ಮೆಕ್ಯಾನಿಕಲ್ ಎಂಜಿನಿಯರ್‌ಗಳಲ್ಲ, ಸಿವಿಲ್ ಎಂಜಿನಿಯರ್‌ಗಳು ಉತ್ತಮ ನಿರ್ವಾಹಕರು: ತ್ರಿಪುರಾ ಸಿಎಂ ಬಿಪ್ಲಾಬ್ ದೇವ್

ಮಹಾಭಾರತ ಕಾಲದಲ್ಲಿಯೇ ಇಂಟರ್ ನೆಟ್ ಇತ್ತು ಎಂದು ಹೇಳಿ ಭಾರಿ ಟ್ರೋಲ್ ಗೆ ಗುರಿಯಾಗಿದ್ದ ತ್ರಿಪುರ ಮುಖ್ಯಮುಂತ್ರಿ ಬಿಪ್ಲವ್ ಕುಮಾರ್ ದೇವ್ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ...
ಬಿಪ್ಲವ್ ದೇವ್
ಬಿಪ್ಲವ್ ದೇವ್
ಗುವಾಹಟಿ(ತ್ರಿಪುರಾ): ಮಹಾಭಾರತ ಕಾಲದಲ್ಲಿಯೇ ಇಂಟರ್ ನೆಟ್ ಇತ್ತು ಎಂದು ಹೇಳಿ ಭಾರಿ ಟ್ರೋಲ್ ಗೆ ಗುರಿಯಾಗಿದ್ದ ತ್ರಿಪುರ ಮುಖ್ಯಮುಂತ್ರಿ ಬಿಪ್ಲವ್ ಕುಮಾರ್ ದೇವ್ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 
ಮೆಕ್ಯಾನಿಕಲ್ ಎಂಜಿನಿಯರ್‌ಗಳಿಗಿಂತ ಸಿವಿಲ್ ಎಂಜಿನಿಯರ್‌ಗಳು ಉತ್ತಮ ನಿರ್ವಾಹಕರು ಎಂದು ಬಿಪ್ಲವ್ ಕುಮಾರ್ ದೇವ್ ಹೇಳಿದ್ದಾರೆ. 
ಕಲಾ ವಿಭಾಗದಿಂದ ಬಂದಿರುವ ಜನರು ಸೇವಾ ಪರೀಕ್ಷೆಗಳನ್ನು ಬರೆದು ಐಎಎಸ್, ಐಎಫ್ಎಸ್, ಐಪಿಎಸ್ ಮತ್ತು ಸಹಾಯಕ ಸೇವಾ ಅಧಿಕಾರಿಗಳಾಗಿದ್ದಾರೆ. ನಂತರ ವೈದ್ಯರು ಮತ್ತು ಎಂಜಿನಿಯರ್ ಗಳು ಕೂಡ ಪರೀಕ್ಷೆಗಳನ್ನು ನೀಡಲಾರಂಭಿಸಿದರು ಎಂದು ಹೇಳಿದ್ದಾರೆ. 
ಮೆಕ್ಯಾನಿಕಲ್ ಎಂಜಿನಿಯರ್ ಗಳು ಸೇವಾ ಪರೀಕ್ಷೆಗಳನ್ನು ತೆಗೆದುಕೊಳ್ಳಬಾರದು. ಸಿವಿಲ್ ಇಂಜಿನಿಯರ್ ಗಳು ಕಟ್ಟಡ ನಿರ್ಮಾಣದಲ್ಲಿನ ದೋಷಗಳನ್ನು ಕಂಡುಹಿಡಿಯಬಹುದು. ವ್ಯಕ್ತಿಯು ಸಿವಿಲ್ ಎಂಜಿನಿಯರಿಂಗ್ ಅನುಭವವನ್ನು ಪಡೆದಿದ್ದರೆ ಅವನು ಅಥವಾ ಅವಳು ಆಡಳಿತದಲ್ಲಿರುವ ಜನರನ್ನು ನಿರ್ಮಿಸಬಹುದು. ಸಿವಿಲ್ ಇಂಜಿನಿಯರ್ ಗಳು ಸಮಾಜವನ್ನು ನಿರ್ಮಿಸಲು ಜ್ಞಾನವನ್ನು ಪಡೆದವರು ಎಂದು ಬಿಪ್ಲವ್ ದೇವ್ ಅವರು ಅಗರ್ತಲಾದಲ್ಲಿ ನಡೆದ ನಾಗರಿಕಾ ಸೇವೆ ದಿನದಲ್ಲಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com