ಛತ್ತೀಸ್ ಗಡ: ಭದ್ರತಾ ಪಡೆಗಳು ನಡೆಸಿದ ಎನ್ ಕೌಂಟರ್ ನಲ್ಲಿ ಮಹಿಳಾ ನಕ್ಸಲ್ ಹತ್ಯೆ

ಛತ್ತೀಸ್ ಗಡದ ಸುಕ್ಮಾ ಜಿಲ್ಲೆಯಲ್ಲಿ ಇಂದು ಬೆಳಿಗ್ಗೆ ನಕ್ಸಲೀಯರು ಹಾಗೂ ಭದ್ರತಾ ಪಡೆಗಳು ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ನಕ್ಸಲ್ ಗುಂಪಿನಲ್ಲಿದ್ದ ಮಹಿಳೆಯೊಬ್ಬರ ಹತ್ಯೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬುರ್ಕಾಪಾಲ್: ಛತ್ತೀಸ್ ಗಡದ  ಸುಕ್ಮಾ ಜಿಲ್ಲೆಯಲ್ಲಿ ಇಂದು ಬೆಳಿಗ್ಗೆ ನಕ್ಸಲೀಯರು ಹಾಗೂ ಭದ್ರತಾ ಪಡೆಗಳು ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ನಕ್ಸಲ್ ಗುಂಪಿನಲ್ಲಿದ್ದ ಮಹಿಳೆಯೊಬ್ಬರ ಹತ್ಯೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುಕ್ಮಾ ಜಿಲ್ಲೆಯ ಬುರ್ಕಾಪಾಲ್ ಅರಣ್ಯ ಪ್ರದೇಶದಲ್ಲಿ ಇಂದು  ನಕ್ಸಲೀಯರು  ಪ್ರತ್ಯಕ್ಷರಾಗಿದ್ದು, ಕಾರ್ಯಾಚರಣೆ ಇನ್ನೂ ಮುಂದುವರೆದಿದ್ದು, ಆರು ಮಂದಿ ನಕ್ಸಲೀಯರ ಗುಂಪಿನಲ್ಲಿ ಒಬ್ಬರು ಹತರಾಗಿದ್ದಾರೆ  ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ರಾಜಧಾನಿ ರಾಯಪುರದಿಂದ 400 ಕಿಲೋ ಮೀಟರ್ ದೂರದಲ್ಲಿ ಈ ಅರಣ್ಯ ಪ್ರದೇಶವಿದ್ದು, ಜಿಲ್ಲಾ ಮೀಸಲು ಗಾರ್ಡ್, ವಿಶೇಷ ಕಾರ್ಯ ಪಡೆ ಹಾಗೂ ಸಿಆರ್ ಪಿಎಫ್ ತಂಡಗಳು ಪ್ರತ್ಯೇಕವಾಗಿ ಕೆಲ ದಿನಗಳಿಂದಲೂ  ಕೊಬಿಂಗ್ ಕಾರ್ಯಾಚರಣೆ  ನಡೆಸುತ್ತಿರುವುದಾಗಿ ಅವರು ತಿಳಿಸಿದ್ದಾರೆ.

 ಬೆಳಿಗ್ಗೆ ವಿಶೇಷ ಕಾರ್ಯಪಡೆ ಹಾಗೂ ಡಿಆರ್ ಜಿ ಸಿಬ್ಬಂದಿ ಬುರ್ಕಾಪಾಲ್ ನಲ್ಲಿ ಜಂಟಿ  ಕಾರ್ಯಾಚರಣೆ ನಡೆಸಿ ನಕ್ಸಲ್ ಗುಂಪಿನ ಮಹಿಳೆಯೊಬ್ಬರನ್ನು ಹತ್ಯೆಗೈಯುವಲ್ಲಿ ಯಶಸ್ವಿಯಾಗಿದೆ ಎಂದು ಅವರು ಹೇಳಿದ್ದಾರೆ.

ನಕ್ಸಲ್ ಮಹಿಳೆಯ ಮೃತದೇಹವನ್ನು ವಶಕ್ಕೆ ಪಡೆಯಲಾಗಿದ್ದು, ಹೆಚ್ಚಿನ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ. ಗುಂಡಿನ ದಾಳಿ ಕಾರ್ಯಾಚರಣೆಯನ್ನು ಆಗ್ಗಾಗೇ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com