ಅತ್ಯಾಚಾರದ ಸಂತ್ರಸ್ತೆಯರು ಪೊಲೀಸ್ ಠಾಣೆಗೆ ಹೋದರೆ ’ಎಷ್ಟು ಜನ ಇದ್ರು ಎಂದು ಕೇಳುತ್ತಾರೆ: ರೇಣುಕಾ ಚೌಧರಿ

ಉನ್ನಾವೋ ಹಾಗೂ ಕಥುವಾ ಅತ್ಯಾಚಾರ ಪ್ರಕರಣಗಳ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿ, ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಾಲಿವುಡ್ ಚಿತ್ರ ಶೋಲೆಯ ಕಿತನೆ ಆದ್ಮಿ ಥೇ? ಎಂಬ..
ರೇಣುಕಾ ಚೌಧರಿ
ರೇಣುಕಾ ಚೌಧರಿ
ಪಾಟ್ನಾ: ಉನ್ನಾವೋ ಹಾಗೂ ಕಥುವಾ ಅತ್ಯಾಚಾರ ಪ್ರಕರಣಗಳ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿ, ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಾಲಿವುಡ್ ಚಿತ್ರ ಶೋಲೆಯ ಕಿತನೆ ಆದ್ಮಿ ಥೇ? ಎಂಬ ಜನಪ್ರಿಯ ಡೈಲಾಗ್ ನ್ನು ಅನುಕರಣೆ ಮಾಡಿ ಉದಾಹರಣೆ ನೀಡಿದ್ದಾರೆ. 
"ಮನೆಯಿಂದ ಯಾವ ಮಹಿಳೆಯರೂ ಇಂದು ಹೊರ ಹೋಗುತ್ತಿಲ್ಲ. ಅತ್ಯಾಚಾರಕ್ಕೊಳಗಾದ ಹೆಣ್ಣುಮಕ್ಕಳು ಪೊಲೀಸ್ ಠಾಣೆಗೆ ತೆರಳಿದರೆ ಪೊಲೀಸರು " ಎಷ್ಟು ಜನರಿದ್ದರು (ಕಿತನೆ ಆದ್ಮಿ ಥೇ?) ಎಂದು ಪ್ರಶ್ನಿಸುತ್ತಾರೆ ಎಂದು ಹೇಳಿದ್ದಾರೆ. 
ಪಾಟ್ನಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿರುವ ರೇಣುಕಾ ಚೌಧರಿ ನೀಡಿರುವ ಈ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ. ಇದಕ್ಕೂ ಮುನ್ನ ಬಿಜೆಪಿ ಸಂಸದೆ ಹೇಮ ಮಾಲಿನಿ ಸಹ ಇಂಥಹದ್ದೇ ಹೇಳಿಕೆ ನೀಡಿದ್ದರು. ಅತ್ಯಾಚಾರ ಪ್ರಕರಣಗಳು, ಅಪ್ರಾಪ್ತರ ಮೇಲಿನ ಅತ್ಯಾಚಾರ ಪ್ರಕರಣಗಳಿಗೆ ಹೆಚ್ಚಿನ ಪ್ರಚಾರ ನೀಡಲಾಗುತ್ತಿದೆ ಎಂದು ಹೇಮ ಮಾಲಿನಿ ಹೇಳಿದ್ದೂ ಸಹ ಚರ್ಚೆಗೆ ಗ್ರಾಸವಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com