ನನ್ನಂತಹ 'ಬ್ರಹ್ಮಜ್ಞಾನಿ' ಹುಡುಗಿಯರನ್ನು ಬಲಾತ್ಕಾರ ಮಾಡುವುದು ಪಾಪವಲ್ಲ: ಅಸಾರಾಂ ನಂಬಿಕೆ

16 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿರುವ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಅಸಾರಾಂ ಬಾಪು ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಲಕ್ಷಾಂತರ ಮಂದಿ ಅನುಯಾಯಿಗಳನ್ನು ಹೊಂದಿದ್ದ ಈ ವ್ಯಕ್ತಿಯ
ಅಸಾರಾಮ್ ಬಾಪು
ಅಸಾರಾಮ್ ಬಾಪು
ಜೋಧ್ ಪುರ: 16 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿರುವ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಅಸಾರಾಂ ಬಾಪು ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.  ಲಕ್ಷಾಂತರ ಮಂದಿ ಅನುಯಾಯಿಗಳನ್ನು ಹೊಂದಿದ್ದ ಈ ವ್ಯಕ್ತಿಯ ನಂಬಿಕೆಗಳನ್ನು ಕೇಳಿದರೆ ಒಂದು ಕ್ಷಣ ದಂಗಾಗುತ್ತೀರ.
ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗುವುದೂ ಅಲ್ಲದೇ, ತನ್ನಂತಹ ಬ್ರಹ್ಮಜ್ಞಾನಿ ಆ ರೀತಿ ಮಾಡುವುದು ಪಾಪವೇ ಅಲ್ಲ ಎಂದು ಅಸಾರಾಂ ಬಾಪು ನಂಬಿದ್ದನಂತೆ. ನೆನ್ನೆಯಷ್ಟೇ ಮುಗಿದ ಕೋರ್ಟ್ ವಾದದಲ್ಲಿಈ ಅಂಶ ಬೆಳಕಿಗೆ ಬಂದಿದೆ. ಕೋರ್ಟ್ ನಲ್ಲಿ ವಾದ ಮಂಡಿಸಿದ್ದ ಪ್ರಾಸಿಕ್ಯೂಷನ್ ವಕೀಲರು, ಅಸಾರಾಂ ಬಾಪು,  ಲೈಂಗಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳುವುದಕ್ಕೆ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದರು ಎಂದು ಪ್ರಾಸಿಕ್ಯೂಷನ್ ನ ಸಾಕ್ಷಿ, ಅಸಾರಾಂ ಬಾಪು ಅವರ ಆಪ್ತ ಅನುಯಾಯೂ ಆಗಿದ್ದ ರಾಹುಲ್ ಕೆ ಸಾಚರ್ ಹೇಳಿದ್ದಾರೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com