ ವ್ಯಾಲಿಗೆ 37,392 ಕೋಟಿ ರು. ಮೌಲ್ಯ ನಿಗದಿಪಡಿಸಲಾಗಿದೆ. ವಿಲ್ಲಾಗಳು, ಗಾಲ್ಫ್ ಕೋರ್ಸ್, ಆಸ್ಪತ್ರೆ, ಶಾಲೆ, ವಿಮಾನ ನಿಲ್ದಾಣ ಸೇರಿದಂತೆ ಹಲವು ಅತ್ಯಾಧುನಿಕ ಸೌಲಭ್ಯಗಳ ಆ್ಯಂಬಿ ವ್ಯಾಲಿಯಲ್ಲಿ ಲಭ್ಯವಿರಲಿದೆ. ಪುಣೆ ಜಿಲ್ಲೆಯ ಲೋನವಾಲಾದಲ್ಲಿ ಸುಮಾರು 6,761.6 ಎಕರೆ ಪ್ರದೇಶದಲ್ಲಿ ಆ್ಯಂಬಿ ವ್ಯಾಲಿ ಟೌನ್ ಶಿಪ್ ನಿರ್ಮಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com