1993ರ ಮಾರ್ಚ್ 12ರಂದು ಮುಂಬೈನಲ್ಲಿ ನಡೆದ ಸರಣಿ ಸ್ಫೋಟದಲ್ಲಿ 257 ಮಂದಿ ಸಾವನ್ನಪ್ಪಿ, 700 ಮಂದಿ ಗಾಯಗೊಂಡಿದ್ದರು. 27 ಕೋಟಿಗೂ ಹೆಚ್ಚು ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟವಾಗಿತ್ತು. ಈ ಪ್ರಕರಣದಲ್ಲಿ ಗ್ಯಾಂಗ್‌ಸ್ಟರ್ ಅಬು ಸಲೇಂ ದೋಷಿ ಎಂದು ಕಳೆದ ತಿಂಗಳಷ್ಟೆ ಮುಂಬೈ ಟಾಡಾ ಕೋರ್ಟ್ ತೀರ್ಪು ನೀಡಿತ್ತು.