ಆಂಧ್ರ ಸರ್ಕಾರಿ ವೆಬ್ ಸೈಟ್ ನಿಂದ 1.3 ಲಕ್ಷ ಮಂದಿಯ ಆಧಾರ್, ಜಾತಿ, ಧರ್ಮದ ಮಾಹಿತಿ ಲೀಕ್

ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ಆಂಧ್ರ ಪ್ರದೇಶ ಸೈಬರ್ ಭದ್ರತಾ...
ಗೃಹ ಮಂಡಳಿ ವೆಬ್ ಸೈಟ್
ಗೃಹ ಮಂಡಳಿ ವೆಬ್ ಸೈಟ್
ವಿಜಯವಾಡ: ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ಆಂಧ್ರ ಪ್ರದೇಶ ಸೈಬರ್ ಭದ್ರತಾ ಕಾರ್ಯಾಚರಣೆ ಕೇಂದ್ರ(ಎಪಿಸಿಎಸ್ ಒಸಿ) ಉದ್ಘಾಟಿಸಿದ ಮಾರನೆ ದಿನವೇ ಆಂಧ್ರ ಪ್ರದೇಶ ಸರ್ಕಾರಿ ವೆಬ್ ಸೈಟ್ ವೊಂದು 1.3 ಲಕ್ಷ ಮಂದಿಯ ಆಧಾರ್, ಜಾತಿ, ಧರ್ಮದ ಕುರಿತ ಮಾಹಿತಿ ಲೀಕ್ ಮಾಡಿರುವ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.
ಈ ಹಿಂದೆ ಸರ್ಕಾರ ಎನ್ ಐರ್ ಇಜಿಎಸ್ ಕಾರ್ಮಿಕರ ಆಧಾರ್ ಮಾಹಿತಿ ಸೋರಿಕೆ ಮಾಡುತ್ತಿದೆ ಎಂದು ಆರೋಪಿಸಿದ್ದ ಭದ್ರತಾ ಸಂಶೋಧಕ ಕೋಡಳ್ಳಿ ಶ್ರೀನಿವಾಸ್ ಅವರು, ಈಗ ರಾಜ್ಯ ಗೃಹ ಮಂಡಳಿ ವೆಬ್ ಸೈಟ್ ಫಲಾನುಭವಿಗಳ ಆಧಾರ್ ಮಾಹಿತಿ, ಜಾತಿ ಮತ್ತು ಧರ್ಮದ ವಿವರ ಬಹಿರಂಗಪಡಿಸಿದೆ ಎಂದು ಹೇಳಿದ್ದಾರೆ.
ಗೃಹ ಮಂಡಳಿಯ ವೆಬ್ ಸೈಟ್ ಹ್ಯಾಕ್ ಆಗಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಸರ್ಕಾರವೇ ಫಲಾನುಭವಿಗಳ ಸಂಪೂರ್ಣ ವಿವರವನ್ನು ಅಪ್ ಲೋಡ್ ಮಾಡಿದ್ದು, ಅದನ್ನು ಪ್ರತಿಯೊಬ್ಬರು ವೀಕ್ಷಿಸಲು ಮತ್ತು ಡೌನ್ ಲೋಡ್ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಕುರಿತು ನಾನು ಭಾರತೀಯ ಗುರುತಿನ ಚೀಟಿ ಪ್ರಧಿಕಾರ, ಕೇಂದ್ರ ಸೈಬರ್ ವಿಭಾಗಕ್ಕೆ ಮತ್ತು ರಾಜ್ಯ ಸರ್ಕಾರಕ್ಕೂ ಮಾಹಿತಿ ನೀಡಿರುವುದಾಗಿ ಶ್ರೀನಿವಾಸ್ ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com