ನವದೆಹಲಿ: ಸುಪ್ರೀಂ ಕೋರ್ಟ್ ನ ಅಧಿಕೃತ ವೆಬ್ ಸೈಟ್ ಅನ್ನು ಗುರುವಾರ ಬೆಳಗ್ಗೆ ಹ್ಯಾಕ್ ಮಾಡಿರುವ ಶಂಕೆ ವ್ಯಕ್ತವಾಗಿದೆ. ಆದರೆ ಕೋರ್ಟ್ ಅಧಿಕಾರಿಗಳು ಇದುವರೆಗೂ ಅದನ್ನು ಖಚಿತಪಡಿಸಿಲ್ಲ.
ಇಂದು ಬೆಳಗ್ಗೆ 11.35ರಿಂದ ವೆಬ್ ಸೈಟ್ ಕಾರ್ಯನಿರ್ವಹಿಸುತ್ತಿಲ್ಲ ಮತ್ತು ಅದನ್ನು ಸರಿಪಡಿಸುವ ಎಲ್ಲಾ ಯತ್ನಗಳು ನಡೆಯುತ್ತಿವೆ ಎಂದು ಸರ್ವೋಚ್ಛ ನ್ಯಾಯಾಲಯದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ ವೆಬ್ ಸೈಟ್ ಹ್ಯಾಕ್ ಮಾಡಲಾಗಿದೆ ಎಂಬ ಸುದ್ದಿ ಹಾಗೂ ಹ್ಯಾಕ್ ಮಾಡಿರುವ ಸ್ಕ್ರೀನ್ ಶಾಟ್ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಬ್ರೆಜಿಲ್ ದೇಶದಲ್ಲಿ ಹ್ಯಾಕ್ ಮಾಡಿರುವ ಶಂಕೆ ವ್ಯಕ್ತವಾಗಿದೆ. ಹ್ಯಾಕ್ ಮಾಡಿದವರು ವೆಬ್ ಸೈಟ್ ನಲ್ಲಿ ಬ್ರೆಜಿಲ್ ದೇಶದ ಮರಿಜಿನಾ ಹೂವಿನ ಚಿತ್ರವನ್ನು ಪ್ರಕಟಿಸಿದ್ದಾರೆ ಹಾಗೂ 'ಹೈಟೆಕ್ ಬ್ರೆಜಿಲ್ ಹ್ಯಾಕ್ ಟೀಂ' ಎಂದು ಬರೆಯಲಾಗಿದೆ.
ಈ ತಿಂಗಳ ಆರಂಭದಲ್ಲಿ ರಕ್ಷಣಾ ಇಲಾಖೆ ಸೇರಿದಂತೆ ಇತರೆ ಸರ್ಕಾರಿ ಇಲಾಖೆಗಳ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಲಾಗಿತ್ತು.