ಜಯಲಲಿತಾ ಅವರ ಯಾವ ಜೈವಿಕ ಮಾದರಿಯೂ ನಮ್ಮ ಬಳಿ ಇಲ್ಲ: ಅಪೋಲೋ ಆಸ್ಪತ್ರೆ ಸ್ಪಷ್ತನೆ

ತಮಿಳು ನಾಡು ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಯಾವುದೇ ಜೈವಿಕ ಮಾದರಿಗಳು ನಮ್ಮ ಬಳಿ ಇಲ್ಲ ಎಂದು ಅಪೋಲೋ ಆಸ್ಪತ್ರೆ ಇಂದು ಮದ್ರಾಸ್ ಹೈಕೋರ್ಟ್ ಗೆ ತಿಳಿಸಿದೆ.
ಜಯಲಲಿತಾ
ಜಯಲಲಿತಾ
ಚೆನ್ನೈ: ತಮಿಳು ನಾಡು ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಯಾವುದೇ ಜೈವಿಕ ಮಾದರಿಗಳು ನಮ್ಮ ಬಳಿ ಇಲ್ಲ ಎಂದು ಅಪೋಲೋ ಆಸ್ಪತ್ರೆ ಮದ್ರಾಸ್ ಹೈಕೋರ್ಟ್ ಗೆ ತಿಳಿಸಿದೆ.
ತಾನು ಜಯಲಲಿತಾ ಅವರ ಪುತ್ರಿ ಎಂದೆನ್ನುವ ಮಹಿಳೆ ಎಸ್. ಅಮೃತಾ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಈ ಉತ್ತರ ನೀಡಿದೆ.
ಎರಡು ವರ್ಷಗಳ ಹಿಂದೆ ಅನಾರೋಗ್ಯಕ್ಕೀಡಾಗಿದ್ದ ಎಐಎಡಿಎಂಕೆ ಅಧಿನಾಯಕಿ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಚಿಕಿತ್ಸೆ ಫಲ ನೀಡದ ಕಾರಣ ಮರಣ ಹೂಂದಿದ್ದ ಅವರ ಸಾವಿನ ಕುರಿತು ತನಿಖೆ ನಡೆಸಲು ವಿಚಾರಣಾ ಆಯೋಹ ರಚಿಸಲಾಗಿತ್ತು. ಆಸ್ಪತ್ರೆಯು ಇದೇ ಜ.12ರಂದು ಜಯಲಲಿತಾ ಅವರಿಗೆ ಸಂಬಂಧಿಸಿದ ವೈದ್ಯಕೀಯ ವರದಿಗಳನ್ನು ಆಯೋಗಕ್ಕೆ ಸಲ್ಲಿಸಿದೆ.
ಜಯಲಲಿತಾ ಸಾವಿನ  ಬಳಿಕ ಅವರ ನಿಗೂಢ ಶಾವಿನ ಸುತ್ತ ಹಲವು ಊಹಾಪೋಹಗಳು ಸೃಷ್ಟಿಯಾಗಿದ್ದವು. ತಮಿಳುನಾಡು ಅರಣ್ಯ ಸಚಿವ ಡಿ. ಶ್ರೀನಿವಾಸನ್ ಸಚಿವ ಸಂಪುಟ ಸಹೋದ್ಯೋಗಿಗಳೆಲ್ಲರೂ ಜಯಲಲಿತಾ ಅವರ ಸಾವಿನ ಕುರಿತಂತೆ ಸಾರ್ವಜನಿಕರಿಗೆ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿದ್ದರು.
ಜಯಲಲಿತಾ ಅವರು 2016ರ ಸೆಪ್ಟೆಂಬರ್ 22ರಂದು ಅನಾರೋಗ್ಯದ ನಿಮಿತ್ತ ಆಸ್ಪತ್ರೆಗೆ ದಾಖಲಾಗಿದ್ದರು. ಡಿಸೆಂಬರ್ 4ರಂದು ಆವರಿಗೆ ಹೃದಯ ಸ್ತಂಭನ ಉಂಟಾಗಿ ಅಸುನೀಗಿದ್ದರು. ಇದಾದ ಮರು ದಿನ ಜಯಲಲಿತಾ ಅವರ ಮರಣ ವಾರ್ತೆಯನ್ನು ಅಧಿಕೃತವಾಗಿ ಘೋಷಿಸಲಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com