ನೊಯ್ಡಾ: ಗ್ಯಾಂಗ್ ಸ್ಟರ್ ಬಾಲರಾಜ್‌ ಭಾಟಿ ಎಸ್ ಟಿಎಫ್ ಎನ್ ಕೌಂಟರ್ ಗೆ ಬಲಿ

ಉತ್ತರ ಪ್ರದೇಶ ವಿಶೇಷ ಕಾರ್ಯಪಡೆ(ಎಸ್ ಟಿಎಫ್) ಸೋಮವಾರ ಹರಿಯಾಣ ಪೊಲೀಸರೊಂದಿಗೆ ನಡೆಸಿದ ಜಂಟಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನೊಯ್ಡಾ: ಉತ್ತರ ಪ್ರದೇಶ ವಿಶೇಷ ಕಾರ್ಯಪಡೆ(ಎಸ್ ಟಿಎಫ್) ಸೋಮವಾರ ಹರಿಯಾಣ ಪೊಲೀಸರೊಂದಿಗೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಗ್ಯಾಂಗ್ ಸ್ಟರ್ ಬಾಲರಾಜ್‌ ಭಾಟಿಯನ್ನು ಎನ್ ಕೌಂಟರ್ ಮಾಡಿದೆ. 
ನಾಲ್ಕು ರಾಜ್ಯಗಳಲ್ಲಿ 19 ಪ್ರಕರಣಗಳಲ್ಲಿ ಬೇಕಾಗಿದ್ದ ಭಾಟಿ ತಲೆಗೆ ಪೊಲೀಸರು ಈ ಹಿಂದೆ  2.5 ಲಕ್ಷ ರು. ಬಹುಮಾನ ಘೋಷಿಸಿದ್ದರು. ಇಂದು ಕಡೆಗೂ ಪೊಲೀಸರೇ ಗ್ಯಾಂಗ್ ಸ್ಟರ್ ನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದು, ಇದು ಪೊಲೀಸ್‌ ಪಡೆಗೆ ದೊಡ್ಡ ಯಶಸ್ಸು ಎನ್ನಲಾಗಿದೆ.
ನೊಯ್ಡಾ ಸೆಕ್ಟರ್‌ 41ರಲ್ಲಿ ಪಾತಕಿ ಭಾಟಿ ದೊಡ್ಡ ಮಟ್ಟದ ದರೋಡೆಗೆ ಸ್ಕೆಚ್‌ ಹಾಕಿಕೊಂಡಿದ್ದ ಮಾಹಿತಿ ಪಡೆದಿದ್ದ ಪೊಲೀಸರ ಜಂಟಿ ತಂಡ, ಅಲ್ಲಿಗೆ ಧಾವಿಸಿ ಕಟ್ಟೆಚ್ಚರ ಘೋಷಿಸಿ ಎಲ್ಲ ನಿರ್ಗಮನ ಮಾರ್ಗಗಳನ್ನು ಮುಚ್ಚಿದರು. ತನ್ನನ್ನು ಎಲ್ಲ ದಿಕ್ಕುಗಳಿಂದ ಪೊಲೀಸರು ಸುತ್ತುವರಿದಿರುವುದನ್ನು ಅರಿತ ಭಾಟಿ ಮತ್ತು ಆತನ ತಂಡದವರು ಪೊಲೀಸರ ಮೇಲೆ ಗುಂಡಿನ ದಾಳಿಗೆ ಮುಂದಾದರು. ಕೂಡಲೇ ಪೊಲೀಸರು ಗುಂಡಿನ ಉತ್ತರ ನೀಡಿದರು. 
ಗುಂಡೇಟಿಗೆ ಗಂಭೀರವಾಗಿ ಗಾಯಗೊಂಡ ಭಾಟಿಯನ್ನು ಜಿಲ್ಲಾ ಆಸ್ಪತ್ರೆಗೆ ಒಯ್ದಾಗ ಆತ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com