ಭ್ರೂಣ ಲಿಂಗ ಪತ್ತೆಯಲ್ಲಿ ಹೆಣ್ಣು ಅಂತ ಹೇಳಿ ಗಂಡು ಹುಟ್ಟಿದ್ದಕ್ಕೆ ಮಗುವಿನ ಮರ್ಮಾಂಗ ಕತ್ತರಿಸಿದ ವೈದ್ಯ!

ದೇಶದಲ್ಲಿ ಭ್ರೂಣದ ಲಿಂಗ ಪತ್ತೆ ನಿಷೇಧವಿದ್ದರೂ ಕೆಲ ವೈದ್ಯರು ಹಣಕ್ಕಾಗಿ ಭ್ರೂಣ ಲಿಂಗ ಪತ್ತೆ ಮಾಡುತ್ತಾರೆ ಎಂಬ ಆರೋಪಗಳಿವೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ರಾಂಚಿ: ದೇಶದಲ್ಲಿ ಭ್ರೂಣದ ಲಿಂಗ ಪತ್ತೆ ನಿಷೇಧವಿದ್ದರೂ ಕೆಲ ವೈದ್ಯರು ಹಣಕ್ಕಾಗಿ ಭ್ರೂಣ ಲಿಂಗ ಪತ್ತೆ ಮಾಡುತ್ತಾರೆ ಎಂಬ ಆರೋಪಗಳಿವೆ. 
ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಜಾರ್ಖಂಡ್ ನಲ್ಲಿ ವೈದ್ಯನೊಬ್ಬ ಮಗು ಜನನಕ್ಕೂ ಮುನ್ನ ಗರ್ಭದಲ್ಲಿ ಹೆಣ್ಣು ಭ್ರೂಣವಿದೆ ಅಂತಾ ತಾಯಿಗೆ ಹೇಳಿದ್ದಾನೆ. ಆದರೆ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದರಿಂದ ತನ್ನ ಮಾತು ಸುಳ್ಳಾಗುತ್ತೆದ ಎಂದು ವೈದ್ಯ ಮಗುವಿನ ಮರ್ಮಾಂಗವನ್ನೇ ಕತ್ತರಿಸಿದ್ದಾನೆ. ತೀವ್ರ ರಕ್ತಸ್ರಾವದಿಂದ ನವಜಾತ ಶಿಶು ಮೃತಪಟ್ಟಿದೆ. 
ರಾಂಚಿಯ ಚತರಾ ಜಿಲ್ಲೆಯ ಇಟಖೋರಿಯಲ್ಲಿ ಪರವಾನಿಗೆ ಪಡೆಯದೆ ಆಸ್ಪತ್ರೆ ನಡೆಸುತ್ತಿದ್ದ ಡಾ. ಅನುಜ್ ಕುಮಾರ್ಮತ್ತು ಡಾ. ಅರುಣ್ ಕುಮಾರ್ ಎಂಬ ಇಬ್ಬರು ತಮ್ಮ ತಪ್ಪನ್ನು ಮುಚ್ಚಿ ಹಾಕುವುದಕ್ಕಾಗಿ ನವಜಾತ ಶಿಶುವನ್ನೇ ಕೊಂದಿದ್ದಾರೆ. 
ಈ ಸಂಬಂಧ ವೈದ್ಯರಿಬ್ಬರ ವಿರುದ್ಧ ಇಟಖೋರಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com