ಸಲಿಂಗಕಾಮದ ಅಪರಾಧೀಕರಣ ಪ್ರಶ್ನಿಸಿ ಪಿಐಎಲ್, ಕೇಂದ್ರಕ್ಕೆ ಸುಪ್ರೀಂ ನೋಟೀಸ್

ಇಬ್ಬರು ವಯಸ್ಕರ ಒಪ್ಪಿಗೆಯಿಂದ ನಡೆಯುವ ಸಲಿಂಗಕಾಮ ಲೈಗಿಕ ಕ್ರಿಯೆಯನ್ನು ಅಪರಾಧ ಎನ್ನುವ ಕೇಂದ್ರದ ಕಾನೂನನ್ನು ಪ್ರಶ್ನಿಸಿ ಹೋಟೆಲ್ ಉದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ...
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್
ನವದೆಹಲಿ: ಇಬ್ಬರು ವಯಸ್ಕರ ಒಪ್ಪಿಗೆಯಿಂದ ನಡೆಯುವ ಸಲಿಂಗಕಾಮ ಲೈಗಿಕ ಕ್ರಿಯೆಯನ್ನು ಅಪರಾಧ ಎನ್ನುವ ಕೇಂದ್ರದ ಕಾನೂನನ್ನು ಪ್ರಶ್ನಿಸಿ ಹೋಟೆಲ್ ಉದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಕೇಶವ ಸೂರಿ  ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಸೂರಿ ಅವರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಕೇಂದ್ರ ಸರ್ಕಾರಕ್ಕೆ ನೋಟೀಸ್ ಜಾರಿಗೊಳಿಸಿದೆ.
ಇನ್ನೊಂದು ವಾರದಲ್ಲಿ ತಮ್ಮ ನೋತೀಸಿಗೆ ಕೇಂದ್ರ ಉತ್ತರಿಸಬೇಕೆಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹೇಳಿದ್ದಾರೆ. ಅಲ್ಲದೆ ಇದೇ ವಿಚಾರವಾಗಿ ಸಲ್ಲಿಕೆಯಾಗಿರುವ ಇತರೆ ಅರ್ಜಿಗಳೊಡನೆ ಈ ಅರ್ಜಿಯ ವಿಚಾರಣೆ ಸಹ ನಡೆಯಲಿದೆ ಎಂದು ಸಾವಿಧಾನಿಕ ಪೀಠ ಹೇಳಿದೆ.
ವಯಸ್ಕರು, ಪರಸ್ಪರ ಒಪ್ಪಿಗೆ ಇರುವವರು ನಡೆಸುವ ಸಲಿಂಗಕಾಮ ಸಹ ಅಪರಾಧ ಎಂದು ಹೇಳುವ ಮೂಲಕ ಬಾರತೀಯ ದಂಡ ಸಂಹಿತೆ ಸಲಿಂಗಕಾಮಿಗಳಿಗೆ ಅನ್ಯಾಯಮಾಡಿದೆ.ಸಲಿಂಗಕಾಮ ಪರಸ್ಪರ ಒಪ್ಪಿಗೆ ಇಂದ ನಡೆಯುವ ಲೈಂಗಿಕ ಕ್ರಿಯೆ ಅಪರಾಧ ಎನ್ನುವುದರಿಂದ ಅನೇಕರು ವಿನಾ ಕಾರಣ ತನಿಖೆ ಎದುರಿಸಬೇಕಾಗಿದೆ" ಪಿಐಎಲ್ ನಲ್ಲಿ ವಿವರಿಸಲಾಗಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com