ಆಂಧ್ರ ಪ್ರದೇಶ: ಮಂಗಳಮುಖಿಯರಿಂದ ಚಂದ್ರಬಾಬು ನಾಯ್ಡುವಿಗಾಗಿ ದೇವಾಲಯ ನಿರ್ಮಾಣ

ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಗೌರವಾರ್ಥ ದೇವಾಲಯ ನಿರ್ಮಿಸಲು ಮುಂದಾಗಿರುವ ಮಂಗಳಮುಖಿಯರು ಶಂಕುಸ್ಥಾಪನೆ ಮಾಡಿದ್ದಾರೆ. ...
ಚಂದ್ರಬಾಬು ನಾಯ್ಡು ದೇವಾಲಯ ನಿರ್ಮಾಣಕ್ಕಾಗಿ ಅಡಿಗಲ್ಲು ಹಾಕಿದ ಮಂಗಳಮುಖಿಯರು
ಚಂದ್ರಬಾಬು ನಾಯ್ಡು ದೇವಾಲಯ ನಿರ್ಮಾಣಕ್ಕಾಗಿ ಅಡಿಗಲ್ಲು ಹಾಕಿದ ಮಂಗಳಮುಖಿಯರು
ಕರ್ನೂಲು:  ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಗೌರವಾರ್ಥ ದೇವಾಲಯ ನಿರ್ಮಿಸಲು ಮುಂದಾಗಿರುವ ಮಂಗಳಮುಖಿಯರು ಶಂಕುಸ್ಥಾಪನೆ ಮಾಡಿದ್ದಾರೆ. 
ಸಮತಾ ಹಿಜಡಾ ಹಕ್ಕುಲ ಐಕ್ಯ ಪೋರಾಟ ವೇದಿಕಾ ನಾಂಡ್ಯಾಲ್ ನಲ್ಲಿ ಚಂದ್ರಬಾಬು ನಾಯ್ಡು ದೇವಾಲಯ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಿದ್ದಾರೆ,
30 ಲಕ್ಷ ರು. ಅಂದಾಜಿನಲ್ಲಿ ದೇವಸ್ಥಾನ ಕಟ್ಟಲು ಹಿಜಡಾ ಸಮುದಾಯದ ಜನರು ನಿರ್ಧರಿಸಿದ್ದಾರೆ. ನಂದ್ಯಾಲ್ ನಗರದ ಪೆದ್ದಕೊತ್ತಲ ಗ್ರಾಮದಲ್ಲಿ ಈ ದೇವಸ್ಥಾನ ನಿರ್ಮಿಸಲಾಗುತ್ತಿದೆ, ಪ್ರವಾಸೋದ್ಯಮ ಸಚಿವ ಭೂಮ ಅಖಿಲ ಪ್ರಿಯಾ ಹಾಗೂ ಜಿಲ್ಲಾಧಿಕಾರಿ ಸತ್ಯನಾರಾಯಣ ಅವರು ಶಂಕು ಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ದೇವಾಲಯದಲ್ಲಿ ನಾಯ್ಡು ಅವರ ಬೆಳ್ಳಿಯ ಪ್ರತಿಮೆ ಸ್ಥಾಪಿಸಲಾಗುತ್ತದೆ. ಸಿಎಂ ನಾಯ್ಡು ಮಂಗಳಮುಖಿಯರಿಗಾಗಿ  ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ, ಮನೆ, ನಿವೇಶನ, ಪಿಂಚಣಿ ಯೋಜನೆ ಸೇರಿದಂತೆ ಹಲವು ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ, ಬೇರೆ ಯಾವುದೇ ನಾಯಕರು ಈ ರೀತಿ ಮಾಡಿಲ್ಲ ಎಂದು ಸಮತಾ ಹಿಜಡಾ ಹಕ್ಕುಲ ಐಕ್ಯ ಪೋರಾಟ ವೇದಿಕಾ ಅಧ್ಯಕ್ಷ ವಿಜಯ್ ಕುಮಾರ್ ಹೇಳಿದ್ದಾರೆ. 
ದೇವಾಲಯ ನಿರ್ಮಾಣಕ್ಕಾಗಿ ಟಿಡಿಪಿ ಮುಖಂಡ ಅಭಿರುಚಿ ಮಧು 5 ಲಕ್ಷ ರು ಹಣ  ನೀಡಿದ್ದಾರೆ, 5 ಕೆಜಿ ತೂಕವಿರುವ ನಾಯ್ದು ಅವರ ಬೆಳ್ಳಿ ಪ್ರತಿಮೆ ನಿರ್ಮಾಣ ಮಾಡಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com