ದೇಶ

ಪ್ರಧಾನಿ ಮೋದಿ ಒತ್ತಡದಲ್ಲಿರುವಂತೆ ಕಾಣಿಸುತ್ತಿದೆ: 'ಅಜೆಂಡಾ ಇಲ್ಲ'ದ ಚೀನಾ ಭೇಟಿಗೆ ರಾಹುಲ್ ವ್ಯಂಗ್ಯ

ಪ್ರಧಾನಿ ನರೇಂದ್ರ ಮೋದಿ ಅವರು ಒತ್ತಡದಲ್ಲಿರುವಂತೆ ಕಾಣಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ...

ಪ್ರಧಾನಿ ಮೋದಿ ಒತ್ತಡದಲ್ಲಿರುವಂತೆ ಕಾಣಿಸುತ್ತಿದೆ: 'ಅಜೆಂಡಾ ಇಲ್ಲ'ದ ಚೀನಾ ಭೇಟಿಗೆ ರಾಹುಲ್ ವ್ಯಂಗ್ಯ
ರಾಹುಲ್ ಗಾಂಧಿ
Published On :
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಒತ್ತಡದಲ್ಲಿರುವಂತೆ ಕಾಣಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಯಾವುದೇ 'ಅಜೆಂಡಾ ಇಲ್ಲ'ದ ಚೀನಾ ಭೇಟಿ ಬಗ್ಗೆ ಶುಕ್ರವಾರ ವ್ಯಂಗ್ಯವಾಡಿದ್ದಾರೆ.
ನಿಮ್ಮ ಚೀನಾ ಭೇಟಿಗೆ ಯಾವುದೇ ಅಂಜಂಡ ಇಲ್ಲದಿದ್ದರೂ ನಾನು ಡೋಕ್ಲಮ್ ವಿವಾದ ಮತ್ತು ಚೀನಾ - ಪಾಕಿಸ್ತಾನ ಆರ್ಥಿಕ ಕಾರಿಡಾರ್ ಬಗ್ಗೆ ನಿಮಗೆ ನೆನಪಿಸುತ್ತಿದ್ದೇನೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
'ಪ್ರಧಾನಿಗಳೇ ಚೀನಾ ಪ್ರವಾಸದಲ್ಲಿರುವ ನಿಮ್ಮನ್ನು ನಾನು ಟಿವಿಯಲ್ಲೇ ನೋಡಿದೆ. ಆದರೆ ನೀವು ಅಲ್ಲಿ ಒತ್ತಡದಲ್ಲಿರುವಂತೆ ಕಾಣಿಸುತ್ತಿದ್ದೀರಿ. ಆದರೂ ನಿಮಗೆ ಎರಡು ವಿಷಗಳನ್ನು ನೆನಪಿಸಲು ಬಯಸುತ್ತೇನೆ.  ಒಂದು ಡೋಕ್ಲಮ್ ವಿವಾದ ಮತ್ತೊಂದು ಪಿಒಕೆ ಮೂಲಕ ಹೋಗುವ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಬಗ್ಗೆ ಪ್ರಸ್ತಾಪಿಸಿ. ಭಾರತ ಈ ಎರಡು ಈ ಎರಡು ಪ್ರಮುಖ ವಿಷಗಳ ಬಗ್ಗೆ ನೀವು ಚೀನಾ ಅಧ್ಯಕ್ಷರೊಂದಿಗೆ ಮಾತನಾಡಬೇಕು ಎಂದು ಒತ್ತಾಯಿಸುತ್ತಿರುವುದಾಗಿ ರಾಹುಲ್ ಟ್ವೀಟ್ ಮಾಡಿದ್ದಾರೆ. ಅಲ್ಲದೆ ಇದಕ್ಕೆ ತಮ್ಮ ಪಕ್ಷದ ಬೆಂಬಲವೂ ಇದೆ ಎಂದು ಹೇಳಿದ್ದಾರೆ.
ಡೋಕ್ಲಮ್ ವಿವಾದದ ಬಳಿಕ ಭಾರತ - ಚೀನಾ ದ್ವಿಪಕ್ಷೀಯ ಬಾಂಧವ್ಯದಲ್ಲಿ  ಬಿರುಕು ಕಂಡುಬಂದಿತ್ತು.  ಆದರೆ ಇಂದು ಪ್ರಧಾನಿ ಮೋದಿ ಅವರು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರ ಜೊತೆ ನಡೆಸಿದ 'ಅನೌಪಚಾರಿಕ ಶೃಂಗಸಭೆ'ಯಿಂದ ಅತ್ಯಂತ ಸಕಾರಾತ್ಮಕ ವಾತಾವರಣ ಸೃಷ್ಟಿಯಾಗಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.