ಶೇ.99ರಷ್ಟು ಜನತೆ 'ಐಷಾರಾಮಿ' ಬುಲೆಟ್ ರೈಲಿನಲ್ಲಿ ಪ್ರಯಾಣಿಸುವುದಿಲ್ಲ: ಚಿದಂಬರಂ

ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆಗಾಗಿ 77 ಹೆಕ್ಟೇರ್ ಅರಣ್ಯ ಭೂಮಿ ಬಳಸಿಕೊಳ್ಳಲು ಅನುಮತಿ ನೀಡಿದ್ದ ಕೇಂದ್ರದ ನಿಲುವಿಗೆ ಕಾಂಗ್ರೆಸ್ ನಾಯಕ ಪಿ. ಚಿದಂಬರಂ.......
ಪಿ. ಚಿದಂಬರಂ
ಪಿ. ಚಿದಂಬರಂ
 ನವದೆಹಲಿ: ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆಗಾಗಿ  77 ಹೆಕ್ಟೇರ್ ಅರಣ್ಯ ಭೂಮಿ ಬಳಸಿಕೊಳ್ಳಲು ಅನುಮತಿ ನೀಡಿದ್ದ ಕೇಂದ್ರದ ನಿಲುವಿಗೆ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಕಿಡಿಕಾರಿದ್ದಾರೆ."ಭಾರತದ ಶೇ. 99ರಷ್ಟು ಜನ ಐಷಾರಾಮಿ ರೈಲುಗಳಲ್ಲಿ ಪ್ರಯಾಣಿಸುವುದಿಲ್ಲ" ಅವರು ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಗುರುವಾರ ಸಂಭವಿಸಿದ್ದ ಶಾಲಾ ವಾಹನ ಅಪಘಾತವನ್ನು ಉಲ್ಲೇಖಿಸಿ ಸರಣಿ ಟ್ವೀಟ್ ಂಆಡಿದ್ದ ಚಿದಂಬರಂ ಅರಣ್ಯ ಭೂಮಿಯನ್ನು ಸರ್ಕಾರಿ ಪ್ರಾಯೋಜಿತ ಯೋಜನೆಗಾಗಿ ಬಳಸಿಕೊಳ್ಳುವುದು ಎನ್‌ಡಿಎ ಸರ್ಕಾರದ ಆದ್ಯತೆಯನ್ನು ತೋರಿಸಿದೆ ಎಂದಿದ್ದಾರೆ.
"77 ಹೆಕ್ಟೇರ್ಅರಣ್ಯ ಭೂಮಿಯನ್ನು  1,08,000 ಕೋಟಿ ರೂ. ಮೊತ್ತದ ಬುಲೆಟ್ ರೈಲು ಯೋಜನೆಗೆ ಬಳಸಿಕೊಳ್ಳಲಾಗುತ್ತಿದೆ.ಉತ್ತರ ಪ್ರದೇಶದ ಅನಾಮಿಕ ರೈಲ್ವೆ ಕ್ರಾಸಿಂಗ್ ಬಳಿ ಸಂಭವಿಸಿದ ಶಾಲಾ ವಾಹನ ಅಪಘಾತದಲ್ಲಿ 3 ಮಕ್ಕಳು ಮೃತಪಟ್ಟಿದ್ದಾರೆ ಇನ್ನು ಬುಲೆಟ್ ರೈಲಿಗಾಗಿ ಮೇಲ್ಮಟ್ಟದ ಲೆವೆಲ್ ಕ್ರಾಸಿಂಗ್ ಗಳು ತಲೆ ಎತ್ತಲಿದೆ. ಇದೆಲ್ಲವೂ ಮೋದಿ ಸರ್ಕಾರದ ಆದ್ಯತೆಯನ್ನು ತೋರಿಸುತ್ತಿದೆ
"77 ಹೆಕ್ಟೇರ್ ಅರಣ್ಯ ಭೂಮಿ ನಾಶವಾಯಿತು, 13 ಮಕ್ಕಳ ಜೀವ ಹೋಯಿತು, ಲಾಭವೇನು? ಶೇ. 99 ರಷ್ಟು ಜನರು ಐಷಾರಾಮಿ ರೈಲುಗಳಲ್ಲಿ ಪ್ರಯಾಣಿಸುವುದಿಲ್ಲ"  ಅವರು ಹೇಳಿದರು.
ಮುಂಬೈ-ಅಹಮದಾಬಾದ್ ನಡುವೆ 1.08 ಲಕ್ಷ ಕೋಟಿ  ರೂ. ವೆಚ್ಚದ ಬುಲೆಟ್ ರೈಲು ಯೋಜನೆಗೆ 77 ಹೆಕ್ಟೇರ್ ಅರಣ್ಯ ಭೂಮಿಯನ್ನು ಪರಿವರ್ತಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಾತ್ವಿಕವಾಗಿ ಅನುಮತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com