ಅಮೃತಸರದ ಸ್ವರ್ಣ ಮಂದಿರವನ್ನು ಸ್ವರ್ಣ ಮಸೀದಿ ಎಂದಿದ್ದ ಯುಕೆ ರಾಯಭಾರಿ ಅಧಿಕಾರಿಯಿಂದ ಕ್ಷಮೆಯಾಚನೆ

ಸಿಖ್ ಸಮುದಾಯದವರ ಶ್ರದ್ಧಾ ಕೇಂದ್ರ ಅಮೃತ ಸರದ ಸ್ವರ್ಣ ಮಂದಿರವನ್ನು ಸ್ವರ್ಣ ಮಸೀದಿ ಎಂದಿದ್ದ ಬ್ರಿಟನ್ ನ ಉನ್ನತ ರಾಯಭಾರಿ ಅಧಿಕಾರಿ ಸರ್ ಸಿಮೋನ್ ಮೆಕ್ ಡೊನಾಲ್ಡ್ ಕ್ಷಮೆ ಕೇಳಿದ್ದಾರೆ.
ಸ್ವರ್ಣ ಮಂದಿರ
ಸ್ವರ್ಣ ಮಂದಿರ
ಚಂಡೀಗಢ: ಸಿಖ್ ಸಮುದಾಯದವರ ಶ್ರದ್ಧಾ ಕೇಂದ್ರ ಅಮೃತ ಸರದ ಸ್ವರ್ಣ ಮಂದಿರವನ್ನು ಸ್ವರ್ಣ ಮಸೀದಿ ಎಂದಿದ್ದ ಬ್ರಿಟನ್ ನ ಉನ್ನತ ರಾಯಭಾರಿ ಅಧಿಕಾರಿ ಸರ್ ಸಿಮೋನ್ ಮೆಕ್ ಡೊನಾಲ್ಡ್ ಕ್ಷಮೆ ಕೇಳಿದ್ದಾರೆ. 
ಪಂಜಾಬ್ ಗೆ ಭೇಟಿ ನೀಡಿದ್ದ ವೇಳೆ ತೆಗೆದಿದ್ದ ಫೋಟೊವನ್ನು ಟ್ವಿಟರ್ ನಲ್ಲಿ ಅಪ್ ಲೋಡ್ ಮಾಡಿದ್ದ ಸಿಮೋನ್ ಮೆಕ್ ಡೊನಾಲ್ಡ್, ಗೋಲ್ಡನ್ ಟೆಂಪಲ್ ಎಂದು ಬರೆಯುವ ಬದಲು ಗೋಲ್ಡನ್ ಮಸೀದಿ ಎಂದು ಬರೆದಿದ್ದರು.  ಇದಕ್ಕೆ ಟ್ವಿಟರ್ ಬಳಕೆದಾರರಿಂದ ತೀವ್ರ ಆಕ್ಷೇಪ ಎದುರಾಗಿತ್ತು. 
ತಮ್ಮ ತಪ್ಪನ್ನು ತಿದ್ದಿಕೊಂಡಿರುವ ರಾಯಭಾರಿ ಅಧಿಕಾರಿ, ನಾನು ಗೋಲ್ಡನ್ ಟೆಂಪಲ್ ನ್ನು ಶ್ರೀ ಹರ್ ಮಂದಿರ್ ಸಾಹಿಬ್ ಎಂದಾದರೂ ಹೇಳಬೇಕಿತ್ತು, ನನ್ನಿಂದ ತಪ್ಪಾಗಿದೆ. ಕ್ಷಮಿಸಿ ಎಂದು ಟ್ವೀಟ್ ಮಾಡಿದ್ದಾರೆ.  ಬ್ರಿಟನ್ ನಲ್ಲಿರುವ ಸಿಖ್ ಫೆಡರೇಷನ್ ನ ಅಧ್ಯಕ್ಷ ಭಾಯ್ ಅಮ್ರಿಕ್ ಸಿಂಗ್ ನಾಗರಿಕ ಸೇವೆಯಲ್ಲಿರುವ ಅಧಿಕಾರಿ ಈ ರೀತಿ ತಪ್ಪು ಬರೆದಿರುವುದು ಒಪ್ಪಲಾಗದು, ಅಂತಹ ಉನ್ನತ ಹುದ್ದೆಯಲ್ಲಿರುವವರು ಈ ರೀತಿಯ ತಪ್ಪು ಮಾಡಿದರೆ ಅದು ಅಜ್ಞಾನದ ಮಟ್ಟವನ್ನು ತೋರುತ್ತದೆ ಎಂದು ಹೇಳಿದ್ದಾರೆ. 
ಈ ಘಟನೆ ಬಗ್ಗೆ ಸಿಖ್ ಸಮುದಾಯದ ಮೊದಲ ಸಂಸದರಾದ ಪ್ರೀತ್ ಕೌರ್ ಗಿಲ್ ಹಾಗೂ ಬ್ರಿಟನ್ ಸಂಸತ್ ನಲ್ಲಿ ಸಿಖ್ ಸಮುದಾಯವನ್ನು ಪ್ರತಿನಿಧಿಸುವ ಎಲ್ಲಾ ಪಕ್ಷಗಳ ಮುಖಂಡರನ್ನು ಭೇಟಿ ಮಾಡಿ ಸಿಖ್ ಸಮುದಾಯದ ಬಗ್ಗೆ ಇರುವ ಅಜ್ಞಾನ, ತಾರತಮ್ಯ, ದ್ವೇಷಪೂರಿತ ಅಪರಾಧಗಳನ್ನು ಗಮನಕ್ಕೆ ತರಲಾಗುವುದು ಎಂದು ಅಮ್ರಿಕ್ ಸಿಂಗ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com