ಚಿಕಿತ್ಸೆ ಪಡೆಯುತ್ತಿರುವವರ ಚಿತ್ರ
ಚಿಕಿತ್ಸೆ ಪಡೆಯುತ್ತಿರುವವರ ಚಿತ್ರ

ರಾಜಸ್ತಾನ : ಪ್ರಾಣಿಗಳ ಬದಲಿಗೆ ಮನುಷ್ಯರ ಮೇಲೆ ಔಷಧ ಪರೀಕ್ಷೆ

ವಿದೇಶಿ ಮೂಲದ ಔಷಧ ಕಂಪನಿಯೊಂದು ಪ್ರಾಣಿಗಳ ಬದಲಿಗೆ ಮನುಷ್ಯರ ಮೇಲೆ ಔಷಧಿ ಪರೀಕ್ಷೆ ನಡೆಸಿದ್ದರಿಂದ ಅವರೆಲ್ಲರೂ ಅಸ್ವಸ್ಥಗೊಂಡಿರುವ ಘಟನೆ ರಾಜಸ್ತಾನದ ಬಿಡಾಸಾರ್ ನಲ್ಲಿ ನಡೆದಿದೆ.

ಬಿಡಾಸಾರ್: ವಿದೇಶಿ ಮೂಲದ ಔಷಧ ಕಂಪನಿಯೊಂದು ಪ್ರಾಣಿಗಳ ಬದಲಿಗೆ ಮನುಷ್ಯರ ಮೇಲೆ ಔಷಧಿ ಪರೀಕ್ಷೆ ನಡೆಸಿದ್ದರಿಂದ ಹಲವರು ಅಸ್ವಸ್ಥಗೊಂಡಿರುವ ಘಟನೆ ರಾಜಸ್ತಾನದ ಬಿಡಾಸಾರ್ ನಲ್ಲಿ ನಡೆದಿದೆ.

ಇವರೆಲ್ಲರೂ ಕೂಲಿ ಕಾರ್ಮಿಕರಾಗಿದ್ದು, ಚುರು ಜಿಲ್ಲೆಯ ಜಲ್ ಪಾಣಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಕಾರ್ಯಕ್ಕೆ ಕೂಲಿ ಕಾರ್ಮಿಕರಿಗೆ ಕಂಪನಿ ಆಮಿಷವೊಡ್ಡಿರುವುದು ವರದಿಗಳಿಂದ ತಿಳಿದುಬಂದಿದೆ. ಸಾರ್ವಜನಿಕರ ಸೇವೆಗಾಗಿ ಪ್ರತಿದಿನ 500 ರೂ. ನೀಡುವುದಾಗಿ ಆಕರ್ಷಿಸಲಾಗಿತ್ತು ಎನ್ನಲಾಗಿದೆ.

ಹಣ ನೀಡುವುದಾಗಿ ನಂಬಿಸಿದ್ದರಿಂದ ಮೂರು ದಿನಗಳ ಹಿಂದೆ ಅಂದರೆ ಏ. 18 ರಂದು ಅಲ್ಲಿಗೆ ಬಂದಿರುವುದಾಗಿ ಸಂತ್ರಸ್ತರು ಹೇಳಿದ್ದಾರೆ. 21 ಜನರ ಪೈಕಿ 16 ರಂದು ಮಂದಿ ನೋವು ಅನುಭವಿಸುತ್ತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 ಔಷಧಿ ಸೇವಿಸಿದ ನಂತರ ಎಲ್ಲಾರೂ ನಿದ್ರೆಗೆ ಜಾರಿದ್ದಾಗಿ ಮತ್ತೊಬ್ಬ ಸಂತ್ರಸ್ತರು ಎಐಎನ್ ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಇನ್ನೂ ಈ ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ರಾಜಸ್ತಾನ ಆರೋಗ್ಯ ಸಚಿವ ಕಾಳಿ ಚರಣ್ ಸರಾಪ್ ,  ಆಗಿರುವ ತೊಂದರೆಯನ್ನು ಗಮನಿಸಲಾಗುತ್ತಿದೆ.  ಸಂತ್ರಸ್ತರನ್ನು ನೋಡಿಕೊಳ್ಳಲು ಅಧಿಕಾರಿಗಳನ್ನು ನೇಮಿಸಿರುವುದಾಗಿ  ತಿಳಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com